ಪತ್ರಕರ್ತರು ಹಾಗೂ ಮಾಧ್ಯಮ ಮಿತ್ರರೊಂದಿಗೆ ಕ್ರಿಸ್ಮಸ್ ಸಮ್ಮಿಲನ

0
13
loading...


ಕಾರವಾರ: ಪ್ರಸಕ್ತ ವರ್ಷ `ದಯೆ’ಗೆ ಮೀಸಲಾಗಿದೆ. ಪರಸ್ಪರ ಕ್ಷಮೆ ಯಾಚನೆ ಮತ್ತು ಕ್ಷಮೆ ಬೇಡುವ ಮೂಲಕ ಸೌಹಾರ್ಧತೆ ಮೆರೆಯೋಣ ಎಂದು ಜಿಲ್ಲಾ ಕ್ಯಾಥೊಲಿಕ್ ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ.ಡೆರಿಕ್ ಫರ್ನಾಂಡಿಸ್ ಎಂದು ಕರೆ ನೀಡಿದರು.
ಕ್ರಿಸ್‍ಮಸ್ ಅಂಗವಾಗಿ ಕೆಡಿಡಿಸಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ‘ಪತ್ರಕರ್ತರು ಹಾಗೂ ಮಾಧ್ಯಮ ಮಿತ್ರರೊಂದಿಗೆ ಕ್ರಿಸ್ಮಸ್ ಸಮ್ಮಿಲನ’ ಕಾರ್ಯಕ್ರಮದಲ್ಲಿ ಅವರು ಕ್ರಿಸ್‍ಮಸ್ ಸಂದೇಶ ನೀಡಿದರು.
ಯಾವುದೇ ನ್ಯಾಯ ಕ್ಷಮೆಯಿಂದ ಕೂಡಿರಬೇಕು. ಇಲ್ಲದೇ ಹೋದಲ್ಲಿ ಅದು ಕಠೋರ ಹೃದಯವಾಗುತ್ತದೆ. ಕ್ಷಮೆ ಇಲ್ಲದ ನ್ಯಾಯ ಮೂರ್ಖತನದ್ದು. ನಾವೆಲ್ಲ, ಜಾತಿರಹಿತವಾಗಿ ಜನರ ಒಳಿತಿಗಾಗಿ ಶ್ರಮಿಸಬೇಕು. ದಯೆಯನ್ನು ಕೇವಲ ಅಪೇಕ್ಷಿಸದೇ ಪರಸ್ಪರ ಪ್ರೀತಿ ಹಂಚಿದಾಗ ಅದರ ಸಿಹಿ ಹೆಚ್ಚುತ್ತದೆ ಮತ್ತು ಹೆಚ್ಚು ಜನರಿಗೆ ತಲುಪುತ್ತದೆ ಎಂದು ನುಡಿದರು.
ಈ ವೇಳೆ ಸಮಾಜದ ಮುಖಂಡ ಜಾರ್ಜ್ ಫರ್ನಾಂಡಿಸ್, ಕಮೋಡರ್ ಡಿಸೋಜಾ, ಪತ್ರಕರ್ತ ಟಿ.ಬಿ. ಹರಿಕಾಂತ್. ವಂ ಸ್ವಾಮಿ ಜಸ್ಟಿನ್ ಡಿ’ಸೋಜಾ ನಿರ್ದೇಶಕರು ಕೆ.ಡಿ.ಡಿಸಿ ಸಂಸ್ಥೆ ಹಾಗೂ ಎಲ್ಲಾ ಕೆ.ಡಿ.ಡಿಸಿ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿರಿದ್ದರು.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here