ಚಿನ್ನದ ಹುಡುಗಿಗೆ ಸನ್ಮಾನ

0
19
loading...

ಖಾನಾಪುರ 28: ರಾಜ್ಯ ಕಾನೂನು ವಿಶ್ವವಿದ್ಯಾಲಯದ ವತಿಯಿಂದ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಏರ್ಪಡಿಸಿದ್ದ ಘಟಿಕೋತ್ಸವದಲ್ಲಿ ಕಾನೂನು ಪದವಿಯಲ್ಲಿ ಚಿನ್ನದ ಪದಕ ಪಡೆದ ಪಟ್ಟಣದ ಎಸ್,ಬಿ.ಐ ಶಾಖೆಯ ನಿವೃತ್ತ ಅಧಿಕಾರಿ ಜಯಪ್ರಕಾಶ ಬಾಳಕಟ್ಟಿ ಪುತ್ರಿ ಮೇಘನಾ ಬಾಳಕಟ್ಟಿ ಅವರನ್ನು ಮಕರಂದ ಸಾಮಾಜಿಕ ಸಂಘಟನೆಯ ವತಿಯಿಂದ ಆತ್ಮೀಯವಬಾಗಿ ಸತ್ಕರಿಸಲಾಯಿತು.
ಪಟ್ಟಣದ ಶಿವಸ್ಮಾರಕ ಸಭಾಗೃಹದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಎಸ್.ಬಿ.ಐ ಖಾನಾಪುರ ಶಾಖೆಯ ಮುಖ್ಯ ವ್ಯವಸ್ಥಾಪಕ ಆನಂದ ಗಂಗೂರ ಉದ್ಘಾಟಿಸಿದರು. ಸಾಧನೆಗೈದ ಮೇಘನಾ ಮತ್ತು ಅವರ ಪಾಲಕರನ್ನು ನಿವೃತ್ತ ಪ್ರಾಧ್ಯಾಪಕ ಎಸ್ ಜಿ ಚಿಕ್ಕನಗೌಡರ, ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಆನಂದ ಬಿಂಗೆ, ನಿವೃತ್ತ ಮುಖ್ಯಾಧ್ಯಾಪಕಿ ಸೋನುತಾಯಿ ಕಟ್ಟಿಮನಿ, ಶಿಕ್ಷಣ ಅಧಿಕಾರಿ ಪ್ರಕಾಶ ಹೊಸಮನಿ, ಖಾನಾಪುರ ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಸದಸ್ಯರಾದ ರವೀಂದ್ರ ಹೆಬ್ಬಾಳಕರ, ಮಹಾಂತೇಶ ಕೋಡೊಳಿ, ವಿರುಪಾಕ್ಷ ಗಡಾದ, ವಿಶ್ವನಾಥ ಸವದಿ, ಅವರೊಳ್ಳಿ ಶಾಲೆಯ ಮುಖ್ಯಾಧ್ಯಾಪಕಿ ಪ್ರಭಾವತಿ ಕುಲಕರ್ಣಿ ಹಾಗೂ ಇತರರು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮೇಘನಾ, ತಂದೆ ತಾಯಿಗಳ ಪ್ರೋತ್ಸಾಹ, ಕಠಿಣ ಪರಿಶ್ರಮ ಮತ್ತು ಬೆಳಗಾವಿಯ ರಾಜಾಲಖಮನಗೌಡ ಕಾನೂನು ಕಾಲೇಜು ಪ್ರಾಧ್ಯಾಪಕರ ಸಹಕಾರದಿಂದ ತಾವು ಕಾನೂನು ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಗಳಿಸಲು ಸಾಧ್ಯವಾಯಿತು. ಭವಿಷ್ಯದಲ್ಲಿ ಉತ್ತಮ ಕಾನೂನು ಸಲಹೆಗಾರ್ತಿಯಾಗಿ, ನ್ಯಾಯಾಲಯದ ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸುವ ಉದ್ದೇಶ ಹೊಂದಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮಕರಂದ ಸಂಘಟನೆಯ ಪದಾಧಿಕಾರಿಗಳು, ಚುಟುಕು ಸಾಹಿತ್ಯ ಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು. ಮಹಾಂತೇಶ ರಾಹುತ ಸ್ವಾಗತಿಸಿದರು. ಶಂಕರ ಕಮ್ಮಾರ ನಿರೂಪಿಸಿದರು. ಗಿರೀಶ ಕುರಹಟ್ಟಿ ವಂದಿಸಿದರು.

loading...

LEAVE A REPLY

Please enter your comment!
Please enter your name here