ಘೋಟ್ನೇಕರ್ ಗೆಲುವು ನಿಶ್ಚಿತ:ದೇಶಪಾಂಡೆ

0
17
loading...

13 SDP 1ಸಿದ್ದಾಪುರ,14: ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರು,ಕಾರ್ಯಕರ್ತರು ಒಟ್ಟಾಗಿ ಕೆಲಸ ಪ್ರಾರಂಭಿಸಿದ್ದು ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಎಸ್.ಎಲ್ ಘೋಟ್ನೇಕರ್ ಅವರ ಗೆಲುವು ನಿಶ್ಚಿತವಾಗಿದೆ ಎಂದು ಸಚಿವ ದೇಶಪಾಂಡೆ ಹೇಳಿದ್ದಾರೆ. ಅವರು ಪಟ್ಟಣದ ಶಂಕರಮಠದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದರು.
ನಂತರ ಮಾತನಾಡಿದ ಅವರು ಜಿಲ್ಲೆಯಲ್ಲಿ ನಗರಸಭೆ,ಜಿ.ಪಂ ,ಗ್ರಾ.ಪಂ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೇಸಿಗೆ ಬಹುಮತವಿದೆ.ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕೆಲಸ ಅತ್ಯಂತ ಚುರುಕಾಗಿ ನಡೆಯುತ್ತಿದೆ.ಕಾಂಗ್ರೇಸ್ ಅಭ್ಯರ್ಥಿಯು ಪ್ರಚಂಡ ಬಹುಮತದಿಂದ ಗೆಲ್ಲುತ್ತಾರೆ ಎಂದರು.
ವಿಕೇಂದ್ರಿಕರಣ ವ್ಯವಸ್ಥೆಯನ್ನು ಬಲಗೊಳಿಸುವದು ಕೇವಲ ಕಾಂಗ್ರೇಸ್‍ನಿಂದ ಮಾತ್ರ ಸಾಧ್ಯ.ಪಂಚಾಯತ ರಾಜ್ ವ್ಯವಸ್ಥೆಯನ್ನು ಬಲಗೊಳಿಸಲು ಪಂಚಾಯತ ರಾಜ್ ಮಸೂದೆಗೆ ತಿದ್ದುಪಡಿಯನ್ನು ತರಲಾಗಿದೆ. ಮಹಿಳೆಯರಿಗೆ,ದುರ್ಬಲ ವರ್ಗದವರಿಗೆ,ಹಿಂದುಳಿದ ಜನಾಂಗಕ್ಕೆ ದಲಿತರಿಗೆ ಮೀಸಲಾತಿಯನ್ನು ನೀಡಿದ್ದು ಕಾಂಗ್ರೇಸ್ ಪಕ್ಷ. ಕಾಂಗ್ರೇಸ್ ಅಭ್ಯರ್ಥಿಗಳು ಆಯ್ಕೆಯಾದಾಗ ಮಾತ್ರ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಲು ಸಾಧ್ಯ.ಇದೆಲ್ಲದರ ತಿಳುವಳಿಕೆ ಪಂಚಾಯತ ಪ್ರತಿನಿಧಿಗಳಿಗಿದೆ ಆದ್ದರಿಂದ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ನಿಶ್ಚಿತವಾಗಿದೆ ಎಂದರು.
ನಂತರ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಪಕ್ಷದ ಜಿಲ್ಲಾಧ್ಯಕ್ಷರು,ಶಾಸಕರು,ಮಾಜಿ ಶಾಸಕರು,ಪಕ್ಷದ ಮುಖಂಡರೆಲ್ಲರ ಜೊತೆ ಚರ್ಚಿಸಿ ಅಭ್ಯರ್ಥಿ ಆಯ್ಕೆ ಮಾಡಲಾಗಿದೆ. ಈ ಚುನಾವಣೆಯಲಿ ್ಲ   ಬಂಡಾಯದ ಪರಿಣಾಮವಾಗುವದಿಲ್ಲ .ನಮ್ಮ ಅಭ್ಯರ್ಥಿಗೆ ಪ್ರತಿಸ್ಪರ್ಧಿಯಿಲ್ಲ ಅವರು ಗೆದ್ದಾಗಿದೆ.ಕಾಂಗ್ರೇಸ್ ಜಾತಿ ಮೇಲೆ ರಾಜಕಾರಣ ಮಾಡುವದಿಲ್ಲ,ಎಲ್ಲಾ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಲಾಗಿದೆ.ಎಂದರು
ಸುದ್ದಿಗೋಷ್ಠಿಯಲ್ಲಿ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಎಂಎಲ್ಸಿ ಅಭ್ಯರ್ಥಿ ಘೋಟ್ನೆಕರ್ ,ಕಾಂಗ್ರೆಸ್ ಪ್ರಮುಖರಾದ  ಶಾಂತರಾಮ ಹೆಗಡೆ, ಷಣ್ಮುಖ ಗೌಡರ್,ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here