ನೆನೆಗುದಿಗೆ ಬಿದ್ದಿರುವ ಸೇತುವೆ ಕಾಮಗಾರಿ

0
20
loading...

ಕಾರವಾರ : ತಾಲೂಕಿನ ಸುಂಕೇರಿ ಹಾಗೂ ಕಡವಾಡಕ್ಕೆ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಸುಂಕೇರಿ-ಕಡವಾಡ ಸೇತುವೆ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದು ಶೀಘ್ರವೇ ಸೇತುವ ನಿರ್ಮಾಣ ಕಾರ್ಯ ಮುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಳೆದ 2013 ರಲ್ಲಿ ಪ್ರಾರಂಭವಾದ ನೂತನ ಸೇತುವೆ ನಿರ್ಮಾಣ ಕಾಮಗಾರಿ ಹಣದ ಕೊರತೆ ಹಾಗೂ ಗುತ್ತಿಗೆದಾರರ ವಿಳಂಬ ನೀತಿಯಿಂದ ಕುಂಟುತ್ತ ಸಾಗಿದೆ. 2012 ರಲ್ಲಿ ಸುಂಕೇರಿ-ಕಡವಾಡ ರಸ್ತೆಗೆ 8 ಕೋಟಿ ರೂ. ಲೋಕೋಪಯೋಗಿ ಇಲಾಖೆಗೆ ಮಂಜೂರಾಗಿತ್ತು. ಆದರೆ, ಬೆಳಗಾವಿಯ ಆದಿತ್ಯ ಕನ್ಸ್ಟ್ರಕ್ಷನ್ ಕಂಪನಿ 9.93 ಕೋಟಿ ರೂ.ಗೆ ಕಾಮಗಾರಿ ಗುತ್ತಿಗೆ ಪಡೆದು 2013 ರಲ್ಲಿ ಕಾಮಗಾರಿ ಪ್ರಾರಂಭಿಸಿತ್ತು.
ಅನುದಾನವನ್ನು 8 ರಿಂದ 9.93 ಕೋಟಿ ರೂ.ಗೆ ಹೆಚ್ಚಿಸುವಂತೆ ಕೋರಿ ಪಿಡಬ್ಲ್ಯೂಡಿ ಸರ್ಕಾರಕ್ಕೆ ಪತ್ರ ಬರೆದು ಎರಡು ವರ್ಷವಾಗಿದೆ. ಅದರೆ ಸೇತುವೆಯ ಉಳಿದ ಕಾಮಗಾರಿಗೆ ಬೇಕಾದ ಹೆಚ್ಚುವರಿ ಅನುದಾನ ಮಂಜೂರಾಗಿಲ್ಲ. ಇದರಿಂದ ಗುತ್ತಿಗೆದಾರರೂ ಆಸಕ್ತಿಯಿಂದ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ಸೇತುವೆ ಕಾಮಗಾರಿ ನಿಂತಿದೆ.
ಇತ್ತ ಗುತ್ತಿಗೆದಾರರೂ ಇಲ್ಲಸಲ್ಲದ ಕಾರಣ ನೀಡಿ ಕಾಮಗಾರಿಯನ್ನು ವಿಳಂಬ ಮಾಡುತ್ತಿದ್ದಾರೆ ಎನ್ನವು ಆರೋಪ ವ್ಯಕ್ತವಾಗುತ್ತಿದೆ. ಸೇತುವ ನಿರ್ಮಾಣಕ್ಕೆ ತೆಗೆದುಕೊಂಡ ಗುತ್ತಿಗೆ ಅವಧಿ ಮುಗಿದು ಈಗಾಗಲೇ ಕೆಲವು ತಿಂಗಳು ಕಳೆದಿದ್ದು ಇದುವರೆಗೂ ಕಾಮಗಾರಿ ಮುಕ್ತಾಯವಾಗುವುದು ಎನ್ನುವುದು ಪ್ರಶ್ನಾತೀತವಾಗಿ ಉಳಿದುಕೊಂಡಿದೆ.
ಸೇತುವೆ ನಿರ್ಮಾಣ ಸ್ಥಗಿತವಾಗಿದ್ದರಿಂದ ಸುಂಕೇರಿ ಹಾಗೂ ಕಡವಾಡದ ಸಾವಿರಾರು ಸಾರ್ವಜನಿಕರು ತೊಂದರೆ ಪಡುವಂತಾಗಿದೆ. ಸುಂಕೇರಿಯಿಂದ ಕಡವಾಡಕ್ಕೆ ಕೇವಲ 2 ಕಿಮೀ. ಹಾಗೂ ಕಾರವಾರ ನಗರದಿಂದ ಕಡವಾಡಕ್ಕೆ ತೆರಳಬೇಕಾದರೆ 6 ಕಿಮೀ. ಪ್ರಯಾಣಿಸಬೇಕು. ಅದರೆ ಈಗ ಜನರು ಕಡವಾಡಕ್ಕೆ ತೆರಳಬೇಕಾದರೆ ಶಿರವಾಡ – ಕಡವಾಡ ಮಾರ್ಗವಾಗಿ ಸುಮಾರು 10 ಕಿಮೀ. ಸುತ್ತವರಿದು ಸಾಗಬೇಕಾಗಿದೆ. ಇದರಿಂದ ಸಾರ್ವಜನಿಕರು ಸಾಕಷ್ಟು ತೊಂದರೆ ಪಡುವಂತಾಗಿದೆ.
ಸುಂಕೇರಿಯಿಂದ ಕಡವಾಡಕ್ಕೆ 2 ಕಿಮೀಯಲ್ಲಿ ತೆರಳಬಹುದು. 6 ಕಿಮೀ ಒಳಗೆ ಕಾರವಾರದಿಂದ ಕಡವಾಡ ತಲುಪಬಹುದು. ಈಗ ಶಿರವಾಡ ಮೂಲಕ 10 ಕಿಮೀ ಸುತ್ತುವರಿದು ತೆರಳಬೇಕಿದೆ. ಸುಂಕೇರಿ-ಕಡವಾಡ ಸೇತುವೆ ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ. ನಮಗೆ ಸಂಚಾರಕ್ಕೆ ತೊಂದರೆಯಾಗಿದೆ. ಮಳೆಗಾಲ ಬಂದಕೂಡಲೇ ಕಾಮಗಾರಿ ಬಂದ್ ಮಾಡುತ್ತಿದ್ದಾರೆ. ಶೀಘ್ರದಲ್ಲಿ ಕಾಮಗಾರಿ ಮುಗಿಸಿಕೊಡಬೇಕು ಎನ್ನುತ್ತಾರೆ ಕಡವಾಡ ಗ್ರಾಮಸ್ಥರಾದ ಸತೀಶ್ ನಾಯ್ಕ.
ಕಡವಾಡ-ಸುಂಕೇರಿ ಸೇತುವೆ ಗುತ್ತಿಗೆದಾರರ ಅವಧಿ ಮುಗಿದಿದೆ. ಗುತ್ತಿಗೆ ಅವಧಿ ವಿಸ್ತರಣೆಗೆ ಇಲಾಖೆಗೆ ಪತ್ರ ಬರೆಯಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಮುಗಿಸಲು ಸೂಚಿಸಲಾಗಿದೆ. ಎನ್ನುತ್ತಿದ್ದಾರೆ ಪಿಡಬ್ಲ್ಯೂಡಿ ಇಇ ಅಛಲ ಭಟ್ ಅವರು. ಸುಂಕೇರಿ ಹಾಗೂ ಕಡವಾಡದ ಮಧ್ಯೆ ಈ ಹಿಂದೆ ಇದ್ದ ಸೇತುವೆ ಸಂಪೂರ್ಣ ಶಿಥಿಲವಾಗಿದೆ. ಅಲ್ಲದೆ ಸಂಬಂಧಪಟ್ಟ ಇಲಾಖೆ ಶಿಥಿಲಗೊಂಡ ಸೇತುವೆ ಮೇಲೆ ಸಂಚಾರ ನಿರ್ಬಂಧಿಸಿದೆ. ಇದರಿಂದಾಗಿ ಜನರು ಕಡವಾಡ ಗ್ರಾಮಕ್ಕೆ ತೆರಳಬೇಕಾದರೆ ಸುತ್ತುವರಿದು ಪ್ರಯಾಣಿಸಬೇಕಾದ ಅನಿರ್ವಾತೆ ಎದುರಾಗಿದೆ.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here