ಪ್ರಕೃತಿ ನಾಶದ ಕುರಿತು ಎಚ್ಚೆತ್ತುಕೊಳ್ಳದಿದ್ದಲ್ಲಿ ಭಾರೀ ಬೆಲೆ

0
22
loading...

13 SDP 3ಸಿದ್ದಾಪುರ,14: ಪ್ರಕೃತಿ ನಾಶದಿಂದ ಸಮಸ್ತ ಪ್ರಪಂಚಕ್ಕೆ ತೊಂದರೆಯಾಗುತ್ತದೆ. ಗಿಡ ಮರ ಪರಮಾತ್ಮನ ಮಂದಹಾಸವಿದ್ದಂತೆ. ಪ್ರಪಂಚವೇ ಪ್ರಕೃತಿಯ ವಿಷಯದಲ್ಲಿ ತಪ್ಪು ಹೆಜ್ಜೆ ಇಡುತ್ತಿದೆ. ಇದೀಗ ಆತ್ಮಾವಲೋಕನ ಮಾಡಿಕೊಂಡು,ಎಚ್ಚೆತ್ತುಕೊಳ್ಳದಿದ್ದಲ್ಲಿ ಭವಿಷ್ಯದಲ್ಲಿ ಭಾರೀ ಬೆಲೆ ತೆರಬೇಕಾದೀತು ಎಂದು ಶ್ರೀ ರಾಮಚಂದ್ರಾಪುರಮಠ ಮಹಾಸಂಸ್ಥಾನದ ಶ್ರೀ ರಾಘವೇಶ್ವರಭಾರತೀ ಶ್ರೀಗಳು ಹೇಳಿದ್ದಾರೆ.

ಗಿರಿನಗರದ ರಾಮಾಶ್ರಮದಲ್ಲಿ ಶನಿವಾರ ನಡೆದ ಶ್ರೀಮಠದ ಭಾರತೀ ಪ್ರಕಾಶನದ “ಪ್ರಕಾಶನೋತ್ಸವ” ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡುತ್ತಿದ್ದರು. ಮರಗಳನ್ನು ದೇವಾಲಯ ಕಟ್ಟುವ ಹಿನ್ನೆಲೆಯಲ್ಲಿ ಕಡಿದರೆ ಅದು ಅಮರವಾಗುತ್ತದೆ. ಆದರೆ ಆಸೆಗಾಗಿ,ದುರಾಸೆಗಾಗಿ ಗಿಡ-ಮರ ನಾಶಮಾಡಿದರೆ ಅದು ಪಶ್ಚಾತ್ತಾಪಕ್ಕೆ ಕಾರಣವಾಗುತ್ತದೆ.

ಇಂದು ಬೆಳಕು ಬೀರುವ, ಕೊಳಕು ಹರಡುವ ಎರಡೂ ರೀತಿಯ ಪ್ರಕಟಣೆಗಳನ್ನು ಕಾಣುತ್ತೇವೆ. ಆದರೆ ಭಾರತೀ ಪ್ರಕಾಶನದಿಂದ ಅತಿ ಉತ್ತಮ ಕೃತಿಗಳು ಬೆಳಕು ಕಾಣುತ್ತಿವೆ. ರಾಮರಾಜ್ಯ ಸ್ಥಾಪನೆಯಾಗಲು ರಾವಣನ ಹಾಗೂ ರಾಕ್ಷಸರ ಹತ್ಯೆ ಆಗಲೇ ಬೇಕಾಯಿತು. ಅಂತೆಯೇ ಕೆಟ್ಟದ್ದನ್ನು ತೊಡೆದು ಉತ್ತಮ ಬೋಧನೆಯ ಸಾಹಿತ್ಯವನ್ನು ಬೆಂಬಲಿಸಲು ಮುಂದಾಗಬೇಕು ಎಂದು ಶ್ರೀಗಳು ಆಶಯ ವ್ಯಕ್ತಪಡಿಸಿದರು..
ಶಂಖನಾದ,ಗುರುವಂದನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಪ್ರಸಾರ ಪ್ರಧಾನ ರಮೇಶ ಗುಂಡೂಮನೆ ಸಭಾಪೂಜೆ ನೆರವೇರಿಸಿದರು. ಡಾ|| ಗಜಾನನ ಶರ್ಮಾ ಪ್ರಕಾಶನದ ಉದ್ದೇಶ ಕುರಿತು ವಿವರಿಸಿದರು. ಪ್ರಕಾಶನದ ಕೃಷ್ಣಪ್ರಸಾದ ನಿರ್ವಹಿಸಿದರು. ಪ್ರಕಾಶನದ ಪ್ರಮುಖ ವಿ. ಜಗದೀಶ ಶರ್ಮಾ ಅವಲೋಕನ ನಡೆಸಿಕೊಟ್ಟರು. ಮಹಾಮಂಡಲದ ವಿವಿಧ ಭಾಗಗಳಿಂದ ಆಗಮಿಸಿದ್ದ ಶಿಷ್ಯ-ಬಕ್ತರಿಗೆ ಶ್ರೀಗಳು ಫಲ ಮಂತ್ರಾಕ್ಷತೆ ಅನುಗ್ರಹಿಸಿದರು.

loading...

LEAVE A REPLY

Please enter your comment!
Please enter your name here