ಪಂಚಮಸಾಲಿ ಸಮಾಜದ ಅಭ್ಯರ್ಥಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿ:ಹೊಂಬಳಗಟ್ಟಿ

0
28
loading...

ಮುಂಡರಗಿ,14: ತಾಲೂಕಿನ ಹಿರೇವಡ್ಡಟ್ಟಿ ಜಿ..ಪಂ.ಕ್ಷೇತ್ರವು ಸಾಮಾನ್ಯ ಮೀಸಲಾತಿ ಹೊಂದಿದ್ದು, ಆ ಭಾಗದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಜನಸಂಖ್ಯೆ ಹೆಚ್ಚಿದೆ. ಆದ್ದರಿಂದ ಈ ಬಾರಿ ಪಂಚಮಸಾಲಿ ಸಮಾಜದ ಅಭ್ಯರ್ಥಿಗೆ ಹಿರೇವಡ್ಡಟ್ಟಿ ಜಿ.ಪಂ,ಕ್ಷೆತ್ರಕ್ಕೆ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕು ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ನಾಗರಾಜ ಹೊಂಬಳಗಟ್ಟಿ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಹಿರೇವಡ್ಡಟ್ಟಿ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 9 ಸಾವಿರಕ್ಕೂ ಹೆಚ್ಚು ಮತದಾರರನ್ನು ಪಂಚಮಸಾಲಿ ಜನಾಂಗ ಹೊಂದಿದ್ದು, ಈ ಹಿಂದೆ ಹಲವಾರು ಬಾರಿ ಪಂಚಮಸಾಲಿ ಸಮಾಜವನ್ನು ರಾಜಕೀಯದಲ್ಲಿ ಕಾಲೇಳೆಯುತ್ತಾ ಬಂದಿದ್ದು, ಇನ್ನಾದರೂ ಕಾಂಗ್ರೆಸ್ ಪಕ್ಷದಿಂದ ಹಿರೇವಡ್ಡಟ್ಟಿ ಕ್ಷೇತ್ರಕ್ಕೆ ಪಂಚಮಸಾಲಿ ಸಮಾಜದ ಅಭ್ಯರ್ಥಿಗೆ ಅವಕಾಶ ಕಲ್ಪಿಸಬೇಕು. ತಾಲೂಕು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರು ಹಿರೇವಡ್ಡಟ್ಟಿ ಗ್ರಾಮದ ಲೋಕಪ್ಪ ನಂದಿಕೋಲ ಅವರಿಗೆ ಜಿ.ಪಂ. ಕಾಂಗ್ರೆಸ್ ಭಿ ಫಾರಂ ನೀಡಬೇಕೆಂದು ವತ್ತಾಯಿಸಿದ್ದಾರೆ.

loading...

LEAVE A REPLY

Please enter your comment!
Please enter your name here