ಪ್ರತಿಯೊಬ್ಬರು ತಮ್ಮ ರಕ್ತದ ಗುಂಪಿನ ಮಾಹಿತಿ ಪಡೆದುಕೊಂಡಿರಬೇಕು: ವೈಕುಂಠೆ

0
31
loading...

ಮುಂಡರಗಿ,14: ಇಂದಿನ ಕಾಲಮಾನಕ್ಕೆ ತಕ್ಕಕಂತೆ ಪ್ರತಿಯೊಬ್ಬರು ತಮ್ಮ ರಕ್ತದ ಗುಂಪಿನ ಮಾಹಿತಿಯನ್ನು ಪಡೆದುಕೊಂಡಿರಬೇಕು. ಸಮಯ ಬಂದಾಗ ತಮ್ಮ ರಕ್ತವನ್ನು ಜೀವನ್ಮರಣದ ಮಧ್ಯ ಹೋರಾಡುತ್ತಿರು ರೋಗಿಗಳಿಗೆ ದಾನಮಾಡಿ ಅವರ ಪ್ರಾಣವನ್ನು ಉಳಿಸಲು ಸಾಧ್ಯವಾಗುತ್ತದೆ. ರಕ್ತದ ಗುಂಪು ಗೊತ್ತಿರದ ವ್ಯಕ್ತಿ ಜೀವನದಲ್ಲಿ ಎನ್ನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ರಕ್ತ ತಪಾಸಿಗರಾದ ಡಾ.ದತ್ತಾತ್ರೇಯ ವೈಕುಂಠೆ ಹೇಳಿದರು.

ಅವರು ಇಲ್ಲಿಯ ಜ.ಅ.ವಿದ್ಯಾ ಸಮಿತಿಯ ಜ.ಅ.ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯೆ ಘಟಕ ಹಮ್ಮಿಕೊಂಡಿದ್ದ ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಗೆ ರಕ್ತ ಗುಂಪು ಪರೀಕ್ಷೆ ಮಾಡಿ ,ರಕ್ತದ ಗುಂಪಿನ ಮಾಹಿತಿ ಕಾರ್ಡ ನೀಡುವ ಶಿಬಿರದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ರಕ್ತದಾನ ದಾನಗಳಲ್ಲಿಯೇ ಶ್ರೇಷ್ಠವಾದುದು. 18 ವರ್ಷದ ಮೇಲ್ಪಟ್ಟ ಯುವಕ/ಯುವತಿಯರು ರಕ್ತದಾನ ಮಾಡಬಹುದು. ರಕ್ತದಾನವನ್ನು ಮಾಡುವುದರಿಂದ ಶರೀರದಲ್ಲಿ ಹೊಸ ರಕ್ತ ಹುಟ್ಟಿಕೊಂಡು ಮನುಷ್ಯನಲ್ಲಿ ಚೈತನ್ಯ ತರುತ್ತದೆ. ರಕ್ತದಾನ ಮಾಡುವುದರಿಂದ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದರು.

ರಕ್ತದಾನ ಮಾಡಲು ರಕ್ತದ ಗುಂಪಿನ ಮಾಹಿತಿ ಪ್ರತಿಯೊಬ್ಬರಿಗೂ ತಿಳಿದಿರಬೇಕು. ಇದರಿಂದ ರಕ್ತದಾನ ಸುಲಭ ಮತ್ತು ಬೇಗನೆ ಆಗುತ್ತದೆ. ಇದರಿಂದ ತೊಂದರೆಯಲ್ಲಿದ್ದ ಸಾಕಷ್ಟು ಜೀವಿಗಳನ್ನು ಬದುಕಿಸಿದ ತೃಪ್ತಿ ಸಿಗುತ್ತದೆ ಎಂದು ಹೇಳಿದ ಅವರು ರಕ್ತದ ಗುಂಪು ಮನುಷ್ಯನ ಗುಣಗಳನ್ನು ಹೇಳುವ ಶಕ್ತಿಯನ್ನು ಹೊಂದಿದೆ ಎಂದರು. ನಾನು ಸೇವಾ ಮನೋಭಾವನೆಯಿಂದ ಇದುವರೆಗೆ 1 ಲಕ್ಷ ಕ್ಕೂ ಹೆಚ್ಚು ಜನರ ರಕ್ತ ಗುಂಪು ಪರೀಕ್ಷೆಮಾಡಿ ಅವರಿಗೆ ಚೀಟಿಯನ್ನು ನೀಡಿದ್ದೇನೆ. ಇದು ಸಮಾಜ ಸೇವೆ ಎಂದು ಮಾಡುತ್ತಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ.ದತ್ತಾತ್ರೇಯ ವೈಕುಂಠೆ ಅವರು 300 ಕ್ಕೂ ಹೆಚ್ಚು ಕಾಲೇಜ ವಿದ್ಯಾರ್ಥಿಗಳ  ರಕ್ತ ಗುಂಪಿನ ಪರೀಕ್ಷೆ ಮಾಡಿ, ಅದರ ಮಾಹಿತಿಯ ಕಾರ್ಡನ್ನು ನೀಡಿದರು. ಎನ್.ಎಸ್.ಎಸ್.ಸ್ವಯಂ ಸೇವಕರಾದ ಬಸವರಾಜ ಕಲ್ಲಕುಟಗರ, ರಾಜಾಭಕ್ಷಿ ಗುಡಗೇರಿ, ಪವನಕುಮಾರ ಮಗಜಿ, ಅನಂತಕುಮಾರ ಬಂಡೆಣ್ಣವರ, ಪ್ರಕಾಶ ಬಂಢಾರಿ,ಕುಮಾರ ಗೌರಿ  ಮುಂತಾದವರು ಡಾ.ದತ್ತಾತ್ರೇಯ ಅವರಿಗೆ ಸಹಾಯಮಾಡಿದರು.  ಸಾನಿಧ್ಯವನ್ನು ವಹಿಸಿದ್ದ ಜಗದ್ಗುರು ಡಾ ನಾಡೋಜ ಅನ್ನದಾನೀಶ್ವರ ಮಹಾಶಿವಯೋಗಿಗಳವರು ಆಶೀರ್ವಚನ ನೀಡಿ ಅಪಘಾತದ ಸಮಯದಲ್ಲಿ ರಕ್ತದ ಅವಶ್ಯಕತೆ ಬಹಳ ಇರುತ್ತದೆ.

ಇಂತಹ ಸಂದರ್ಭದಲ್ಲಿ ಬೇಗನೆ ರಕ್ತವನ್ನು ನೀಡಬೇಕಾಗುತ್ತದೆ. ರಕ್ತದ ಗುಂಪಿನ ಮಾಹಿತಿ ಇದ್ದರೆ ಈ ಕೆಲಸ ತುರ್ತಾಗಿ ನಡೆಯುತ್ತದೆ.ಇದರಿಂದ ಸಾಯುವ ವ್ಯಕ್ತಿಗೆ ಜೀವ ನೀಡಿದ ಪುಣ್ಯಬರುತ್ತದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ-ತಮ್ಮ ರಕ್ತದ ಗುಂಪಿನ ಮಾಹಿತಿಯನ್ನು ತಿಳಿದಿರಬೇಕು. ಡಾ.ದತ್ತಾತ್ರೇಯ ವೈಕುಂಠೆ ಅವರ ಸೇವೆ ಅಮೂಲ್ಯವಾದುದು, ಯಾವುದೇ ಪ್ರತಿಫಲವನ್ನು ಆಪೇಕ್ಷಿಸದೆ ಸೇವೆ ಎಂದು ಕೆಲಸ ಮಾಡುತ್ತಿರುವುದು ಅನುಕರಣೀಯ ಎಂದು ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿ ಡಾ.ಪಿ.ಬಿ.ಹಿರೇಗೌಡ್ರ ರಕ್ತದ ಗುಂಪಿನಲ್ಲಿಯ ಪ್ರಕಾರಗಳು ಮತ್ತು ಅವುಗಳ ಅವಶ್ಯಕತೆಗಳನ್ನು ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾ.ಎನ್.ಎಫ್.ಅಕ್ಕೂರ ವಹಿಸಿದ್ದರು. ವೇದಿಕೆಯ ಮೇಲೆ ಪ್ರೊ.ಎಸ್.ಎಂ.ಹೊಸಮಠ, ಪ್ರೊ.ಎ.ವಿ.ಹಳ್ಳಿಕೇರಿ, ಪ್ರೊ.ಎಸ್.ಶಿವರಾಜಸ್ವಾಮಿ,ಶ್ರೀಮತಿ ಪಿ.ಬಿ.ಹಿರೇಮಠ,ಪ್ರೊ.ಪಿ.ಕೆ.ಕಲ್ಲನಗೌಡರ, ಪ್ರೊ.ಎಲ್.ಜಿ.ನಾಡಗೌಡ,ಎಸ್.ಎಸ್.ಪಾಟೀಲ ಮುಂತಾದವರಿದ್ದರು.

ಪ್ರಾರಂಭದಲ್ಲಿ ಪಿ.ಬಿ.ಹಿರೇಮಠ ಪ್ರಾರ್ಥಿಸಿದರು. ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ ಪ್ರೊ.ಸಿ.ಎಸ್.ಅರಸನಾಳ ಸ್ವಾಗತಿಸಿ ,ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಆರ್.ಇನಾಮದಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

loading...

LEAVE A REPLY

Please enter your comment!
Please enter your name here