ಬಾಗಲಕೋಟ ಜಿಲ್ಲಾ ದೇವಾಂಗ ಸಮಾಜದ ಅಧ್ಯಕ್ಷರಾಗಿ ಸತೀಶ ಸಪ್ಪರದ

0
27
loading...

ಇಳಕಲ್ಲ 07: ಇಲ್ಲಿಯ ಇಳಕಲ್ಲ ಸಹಕಾರಿ ಬ್ಯಾಂಕಿನ ನಿರ್ದೇಶಕ, ಗ್ರಾನೈಟ್ ಫ್ಯಾಕ್ಟರಿ ಮಾಲಿಕರ ಸಂಘದ ಮಾಜಿ ಉಪಾಧ್ಯಕ್ಷ ಸತೀಶ ಸಪ್ಪರದ ಅವರನ್ನು ಬಾಗಲಕೋಟ ಜಿಲ್ಲಾ ದೇವಾಂಗ ಸಮಾಜದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಅವರನ್ನು ಬದಾಮಿಯ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಶ್ರೀ ಗಾಯತ್ರಿಪೀಠ ಮಹಾಸಂಸ್ಥಾನ ಹಂಪಿ ಶಾಖಾ ಮಠದ ವತಿಯಿಂದ ದೇವಾಂಗ ಸಮಾಜದ ಜಾಗೃತಿಯ ಧಾರ್ಮಿಕ ಸಮಾರಂಭದಲ್ಲಿ ಹಂಪಿ ಜಗದ್ಗುರು ಶ್ರೀ ದಯಾನಂದಪುರಿ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಅಧಿಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ಹಾಗೂ ನಿವೃತ್ತ ಡಿಐಜಿ ಜಿ.ರಮೇಶ, ಪ್ರಧಾನ ಕಾರ್ಯದರ್ಶಿ ರವೀಂದ್ರ ಕಲಬುರ್ಗಿ, ಇಳಕಲ್ಲ ನಗರಸಭೆ ಅಧ್ಯಕ್ಷ ರಾಘವೇಂದ್ರ ಚಿಂಚಮಿ, ಮುನಿಸ್ವಾಮಿ ದೇವಾಂಗಮಠ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here