ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿಯಲ್ಲಿ ಪ್ರಥಮ

0
17
loading...

2joida 1ಜೋಯಿಡಾ,3: ಸಿದ್ಧಾಪುರದಲ್ಲಿ ನಡೆದ 2015-16 ನೇ ಸಾಲಿನ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂದಿಗದ್ದೆ ತಾಲೂಕು ಜೋಯಿಡಾದ ವಿಧ್ಯಾರ್ಥಿನಿಯರು ಪ್ರಾಥಮಿಕ ಹಿರಿಯರ ವಿಭಾಗದ ಜಾನಪದ ನೃತ್ಯ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿರುತ್ತದೆ.

ಅದಲ್ಲದೇ ಇದೆ ಶಾಲೆಯ ವಿಧ್ಯಾರ್ಥಿನಿ ಮಾನ್ಯಾ ಬಾಂದೇಕರ್ ಇವಳು ಯೋಗಾಸನದಲ್ಲಿ ತೃತೀಯ ಸ್ಥಾನವನ್ನು ಪಡೆದು ಶಾಲೆಯ ಹಾಗೂ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿರುತ್ತಾರೆ. ಮಕ್ಕಳ ಈ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಸಂತಕುಮಾರ್ ಬಿ.ಸಿ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಕಾರ್ಯದರ್ಶಿಗಳೂ ಹಾಗೂ ಶಾಲೆಯ ಮುಖ್ಯಾಪಾಧ್ಯಾಪಕರಾದ ಶ್ರೀ ಜನಾರ್ಧನ ಹೆಗಡೆ, ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರೀ ರವಿ ಆಳ್ಕೆ, ಮತ್ತು ಸದಸ್ಯರು, ಶಾಲೆಯ ಎಲ್ಲ ಶಿಕ್ಷಕರು ಮತ್ತು ಪಾಲಕರು ಅಭಿನಂದನೆ ಸಲ್ಲಿಸಿ ಮಕ್ಕಳ ಯಶಸ್ವಿಗೆ ಶುಭ ಹಾರೈಸಿರುತ್ತಾರೆ.

loading...

LEAVE A REPLY

Please enter your comment!
Please enter your name here