ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಉಪಯುಕ್ತ ಸೌಲಭ್ಯಗಳನ್ನು ಕಲ್ಪಿಸಿ

0
23
loading...

ಮುಂಡರಗಿ,10: ಪಟ್ಟಣದ ಬಸ್ ನಿಲ್ದಾಣದವು ಸಂಪೂರ್ಣವಾಗಿ ಅವ್ಯವಸ್ಥೆಯಿಂದ ಕೂಡಿದ್ದು, ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಉಪಯುಕ್ತವಾದ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ಸುವ್ಯವಸ್ಥೆ ಕಾಪಾಡಬೇಕು ಎಂದು ಒತ್ತಾಯಿಸಿ ತಾಲೂಕು ವಿವಿಧ ಕನ್ನಡ ಪರ ಸಂಘಟನೆಗಳು ಬುಧವಾರ ಬಸ್ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಕರವೇ(ಸ್ವಾಭಿಮಾನ ಬಣ) ಜಿಲ್ಲಾ ಗೌರವಾಧ್ಯಕ್ಷ ರಾಜಾಬಕ್ಷೀ ಬೆಟಗೇರಿ ಮಾತನಾಡಿ, ಇಲ್ಲಿಯ ಬಸ್ ನಿಲ್ದಾಣವು ಗಲೀಜಿನಿಂದ ಕೂಡಿದ್ದು, ನಿಲ್ದಾಣದ ಆವರಣವೇಲ್ಲ ಸಂಪೂರ್ಣವಾಗಿ ಕಸದ ರಾಶಿಯಿಂದ ತುಂಬಿದೆ. ಇದರಿಂದ ಪ್ರಯಾಣಿಕರಿಗೆ ತುಂಬಾನೇ ತೊಂದರೆಯಾಗಿದೆ. ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ ಸ್ವಚ್ಚತೆ ಎನ್ನುವುದು ದೂರದ ಮಾತಾಗಿದೆ. ನಿಲ್ದಾಣಗಳಲ್ಲಿ ಸ್ವಚ್ಚತೆ ಕಾಪಾಡುವಂತೆ ಎಚ್ಚರಿಕೆಯ ನಾಮ ಫಲಕಗಳನ್ನು ಅಳವಡಿಸಬೇಕೆಂದು ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಸಹ ಪ್ರಯೋಜನವಾಗಿಲ್ಲ. ಇನ್ನಾದರೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಸಂತೋಷ ಹಿರೇಮನಿ ಮಾತನಾಡಿ, ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಸರಿಯಾದ ಆಸನಗಳ ವ್ಯವಸ್ಥೆ ಇಲ್ಲ, ಕುಡಿಯುವ ನೀರಿನ ಸೌಲಭ್ಯವಿಲ್ಲ, ನಿಲ್ದಾಣವೇಲ್ಲ ಗಲೀಜಿ ತುಂಬಿ ಗ್ಬಬು ವಾಸನೆ ಹರಡುವುದರಿಂದ ಸಾರ್ವಜನಿಕರು ಮತ್ತು ಪ್ರಯಾಣಿಕರು ದಿನನಿತ್ಯ ಪರದಾಡುತ್ತಿದ್ದಾರೆ. ನಿಲ್ದಾಣದಲ್ಲಿರುವ ಮೂತ್ರಶೌಚಗೃಹದಲ್ಲಿ ಮೂತ್ರ ವಿಸರ್ಜಿಸಲು ಕನಿಷ್ಠವೆಂದರೆ 2 ರೂ. ದರ ನಿಗದಿ ಮಾಡಿರಬೇಕು. ಆದರೆ, ಇಲ್ಲಿ 6 ರೂ.ನಿಗದಿ ಮಾಡಿದ್ದಾರೆ. ಇದರಿಂದ ಸಾರ್ವಜನಿಕರು ಬಯಲು ಜಾಗೆಯಲ್ಲಿ ವಿಸರ್ಜಿಸುತ್ತಾರೆ. ಆದ್ದರಿಂದ ಅಧಿಕಾರಿಗಳು ಕೂಡಲೇ ಮೂತ್ರವಿಸರ್ಜಿನೆಗೆ 2.ರೂ ದರ ಕಡ್ಡಾಯವಾಗಿ ನಿಗದಿ ಮಾಡುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಉತ್ತರ ಕರ್ನಾಟಕ ರೈತ ಸಂಘಟನೆ ಅಧ್ಯಕ್ಷ ವೀರಣ್ಣ ಘಟ್ಟಿ ಮಾತನಾಡಿ, ಶೀಘ್ರದಲ್ಲೇ ಬಸ್ ನಿಲ್ದಾಣವನ್ನು ಸಂಪೂರ್ಣವಾಗಿ ಕಸ ಮುಕ್ತ ನಿಲ್ದಾಣವನ್ನಾಗಿಸಬೇಕು. ರಸ್ತೆ ದುರಸ್ಥಿಗೊಳ್ಳಬೇಕು. ಕುಡಿಯುವ ನೀರಿ ಸೌಲಭ್ಯ ಕಲ್ಪಿಸಬೇಕು. ಹಾಗೇ ಆಯಾ ಊರಿನ ಬಸ್ ನಿಲುಗಡೆಗೆ ಪ್ರತ್ಯೇಕ ಜಾಗೆ ವ್ಯವಸ್ಥೆ ಕಲ್ಪಿಸಬೇಕು. ಈ ಕುರಿತು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೇ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಬಸ್ ಡಿಪೋ ವ್ಯವಸ್ಥಾಪಕರಾದ ಎಚ್.ಟಿ.ಬೆಳವಟಗಿ ಮನವಿ ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಕರವೇ(ಸ್ವಾಭಿಮಾನ ಬಣ) ಜಿಲ್ಲಾ ಉಪಾಧ್ಯಕ್ಷ ಸುಭಾನ್ ಸಾರಮೋರನಹಳ್ಳಿ, ತಾಲೂಕು ಸಾರ್ವಜನಿಕ ಹಿತದೃಷ್ಠಿ ವೇದಿಕೆ ಅಧ್ಯಕ್ಷ ಚಂದ್ರು ಪೂಜಾರ, ನಿಂಗನಗೌಡ ಪೊಲೀಸ್‍ಪಾಟೀಲ, ಎಸ್.ಎಮ್.ಅಭಿ, ಮಾಂತೇಶ ಬಂಡಿವಡ್ಡರ, ರವಿ ಬಂಡಿವಡ್ಡರ, ಸಂತೋಷ ಬಂಡಿವಡ್ಡರ, ಎಸ್.ಎಚ್.ಹಾದಿಮನಿ, ಸೇರಿದಂತೆ ಇತರರು ಇದ್ದರು.

loading...

LEAVE A REPLY

Please enter your comment!
Please enter your name here