ಜನಪ್ರತಿನಿಧಿಗಳಿಗೆ ಗ್ರಾಮದಲ್ಲಿ ಪ್ರಚಾರ ನಡೆಸದಂತೆ ಪ್ರತಿಭಟಣೆ: ಹೂಗಾರ

0
23
loading...

10 NRD-1ನರಗುಂದ,10:  ರೈತರು ಇನ್ನು ಮುಂದೆ ಪರಿಣಾಮಕಾರಿಯಾದ ಹೋರಾಟ ಮಹದಾಯಿ ನದಿ ಜೋಡಣೆ ಬೇಡಿಕೆ ಮುಂದಿಟ್ಟು ನಡೆಸಲಿದ್ದಾರೆ. ವಿಧಾನ ಪರಿಷತ್ ಚುನಾವಣೆಗಳು ಸಮೀಪದಲ್ಲಿರುವುದರಿಂದ ವಿವಿಧ ರಾಜಕೀಯ ಪಕ್ಷಗಳು ಚುನಾವಣೆ ಪ್ರಚಾರಕ್ಕೆ ಆಗಮಿಸುತಿದ್ದು ರೈತರು ಮತದಾನ ಬಹಿಷ್ಕರಿಸುವ ಹಾಗೂ ಜನಪ್ರತಿನಿಧಿಗಳಿಗೆ ಗ್ರಾಮದಲ್ಲಿ ಪ್ರಚಾರ ನಡೆಸದಂತೆ ಪ್ರತಿಭಟಣೆ ನಡೆಸುವ ಕಾರ್ಯಕ್ರಮ ಹಾಕಿಕೊಳ್ಳಲು ನಿರ್ಧರಿಸಿದ್ದಾರೆಂದು ಮಹದಾಯಿ ಮಲಪ್ರಭೆ ನದಿ ಜೋಡಣಾ ಹೋರಾಟ ಸಮಿತಿ ತಾಲೂಕ ಘಟಕದ ಅಧ್ಯಕ್ಷ ಈರಬಸಪ್ಪ ಹೂಗಾರ ಇಂದಿಲ್ಲಿ ತಿಳಿಸಿದರು.

ಮಹದಾಯಿ ಮಲಪ್ರಭೆ ನದಿ ಜೋಡಣೆಗೆ ಆಗ್ರಹಿಸಿ ನರಗುಂದದಲ್ಲಿ ರೈತರು ನಡೆಸಿದ ಧರಣಿ  ಗುರುವಾರ 148 ನೇ ದಿನಕ್ಕೆ ಕಾಲಿರಿಸಿದ್ದು ಸಭೆಯಲ್ಲಿ ಮಾತನಾಡಿದ ಅವರು, ಗೋವಾ ಸರ್ಕಾರದ ನೀರಾವರಿ ಸಚಿವ ಮಾಂಜ್ರೆಕರ್ ಕರ್ನಾಟಕ ಮಹದಾಯಿ ಕಳಸಾ ನೀರಿನ ವಿಷಯದ ಮೇಲೆ ಗೋವಾ ಸರ್ಕಾರದ ವಿರುದ್ದ ಅನೇಕ ದೋಷಾರೋಪ ಮಾಡುತ್ತಿರುವುದು ಸರಿಯಲ್ಲ. ಪರಿಸರ ರಕ್ಷಣೆ ಹಾಳಾಗಲಿದೆ ಎಂದು ಗೋವಾ, ಮಹದಾಯಿ ಕಳಸಾ ಬಂಡೂರಿ ನೀರಿನ ವಿಷಯ ಕುರಿತು  ಈಗಾಗಲೇ ತಿಳಿಸಿ ನ್ಯಾಯಮಂಡಳಿಗೆ ಈ ಹಿಂದೆಯೇ  ಅರ್ಜಿ ಸಲ್ಲಿಸಿದ್ದು ಇದೆ. ಕರ್ನಾಟಕ ಸರ್ಕಾರದ ಹೇಳಿಕೆಗಳನ್ನು ನಾವು ಬೆಂಬಲಿಸುವುದಿಲ್ಲ.

ಈ ಕುರಿತು ಕೇಂದ್ರಕ್ಕೆ ಹಾಗೂ  ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದು ತಿಳಿಸಲಾಗುವುದು. ಪದೇ,ಪದೇ ಮಹದಾಯಿ ನೀರಿನ ವಿಷಯ ತಾರಕ್ಕಕ್ಕೇರಿಸಿ  ಕರ್ನಾಟಕ ಸರ್ಕಾರ ಈ ರೀತಿ ವರ್ತಿಸುವುದು ಸರಿಯಲ್ಲ. ಪರಿಸರ ರಕ್ಷಣೆಗೆ ಗೋವಾ ಸಕಾರ ಮೊದಲು ಆಧ್ಯತೆ ನೀಡುತ್ತದೆ ಎಂದು ತಿಳಿಸಿಸಿದ್ದಾರೆ.  ಕುಡಿಯುವ ನೀರಿನ ಮಹತ್ವಕ್ಕೆ ಮೊದಲು ಆಧ್ಯತೆ ನೀಡುವ ಕುರಿತು  ಗೋವಾ ಸರ್ಕಾರ  ಇದನ್ನು ಮರೆತು ಪರಿಸರದ ನೆಪ ಇಟ್ಟುಕೊಂಡು ಗೋವಾದಲ್ಲಿ ಮಹದಾಯಿ ನೀರಿನ ಲಭ್ಯತೆಯಿಂದ ಮೀನುಗಾರಿಕೆ ಮಾಡುತ್ತಿದೆ.

ಇದು ಕರ್ನಾಟಕ ರೈತರಿಗೆ ಗೊತ್ತಾಗುವುದಿಲ್ಲವೆಂದು ಭಾವಿಸಿದ್ದರೆ ಅದು ತಪ್ಪೆಂದು ಹೂಗಾರ ಈ ಸಂದರ್ಭದಲ್ಲಿ ಗೋವಾ ಸರ್ಕಾರದ ರಾಜಕೀಯ ನೀತಿಗಳ ವಿರುದ್ದ ಕಿಡಿಕಾರಿದರು.
ಶ್ರೀಶೈಲ ಮೇಟಿ ಮಾತನಾಡಿ,  ಕೇಂದ್ರ ಮತ್ತು ರಾಜ್ಯ ಸರ್ಕಾರ ವಿವಿಧ ಯೋಜನೆಗಳಗೆ ವಿನಾಕಾರಣ ಅನುದಾನ  ವೆಚ್ಚಮಾಡುತ್ತಿದೆ. ಮಹದಾಯಿ ನದಿ ನೀರಿನ ಯೋಜನೆ ಜಾರಿಗೆ ತಂದು ಇದೇ ವೆಚ್ಚದಲ್ಲಿ ಮಹದಾಯಿ ಹಾಗೂ ಕಳಸಾ ಬಂಡೂರಿ ನದಿ ಜೋಡಣೆ ಮಾಡಬಹುದು.

ಆದರೆ ರಾಜಕೀಯ ಲಾಭಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ನದಿ ನೀರಿನ ವಿಷಯ ಜೀವಂತವಿಟ್ಟು ರೈತರನ್ನು ಯಾಮಾರಿಸುವ ಕೆಲಸ ಮಾಡುವುದು ಸರಿಯಲ್ಲ. ಬಿಜೆಪಿ ಆಡಳಿತದ ಕೇಂದ್ರ  ಸರ್ಕಾರದಲ್ಲಿಯ ಸಚಿವ ಅನಂತಕುಮಾರ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಲ್ಹಾದ ಜೋಶಿ ಮತ್ತು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ಮಹದಾಯಿ ನೀರಿನ ವಿಷಯವಾಗಿ ಕೆಲ ದಿನಗಳಲ್ಲಿ ಈ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದ್ದರು.

ಆದರೆ ಇವರೆಲ್ಲ ಈಗ  ವಿಧಾನ ಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಶ್ರಮಿಸುತಿದ್ದಾರೆ. ಸೋನಿಯಾ ಗಾಂಧಿ 2007 ರ ಗೋವಾದ ಮಡಗಾಂವದಲ್ಲಿ  ವಿಧಾನಸಭೆ ಉಪ ಚುನಾವಣೆ ಭಾಷಣ ಸಂದರ್ಭದಲ್ಲಿ  ಮಹದಾಯಿ,ಕಳಸಾ ನದಿ ನೀರನ್ನು ಕರ್ನಾಟಕ್ಕೆ ಒದಗಿಸಲು ತಾವು ಸಿದ್ದರಿಲ್ಲವೆಂದು ತಿಳಿಸಿದ್ದರು. ಇದರ ಜೊತೆಗೆ 2014 ಎಪ್ರಿಲ್‍ದಲ್ಲಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಕಳಸಾ ಬಂಡೂರಿ ಯೋಜನೆ ಜಾರಿಗೊಳಿಸಲು ತಾವು ಸಿದ್ದರಿಲ್ಲವೆಂದು ಗೋವಾಕ್ಕೆ ಪತ್ರ ಬರೆದು ನೀಡಿದ್ದಾರೆ. ಇದೆಲ್ಲ ಸಂಗತಿಗಳಿದ್ದರೂ ವಿನಾಕಾರಣ ರೈತರಿಗೆ ನದಿ ನೀರಿನ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಭರವಸೆ ನೀಡುತ್ತಿದ್ದಾರೆಂದು ಅವರು ಸಿಡಿಮಿಡಿಗೊಂಡರು.

ಧರಣಿಯಲ್ಲಿ ಮಹೇಶ್ವರಯ್ಯ ಸುರೇಬಾನ, ವಿಠಲ ಜಾಧವ, ರಾಜೇಶ್ವರಿ ವೀರನಗೌಡ್ರ ಮಾತನಾಡಿದರು. ಧರಣಿಯಲ್ಲಿ ಪರಶುರಾಮ ಜಂಬಗಿ, ಉಡಚಪ್ಪ ದಂಡಾಪೂರ, ಪಂಚಪ್ಪ ಬೆಳವಟಗಿ, ಎಸ್.ಬಿ. ಜೋಗಣ್ಣವರ, ರುದ್ರಯ್ಯ ಕುರವತ್ತಿಮಠ, ಯಲ್ಲಪ್ಪ ಸಾಭಳೆ, ರಾಮು ಸಾಬಳೆ, ಅರ್ಜುನ ಮಾನೆ, ಹನುಮಂತ ಸರನಾಯ್ಕರ್, ಎಸ್.ಕೆ. ಗಿರಿಯಣ್ಣವರ,  ಶಿವಾನಂದ ಹಳಕಟ್ಟಿ, ಪುಂಡಲೀಕಪ್ಪ ಯಾದವ, ಬಸುರಾಜ ಪವಾರ, ವಿಠಲ ಸೊಪ್ಪಿನ, ಕಾಡಪ್ಪ ಕಾಕನೂರ, ಸೋಮಲಿಂಗಪ್ಪ ಆಯಟ್ಟಿ, ಬಸಲಿಂಗಪ್ಪ ಹುಲಗಣ್ಣವರ, ಶರಣಪ್ಪ ಪೂಜಾರ, ಚನ್ನಪ್ಪಗೌಡ ಪಾಟೀಲ, ಮಹದೇವಪ್ಪ ಹಟ್ಟಿ, ಎಂ.ಎಂ. ನಂದಿ, ವಿರುಪಾಕ್ಪ ಪಾರಣ್ಣವರ, ಯಲ್ಲಪ್ಪ ಗುಡದರಿ, ಭೀಮಪ್ಪ ಮೊರಬದ, ಈರಪ್ಪ ತಿಗಡಿ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here