ಡಾ. ಬಾಳಣ್ಣ ಶೀಗೀಹಳ್ಳಿಯವರಿಗೆ ಬಸವ ಬೆಳಗು ಪ್ರಶಸ್ತಿ

0
17
loading...


ಚನ್ನಮ್ಮ ಕಿತ್ತೂರು ಃ ಕನ್ನಡ ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಕ್ಕಾಗಿ ಬಳ್ಳಾರಿ ಜಿಲ್ಲೆ ಸಂಡೂರಿನ ಶ್ರೀ ಪ್ರಭುದೇವ ಸಂಸ್ಥಾನ ವಿರಕ್ತಮಠವು  ತಾಲೂಕಿನ ದೇವಗಾಂವ ಗ್ರಾಮದ ನಿವೃತ್ತ ಪ್ರಾದ್ಯಾಪಕ, ಸಾಹಿತಿ ಡಾ. ಬಾಳಣ್ಣ ಶೀಗೀಹಳ್ಳಿ ಅವರಿಗೆ “ಬಸವ ಬೆಳಗು” ಪ್ರಶಸ್ತಿ ನೀಡಿ ಗೌರವಿಸಿದೆ.
ಡಾ.ಎಂ ಎಂ ಕಲಬುರ್ಗಿ ಸ್ಮರಣೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವದ ಅಂಗವಾಗಿ ಸಂಡೂರಿನ ಶ್ರೀಮಠದ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ  ನಗದು, ಪ್ರಶಸ್ತಿ ಫಲಕ ಹಾಗೂ ಸನ್ಮಾನಪತ್ರವನ್ನೊಳಗೊಂಡಿರುವ ಈ ಪ್ರಶಸ್ತಿಯನ್ನು ಚಿಕ್ಕೋಡಿ ಚಿಂಚಣಿ ಮಠದ ಅಲ್ಲಮಪ್ರಭು ಸ್ವಾಮೀಜಿಯವರು ಡಾ.ಶೀಗೀಹಳ್ಳಿಯವರಿಗೆ  ಪ್ರದಾನ ಮಾಡಿದರು.  ಪ್ರಭು ಸ್ವಾಮೀಜಿ ಸಾನಿಧ್ಯ ವಹಿಸಿದ್ದರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಕೆ ರವೀಂದ್ರನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here