ತಾಮ್ರಗುಂಡಿ ಕೆರೆ ನೀರು ರೈತರ ಜಮೀನಿಗೆ: ಪರಿಹಾರಕ್ಕೆ ಆಗ್ರಹ

0
27
loading...

ಮುಂಡರಗಿ: ತಾಲೂಕಿನ ತಾಮ್ರಗುಂಡಿಗೆ ತುಂಗಭದ್ರ ನದಿ ನೀರು ತುಂಬಿಸಿದ ಕಾರಣ ಕೆರೆಯ ದುರಸ್ತಿ ಕಾಮಗಾರಿ ಸಮರ್ಪಕವಾಗಿ ನಡೆಯದ ಕಾರಣ ಕೆರೆಯ ಪಕ್ಕದ ರೈತರ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ ಈ ಬಗ್ಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತರಾದ ಹಾಲಪ್ಪ ಭೀಮಪ್ಪ ಬಣಕಾರ ಒತ್ತಾಯಿಸಿದ್ದಾರೆ.
ಕಳೆದ ಹಲವಾರು ತಿಂಗಳುಗಳಿಂದ ಒಡೆದ ತಾಮ್ರಗುಂಡಿ ಕೆರೆ ಒಡ್ಡು ನಿರ್ಮಾಣ ಮತ್ತು ಕೆರೆ ಅಂಗಳ ದುರಸ್ತಿ ಕಾಮಗಾರಿ ನಡೆದಿದ್ದು ನೀರು ಬೀಳುವ ಕೋಡಿ(ಹೊಳಗಟ್ಟೆ) ಬಳಿ ನೀರು ಸರಾಗವಾಗಿ ಹರಿದು ಹೋಗುವಂತೆ ಕಾಮಗಾರಿ ನಡೆಯದೆ ನೀರು ಅಲ್ಲಿಯೇ ಸಂಗ್ರಹಗೊಂಡು ಕೆರೆ ಪಕ್ಕದ ರೈತರ ಜಮೀನುಗಳಿಗೆ ನೀರು ನುಗ್ಗಿ ರೈತರ ಬೆಳೆಗಳಾದ ಸೂರ್ಯಕಾಂತಿ, ಜೋಳ ಇತರ ಬೆಳೆ ನಾಶಗೊಂಡು ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತರು ದೂರುತ್ತಿದ್ದಾರೆ.
ಕೆರೆ ಅಂಚಿನಲ್ಲಿ ಸರಿಯಾದ ಒಡ್ಡು ನಿರ್ಮಾಣವಾಗದ ಕಾರಣ ತುಂಗಭದ್ರ ನದಿ ನೀರು ಕೆರೆ ತುಂಬಿಸಲು ಬಿಟ್ಟಿರುವದರಿಂದ ರೈತರ ಬೆಳೆಗಳು ನಾಶವಾಗಿವೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

loading...

LEAVE A REPLY

Please enter your comment!
Please enter your name here