ಡಾ. ಅಂಬೇಡ್ಕರ್ ಅವರ ಪರಿನಿರ್ವಾಣ ದಿನಾಚರಣೆ

0
28
loading...

01ಗಂಗಾವತಿ,14: ಸಂವಿಧಾನ ಶಿಲ್ಪಿ, ಭಾರತರತ್ನ ಬಾಬಾ ಸಾಹೇಬ ಡಾ. ಬಿ.ಆರ್.ಅಂಬೇಡ್ಕರ್ ಅವರ 59ನೇ ಮಹಾಪರಿನಿರ್ವಾಣ ದಿನಾಚರಣೆಯ ನಿಮಿತ್ಯ ನಗರದ ಕೋರ್ಟ್ ಎದುರಿಗೆ ಡಾ. ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಹಾಪರಿನಿರ್ವಾಣ ದಿನಾಚರಣೆಯನ್ನು ಆಚರಿಸಲಾಯಿತು.
ದಲಿತ ಮುಖಂಡರಾದ ಕುಂಟೋಜಿ ಮರಿಯಪ್ಪ, ಆರತಿ ತಿಪ್ಪಣ್ಣ ಮಾತನಾಡಿ, ಅತೀದೊಡ್ಡ ಸಂವಿಧಾನವನ್ನು ರಚಿಸುವ ಮೂಲಕ ಸರ್ವ ಜನಾಂಗದವರಿಗೆ ಸಮಾನತೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಇಂತಹ ಮಹಾನ್  ವ್ಯಕ್ತಿಗಳ ತತ್ವಾದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳುವ ಮೂಲಕ ಜಾತಿ-ಭೇದ, ಮೇಲು-ಕೀಳು, ಮೌಢ್ಯಾಚರಣೆಗಳನ್ನು ತೊರೆಯುವ ಮೂಲಕ ಸ್ವಚ್ಛ, ಸಮಾನ ಭಾರತ ಪರಿಕಲ್ಪನೆಯನ್ನು ಎಲ್ಲಾ ಜನಾಂಗದವರು ಹೊಂದಬೇಕು ಎಂದರು.
ಈ ಸಂದರ್ಭದಲ್ಲಿ ಪಾಪಣ್ಣ ನಾಯಕ, ಹುಸೇನಪ್ಪ ಹಂಚಿನಾಳ, ಶೇಖ್‍ನಬೀಸಾಬ್, ದುರುಗಪ್ಪ, ನಾಗರಾಜ, ಹಂಪೇಶ ಹರಗೋಲ, ದೊಡ್ಡ ಬೋಜಪ್ಪ ಸೇರಿದಂತೆ ಹಲವಾರು ಜನರಿದ್ದರು.

loading...

LEAVE A REPLY

Please enter your comment!
Please enter your name here