ಜಿಲ್ಲೆಯಲ್ಲಿ ನಮಗೆ ಬಿಜೆಪಿ ಅಭ್ಯರ್ಥಿ ನೇರ ಸ್ಪರ್ಧಿಯಾಗಬಹುದೇ ವಿನ:, ಕಾಂಗ್ರೆಸ್ ಅಲ್ಲ: ರವಿಕುಮಾರ

0
27
loading...

14mnd1pಮುಂಡಗೋಡ,14: ಜಿಲ್ಲೆಯಲ್ಲಿ ನಮಗೆ ಬಿಜೆಪಿ ಅಭ್ಯರ್ಥಿ ನೇರ ಸ್ಪರ್ಧಿಯಾಗಬಹುದು ವಿನಹ ಕಾಂಗ್ರೆಸ ಅಲ್ಲ. ಕಾಂಗ್ರೆಸ ಈಗ ಒಡೆದ ಮನೆಯಾಗಿದ್ದು, ಅವರನ್ನು ಸೋಲಿಸಲು ಅವರ ಪಕ್ಷದವರೆ ಸಾಕು ಎಂದು ವಿಧಾನಪರಿಷತ್ ಚುನಾವಣೆ ಜೆ.ಡಿ.ಎಸ್ ಅಭ್ಯರ್ಥಿ ಡಿ. ರವಿಕುಮಾರ ಹೇಳಿದರು.

ಅವರು ಸೋಮವಾರ ಇಲ್ಲಿಯ ಖಾಸಗಿ ಹೋಟೆಲ್‍ವೊಂದರಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದರು. ಹಿಂದಿನ ಲೋಕಸಭಾ ಚುನಾವಣೆಯಲ್ಲಿ 5 ಜನ ಶಾಸಕರನ್ನಿಟ್ಟುಕೊಂಡು ತಮ್ಮ ಸ್ವಂತ ಮಗನನ್ನು ಗೆಲ್ಲಿಸಲಾಗದ ಆರ್.ವಿ ದೇಶಪಾಂಡೆಯವರು ವಿರೋದಿ ಅಲೆ ಹೊತ್ತುಕೊಂಡು ಘೋಟ್ನೇಕರ ಅವರನ್ನು ಗೆಲ್ಲಿಸಲು ಹೇಗೆ ಸಾದ್ಯ ಎಂದು ಪ್ರಶ್ನಿಸಿದರು. ಜಿಲ್ಲೆಯ ಜೋಯಿಡಾ, ಹಳಿಯಾಳ ಸೇರಿದಂತೆ ಕೆಲ ಭಾಗದ ಪರಿಸ್ಥಿತಿ ನೋಡಿದರೆ ತೀವ್ರ ಚಿಂತಾಜನಕವಾಗಿದೆ.

ಹಳೆಯ ಬಿಹಾರದ ಸಂಸ್ಕøತಿ ಹಳಿಯಾಳ, ಜೋಯಿಡಾದಲ್ಲಿ ತಾಂಡವಾಡುತ್ತಿದೆ. ಹಲವಾರು ವರ್ಷಗಳಿಂದ ಜಿಲ್ಲೆಯನ್ನಾಳಿದ ನಾಯಕರು ಅದೇನು ಅಭಿವೃದ್ದಿ ಮಾಡಿದ್ದಾರೆ ಎಂಬ ಪ್ರಶ್ನೆ ಉದ್ಬವಿಸುತ್ತದೆ. ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ನಿರ್ಮಾಣ ಮಾಡಿದ ಕೆರೆ, ಜಲಾಶಯಗಳ ಹೂಳು ಕೂಡ ತೆಗೆಯುವ ಕೆಲಸ ಇಂದಿನ ನಾಯಕರಿಗೆ ಸಾದ್ಯವಾಗಿಲ್ಲ. ತಾವು ಆಯ್ಕೆಯಾದಲ್ಲಿ ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿಗಳಿಗೂ ಬೇಟಿ ನೀಡಿ ಜನರ ಮದ್ಯೆ ಬೆರೆತುಕೊಂಡು ಸಮಸ್ಯೆಗಳನ್ನು ಆಲಿಸಿ ಈ ಬಗ್ಗೆ ಸರ್ಕಾರ ಮಟ್ಟದಲ್ಲಿ ಒತ್ತಡ ಹೇರಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುವುದಾಗಿ ಹೇಳಿದರು.

ವಿಧಾನಪರಿಷತ್ ಸದಸ್ಯರಾಗುವವರು ವಿದ್ಯಾವಂತ ಆರೋಗ್ಯವಾಗಿರಬೇಕು. ಬಿಜೆ.ಪಿ ಅಭ್ಯರ್ಥಿಗೆ ನಡೆದಾಡಲು ಆಗುತ್ತಿಲ್ಲ ಇವರು ಜಿಲ್ಲೆಯ ಅಭಿವೃದ್ದಿಗೆ ಹೇಗೆ ಶ್ರಮಿಸುತ್ತಾರೆ ಎಂದು ಜಿಲ್ಲೆಯೆಡೆ  ಮಾತುಗಳು ಕೇಳಿ ಬರುತ್ತಿವೆ ಎಂದರು.

ಕಳೆದ ಬಾರಿ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಿಗೆ ಬಂದ 18 ಕೋಟಿ ಅನುದಾನದಲ್ಲಿ 6 ಕೋಟಿ ವಾಪಸ ಹೋಗಿದೆ. ಪ್ರಜಾಂವತ ಹಾಗೂ ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಮುಖ್ಯಸ್ಥರೆನಿಸಿಕೊಳ್ಳುವ ಎಮ್.ಎಲ್.ಸಿ ಗಳು ಮಾಡಿದ ಕೆಲಸವೇನು ಎಂದು ಪ್ರಶ್ನಿಸಿದರು. ಹಾಲಿ ವಿಧಾನ ಪರಿಷತ್ ಸದಸ್ಯ ಶ್ರೀಕಾಂತ ಘೋಟ್ನೇಕರ ಜಿಲ್ಲೆಯ ಬಹುತೇಕ ಗ್ರಾಮಗಳ ಜನತೆಗೆ ಪರಿಚಯವೇ ಇಲ್ಲ. ಅವರು ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಾರೆ ವಿನಹ ಜನರ ಸಮಸ್ಯೆ ನಿವಾರಿಸುವ ದೃಷ್ಟಿ ಅವರಿಗಿಲ್ಲ. ಅಧಿಕಾರವನ್ನು ದುರುಪಯೋಗ ಮಾಡಿದ್ದಾರೆಂದು ಆರೋಪಿಸಿದರು.

ಮುಂದಿನ ದಿನಗಳಲ್ಲಿ ಮಧು ಬಂಗಾರಪ್ಪ ಸೇರಿದಂತೆ ರಾಜ್ಯ ಜೆ.ಡಿ.ಎಸ್ ಮುಖಂಡರು ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆಂದು ತಿಳಿಸಿದರು.
ತಾಲೂಕಾ ಜೆ.ಡಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ ಕುಟ್ರಿ, ಅರುಣ ಗೊಂದಳಿ, ಪ.ಪಂ ಸದಸ್ಯ ಮುನೇಶ ಕೊರವರ, ಫಕ್ಕೀರಪ್ಪ ಅಂಟಾಳ, ಮಹ್ಮದ ಹಸನ, ಈಶಾನ, ಜ್ಯೋತಿ ಕಲಾಲ, ಶಕುಂತಲಾ ತಳವಾರ ಮುಂತಾದವರಿದ್ದರು.

loading...

LEAVE A REPLY

Please enter your comment!
Please enter your name here