ಜ: 08 ರಿಂದ ಕರ್ನಾಟಕ ಹಕ್ಕಿಗಳ ಹಬ್ಬ

0
20
loading...

ದಾಂಡೇಲಿ : ಅರಣ್ಯ ಇಲಾಖೆ, ಕಾಳಿ ಹುಲಿ ಸಂರಕ್ಷಿತ ಪ್ರದೇಶ, ದಾಂಡೇಲಿ ಇವರ ಆಶ್ರಯದಲ್ಲಿ                  ಜನವರಿ 08 ರಿಂದ ಜನವರಿ 10 ರವರೆಗೆ  3 ದಿನಗಳ ಕಾಲ ಕರ್ನಾಟಕ ಹಕ್ಕಿಗಳ ಹಬ್ಬ (Karnataka Bird Festival) ನಡೆಯಲಿದೆ ಈ ಹಕ್ಕಿಗಳ ಹಬ್ಬದಲ್ಲಿ ರಾಷ್ಟ್ರೀಯ ಮಟ್ಟದ ಪಕ್ಷಿ ತಜ್ಞರು, ಪಕ್ಷಿ ಪ್ರಿಯರು ಭಾಗವಹಿಸಲಿದ್ದಾರೆ. ಈ ಹಬ್ಬದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಪರಿಸರಾಸಕ್ತರಿಗೂ ಅವಕಾಶ ಕಲ್ಪಿಸಲಾಗಿದ್ದು, ಆಸಕ್ತರು ಜನವರಿ 04 ರೊಳಗೆÉ ನಿರ್ದೇಶಕರ ಕಚೇರಿ, ಕಾಳಿ ಹುಲಿ ಸಂರಕ್ಷಿತ ಪ್ರದೇಶ, ದಾಂಡೇಲಿ ದೂರವಾಣಿ ಸಂಖ್ಯೆ: 08284-231585 ನ್ನು ಸಂಪರ್ಕಿಸಿ, ಪ್ರವೇಶ ಶುಲ್ಕ ರೂ. 750.00 ನ್ನು ಪಾವತಿಸಿ ಹೆಸರನ್ನು ನೊಂದಾಯಿಸಬಹುದಾಗಿದೆ ಎಂದು ದಾಂಡೇಲಿ-ಅಣಶಿ ಹುಲಿ ಸಂರಕ್ಷಿತ ಪ್ರದೇಶದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರಾದ ಶ್ರೀನಿವಾಸುಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here