ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ

0
13
loading...

ಮುಂಡರಗಿ: ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿದ್ದ 2015-16 ನೇ ಸಾಲಿನ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸ್ಥಳಿಯ ಜ.ಅನ್ನದಾನೀಶ್ವರ ವಿದ್ಯಾ ಸಮಿತಿಯ ಎಂ.ಎಸ್.ಡಂಬಳ ಹೆಣ್ಣುಮಕ್ಕಳ ಪ್ರೌಢಶಾಲೆಯ ವಿದ್ಯಾರ್ಥಿನಿ ಕು.ಮಂದಾರ ವಾಸ್ಟರ್ ‘ಕಾರ್ಖಾನೆಗಳ ವಾಯು ಮಾಲಿನ್ಯ ನಿಯಂತ್ರಣ ಚಿಲುಮೆ’ ಮಾದರಿಯನ್ನು ಪ್ರದರ್ಶಿಸಿ ದ್ವೀತಿಯ ಸ್ಥಾನ ಪಡೆದಿದ್ದಾಳೆ.
ವಿದ್ಯಾರ್ಥಿನಿಯನ್ನು ಹಾಗೂ ಮಾರ್ಗದರ್ಶನ ನೀಡಿದ ಶಿಕ್ಷಕ ಎಸ್.ಎಸ್.ಇನಾಮತಿ ಇವರನ್ನು ಜ.ನಾಡೋಜ.ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ಆಶೀರ್ವದಿಸಿದ್ದು ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ.ಎಂ.ಬಿ.ಬೆಳವಟಗಿಮಠ, ಚೇರಮನ್ನರಾದ ಎಸ್.ಬಿ.ಬಾರಿಕಾಯಿ ಹಾಗೂ ಮುಖ್ಯೋಪಾಧ್ಯಾಯರಾದ ಬಿ.ಕೆ.ಪಾಟೀಲ ಸೇರಿದಂತೆ ಎಲ್ಲ ಶಿಕ್ಷಕ ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ.

loading...

LEAVE A REPLY

Please enter your comment!
Please enter your name here