ನಾಳೆ ವಿಶ್ವ ವಿಕಲಚೇತನರ ದಿನಾಚರಣೆ ನಿಮಿತ್ಯ ವಿವಿಧ ಸ್ಪರ್ಧೆಗಳು

0
16
loading...

ಜಮಖಂಡಿ: ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ,ಜಮಖಂಡಿ ಇವರ ಸಹಯೋಗದಲ್ಲಿ 2015-16ನೇ ಸಾಲಿನ ವಿಶ್ವ ವಿಕಲಚೇತನರ ದಿನಾಚರಣೆ ನಿಮಿತ್ಯ ದಿನಾಂಕ 02/12/2015 ರಂದು ಮುಂಜಾನೆ 10 ಘಂಟೆಗೆ ಸ್ಥಳೀಯ ಪೋಲೋ ಮೈದಾನ ಹಾಗೂ ಶಾಸಕರ ಮಾದರಿ ಶಾಲೆ ಗಿರೀಶ ನಗರ ಶಾಲೆಯಲ್ಲಿ ತಾಲೂಕಾ ಮಟ್ಟದ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಶಾಲೆಯಲ್ಲಿ 5 ರಿಂದ 8ನೇ ತರಗತಿಯಲ್ಲಿ ಒದುತ್ತಿರುವ ವಿಕಲಚೇತನ ಮಕ್ಕಳಿಗೆ ಕ್ರೀಡಾ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳು ಜರುಗಲಿವೆ.
ಕ್ರೀಡಾ ಸ್ಪರ್ಧೆಗಳಾದ ಮಡಿಕೆ ಒಡಿಯುವದು, ಮ್ಯೂಜಿಕಲ್ ಚೇರ್, ಚಮಚದಲ್ಲಿ ನಿಂಬೆಹಣ್ಣಿನ ಓಟ, 100 ಮೀಟರ ಓಟ, ಕಪ್ಪೆ ಓಟ ಹಾಗೂ ಸಾಂಸ್ಕ್ರತಿಕ ಸ್ಪರ್ಧೆಗಳಾದ ಜನಪದ ಗೀತೆ(ಗ್ರುಪ್), ರಸ ಪ್ರಶ್ನೆ(ಇಬ್ಬರು), ಚಿತ್ರಕಲೆ, ಛದ್ಮವೇಷ ಸ್ಪರ್ಧೆಗಳು ಜರುಗಲಿವೆ.
ಈ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿ/ನಿಯರಿಗೆ ಪ್ರಥಮ 500ರೂ, ದ್ವಿತಿಯ 400ರೂ, ತೃತೀಯ 300ರೂಗಳ ನಗದು ಬಹುಮಾನ ನೀಡಲಾಗುವದು. ಕಾರಣ ಎಲ್ಲಾ ಮುಖ್ಯಗುರುಗಳು ತಮ್ಮ ಶಾಲೆಯಿಂದ ಭಾಗವಹಿಸುವ ಮಕ್ಕಳ ಪಟ್ಟಿಯನ್ನು ತಮ್ಮ ವಲಯದ ಸಿ.ಆರ್.ಪಿ.ಯವರಗೆ ದಿನಾಂಕ 01/12/2015 ರಂದು ಮಧ್ಯಾಹ್ನ 1 ಘಂಟೆಯೊಳಗೆ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ಆಯ್.ಇ.ಆರ್.ಟಿ ಬಿ.ಎಮ್.ಮಂತ್ರಿ(9845703649) ಹಾಗೂ ಎನ್.ಜಿ.ಓ.ಆಯ್.ಇ.ಆರ್.ಟಿರಾದ ಎಸ್.ಎಲ್.ಕೊಣ್ಣೂರ(9880039164) ಇವರನ್ನು ಸಂಪರ್ಕಿಸಲು ಬಿ.ಇ.ಓ.ಹಾಗೂ ಬಿ.ಆರ್.ಸಿ.ಓ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here