ಜಿಲ್ಲಾ ಮಟ್ಟದ ಕರ್ನಾಟಕ ರಕ್ಷಣಾ ವೇದಿಕೆ ಸಭೆ

0
25
loading...

08 joida newsಜೋಯಿಡಾ, 08: ಜೋಯಿಡಾದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡರ ಬಣ) ಸಭೆಯಲ್ಲಿ  ಜಿಲ್ಲಾಧ್ಯಕ್ಷರಾದ ಭಾಸ್ಕರ ಪಟಗಾರರವರು ಸೂರಜ ಹಿರೇಗೌಡರನ್ನು ಕ.ರ.ವೇ ನೂತನ ಜೋಯಿಡಾ ತಾಲೂಕಾ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು.

ಅವರು ನೂತನವಾಗಿ ಆಯ್ಕೆಯಾದ ಅಧ್ಯಕ್ಷರು, ಪದಾಧಿಕಾರಿಗಳು, ಕ.ರ.ವೇ ಸಿದ್ದಾಂತ, ತತ್ವಗಳಿಗೆ ಒಳಪಟ್ಟು ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ. ಕ.ರ.ವೇ. ಇಂದು ರಾಜ್ಯದಲ್ಲಿ 63 ಲಕ್ಷ ಕಾರ್ಯಕರ್ತರನ್ನು ಹೊಂದಿರುವಂಥಹ ಒಂದು ಬೃಹತ್ ಸಂಘಟನೆಯಾಗಿದೆ. ಕನ್ನಡವನ್ನು ಉಳಿಸಿ ಬೆಳೆಸುವಂತಹ ಕಾರ್ಯ ನಿತ್ಯ ಮತ್ತು ನಿರಂತರವಾಗಿರುತ್ತೆ ಎಂದರು.

ಈ ಸಂದರ್ಭದಲ್ಲಿ ಕ.ರ.ವೇ ಜಿಲ್ಲಾ ಉಪಾಧ್ಯಕ್ಷರಾದ ಅರುಣ ಹರ್ಕಡೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ವಿನಾಯಕ ನಾಯಕ, ತಾಲೂಕಿನ ಕ.ರ.ವೇ ಕಾರ್ಯಕರ್ತರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here