ಡಿ.29ರಂದು ಅಂಚೆ ಅದಾಲತ್

0
13
loading...

ಕಾರವಾರ : ಕಾರವಾರ ಅಂಚೆ ವಿಭಾಗದ ಪ್ರಸಕ್ತ ಸಾಲಿನ 4 ನೇ ತ್ರೈಮಾಸಿಕ ಅಂಚೆ ಅದಾಲತ್ ಡಿಸೆಂಬರ್ 29 ರಂದು 11 ಗಂಟೆಗೆ ಅಂಚೆ ಅಧೀಕ್ಷಕರು, ಕಾರವಾರ ವಿಭಾಗ, ಕಾರವಾರದಲ್ಲಿ ನಡೆಯಲಿದೆ.
ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕುಗಳ ವ್ಯಾಪ್ತಿಯಲ್ಲಿರುವ ಅಂಚೆ ಸೇವೆಗಳಿಗೆ ಸಂಬಂಧಪಟ್ಟ ಸಲಹೆ, ಸೂಚನೆ ಮತ್ತು ದೂರುಗಳನ್ನು ಅಂಚೆ ಅದಾಲತ್‍ನಲ್ಲಿ ವಿಚಾರಣೆಗೆ ಎಂದು ಮೇಲ್ಬರಹ ಬರೆದು ಯಾವುದೇ ಅಂಚೆ ಕಚೇರಿಯಲ್ಲಿ ರವಾನೆಗಾಗಿ ಡಿಸೆಂಬರ್ 21 ರೊಳಗಾಗಿ ಸಲ್ಲಿಸಬಹುದು ಎಂದು ಕಾರವಾರ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here