ನಿಧಾನ ಗತಿಯಲ್ಲಿ ಕಾರವಾರ ಕೋಡಿಬಾಗದ ರಸ್ತೆ ಕಾಮಗಾರಿ

0
29
loading...


ಕಾರವಾರ : ನಗರದ ಕಾರವಾರ ಕೋಡಿಬಾಗದ ರಸ್ತೆ ನಗರೋತ್ಥಾನ ಯೋಜನೆ ಅಡಿಯಲ್ಲಿ ನಡೆಯುತ್ತಿದ್ದು ಅಭಿವೃದ್ಧಿ ಕಾಮಗಾರಿ ಮಾತ್ರ ನಿಧಾನ ಗತಿಯಲ್ಲಿ ನಡೆಯುತ್ತಿದೆ. ಈ ಕಾರಣದಿಂದಾಗಿ ಸಾರ್ವಜನಿಕರು ಹಾಗೂ ವಾಹನ ಸಂಚಾರಿಗಳು ತೀವ್ರ ತೊಂದರೆ ಪಡುವಂತಾಗಿದೆ. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಳೆದ ಎಂಟು ತಿಂಗಳ ಹಿಂದೆ ನಗರೋತ್ಥಾನ ಯೋಜನೆಯಡಿ ರಸ್ತೆಯನ್ನು ಅಭಿವೃದ್ಧಿಗೊಳಿಸಿ ಕಾಂಕ್ರೀಟಿಕರಣ ಮಾಡುವ ಯೋಜನೆ ಪ್ರಾರಂಭಗೊಂಡಿತ್ತು. ರಸ್ತೆ ಅಭಿವೃದ್ಧಿಗೆ ಅಕ್ಕ ಪಕ್ಕದ ಅನೇಕ ಮನೆಗಳನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಇನ್ನಷ್ಟು ಕಟ್ಟಡಗಳ ತೆರವು ಕಾರ್ಯಗಳು ನಿಧಾನಗತಿಯಲ್ಲಿ ಸಾಗಿದೆ. ಇದರಿಂದ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುವಂತಾಗಿದೆ.
ಕಾರವಾರ ಕೋಡಿಬಾಗ ರಸ್ತೆಯನ್ನು 18 ಮೀಟರ್ ಅಗಲೀಕರಣ ಮಾಡುವ ಯೋಜನೆ ಇದೆ. ನಗರಸಭೆ ಅಧಿಕಾರಿಗಳು 18 ಮೀಟರ್ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ ಹಲವು ಕಡೆ ರಸ್ತೆ ಅಗಲೀಕರಣ ಮಾಡಲು ತಾರತಮ್ಯ ಮಾಡಲಾಗಿದೆ. ಅನೇಕ ಕಡೆಯ ಸ್ವಹಿತಾಸಕ್ತಿ ವ್ಯಕ್ತಿಗಳ ಕಟ್ಟಡ, ಕಂಪೌಂಡ್ ಗೋಡೆಯನ್ನು ಸಹ ತೆರವುಗೊಳಿಸುವಲ್ಲಿ ಅಧಿಕಾರಿಗಳು ಮೀನ ಮೇಷ ಎಣಿಸುತ್ತಿದ್ದಾರೆ ಎನ್ನುವ ಆರೋಪ ವ್ಯಕ್ತವಾಗಿದೆ. ಆಯಾ ಭಾಗದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿಯಾಗಿದ್ದು ವಾಹನ ಸಂಚಾರಕ್ಕೆ ತೊಡಕು ಉಂಟಾಗಿದೆ. ಆಗಾಗ ಕೆಲವು ಅವಗಡಗಳು ಸಂಭವಿಸಿವೆ.
ಕಳೆದ ಎಂಟು ದಿನಗಳ ಹಿಂದೆ ಸವಿತಾ ಸರ್ಕಲ್ ಬಳಿಯ ರಸ್ತೆ ಅಗೆದಿಡಲಾಗಿದೆ. ಆದರೆ ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ. ಇದರಿಂದಾಗಿ ಮಾರುಕಟ್ಟೆಗೆ ಬರುವ ಸಾರ್ವಜನಿಕರಿಗೆ ಕಿರಿಕಿರಿಯಾಗಿದ್ದು ಸುತ್ತಮುತ್ತಲಿನ ಹೊಟೇಲ್, ಅಂಗಡಿಗಳಿಗೂ ಸಹ ತೊಂದರೆಯಾಗುತ್ತಿದೆ. ನಗರದಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರ ಅಂಬೋಣವಾಗಿದೆ
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here