ತಿಂಗಳಾದರೂ ಶಾಲೆಬಾಗಿಲು ತೆರೆದಿಲ್ಲಾ

0
16
loading...

ಶಿರಸಿ,109srs4a: ಮೂಲಭೂತ ಸೌಲಭ್ಯ ಹಾಗೂ ಶಿಕ್ಷಕರ ಕೊರತೆಯಿಂದ ಬಳಲುತ್ತಿರುವ ವಿದ್ಯಾರ್ಥಿಗಳ ಜ್ಞಾನಾರ್ಜನೆಯ ಕೇಂದ್ರವಾದ ಶಾಲೆಗೆ ಕಳೆದೊಂದು ತಿಂಗಳಿನಿಂದ ಬಾಗಿಲಿಗೆ ಬೀಗ ಬಿದ್ದಿದೆ.
ಪಾಲಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಇಲಾಖೆಯಿಂದ ನಿರ್ಲಕ್ಷಿಸಲ್ಪಟ್ಟ ಇಂಥದ್ದೊಂದು ಶಾಲೆ ನಗರದ ಹೊರವಲಯವಾದ ಗೌಡಳ್ಳಿಯಲ್ಲಿದೆ.

ಇಲ್ಲಿನ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯ 1ರಿಂದ 3ನೇ ತರಗತಿ ವಿದ್ಯಾರ್ಥಿಗಳಿಗಾಗಿ ಸುಮಾರು 3.80 ಲಕ್ಷ ರೂಪಾಯಿ ವೆಚ್ಚದಲ್ಲಿ ಹೆಚ್ಚುವರಿ 2 ಕೊಠಡಿಗಳು 2009-10ನೇ ಸಾಲಿನಲ್ಲಿ ಮಂಜೂರಾಗಿ ಕಟ್ಟಡ ಕಾರ್ಯ ಪೂರ್ಣಗೊಂಡಿದೆ. ಆದರೆ ಮೂಲಭೂತ ಸೌಲಭ್ಯಗಳ ಕೊರತೆ ನೀಗಿಲ್ಲ. ಶಾಲೆ ಪ್ರಾರಂಭದಿಂದಲೂ ನೀರಿನ ಸಮಸ್ಯೆ ಎದುರಿಸುತ್ತಿದೆ. ಶಾಲೆಯ ಹಿಂಬದಿಯೇ ಬೃಹತ್ ನೀರಿನ ಟ್ಯಾಂಕ್ ನಿರ್ಮಿಸಿದ್ದರೂ ಶಾಲೆಗೆ ನೀರಿನ ಪೂರೈಕೆ ಇಲ್ಲ.ವಿದ್ಯಾರ್ಥಿಗಳಿಗೆ ಅತ್ಯಾವಶ್ಯವಾದ ಶೌಚಾಲಯ ವ್ಯವಸ್ಥೆ ಮುಖ್ಯವಾಗಿ ಕಾಡುತ್ತಿದೆ.

1ರಿಂದ 3ನೇ ತರಗತಿವರೆಗೆ ಸುಮಾರು 60ರಷ್ಟು ಮಕ್ಕಳಿದ್ದರೂ ಸೌಲಭ್ಯಗಳು ಮಾತ್ರ ಮರೀಚಿಕೆಯಾಗಿದೆ. ಶಾಲೆಯ ಸುತ್ತಮುತ್ತಲ ಪರಿಸರ ಗಿಡಗಂಟಿಗಳಿಂದ ತುಂಬಿ ಅಶುದ್ಧ ವಾತಾವರಣ ನಿರ್ಮಾಣವಾಗಿದೆ. ಇವುಗಳ ಜೊತೆಗೆ ಸ್ಥಳಿಯರು ಹೇಳುವಂತೆ, ಶಾಲೆಯಲ್ಲಿ ಶಿಕ್ಷಕರ ಕೊರತೆ ಕಾಡುತ್ತಿದೆ. ಇಬ್ಬರು ಶಿಕ್ಷಕರ ಅವಶ್ಯಕತೆ ಇದೆ.

ಒಬ್ಬ ಶಿಕ್ಷಕರಿಗೆ ಅಪಘಾತವಾಗಿದ್ದು ಅವರು ರಜೆಯಲ್ಲಿದ್ದಾರೆ. ಹೀಗಾದರೆ ಮಕ್ಕಳ ಶಿಕ್ಷಣದ ಭವಿಷ್ಯ ಹೇಗೆ? ಎನ್ನುತ್ತಾರೆ. ಹೆಚ್ಚುವರಿ ಕೊಠಡಿಗಳು ರಾಜ್ಯ ಹೆದ್ದಾರಿ ಮಕ್ಕದಲ್ಲಿದ್ದು, ಈ ಹಿಂದೆ ಚಿಕ್ಕ ಮಗು ಶಾಲೆಗೆ ತೆರಳಲು ರಸ್ತೆ ದಾಟುವಾಗ ಅಪಘಾತ ಸಂಭವಿಸಿತ್ತು. ಘಟನೆಯಿಂದ ಹೆದರಿದ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಹೇಳುತ್ತಾರೆ.

ಒಟ್ಟಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು ತಕ್ಷಣ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ತಿಂಗಳಿನಿಂದ ಬಂದಾದ ಶಾಲೆ ಶಾಶ್ವತವಾಗಿ ಮುಚ್ಚುವ ಪರಿಸ್ಥಿತಿ ನೋಡಬೇಕಾಗುತ್ತದೆ.

loading...

LEAVE A REPLY

Please enter your comment!
Please enter your name here