ಬಾಡವಾಲೆ ಪ್ಲಾಟ್‍ನಲ್ಲಿ ಸರಣಿ ಕಳ್ಳತನ

0
25
loading...


ಮುಂಡರಗಿ : ಇಲ್ಲಿಯ ಬಾಡವಾಲೆ ಪ್ಲಾಟ್‍ನಲ್ಲಿ ಶನಿವಾರ ಬೆಳಗಿನಜಾವ ಸರಣಿ ಕಳ್ಳತನ ನಡೆದಿದೆ. ಬಾಡವಾಲೆ ಓಣಿಯ ಮುಂದಿನ ಹಾಗೂ ಹಿಂದಿನ ರಸ್ತೆಗಳಲ್ಲಿ ಸರಣಿ ಕಳ್ಳತನ ಸಂಭವಿಸಿದ್ದು, ಎರಡು ಮನೆಗಳಲ್ಲಿ ಕಳ್ಳತನ ಹಾಗೂ ಮೂರು ಮನೆಗಳಲ್ಲಿ ಕಳ್ಳತನ ಪ್ರಯತ್ನ ನಡೆದಿದೆ.
ಬಾಡವಾಲೆ ಓಣಿಯ ಗೋಪಿ ಅಂಬಿಗೇರ, ವಿನಾಯಕ ಹೊಸಮನಿ, ಶಿವಪ್ಪ ನಾಯಕ, ವನಜಾಕ್ಷಿ ಕೊಳ್ಳಿ, ಪದಕಿ, ಹಾಗೂ ಪ್ರದೀಪ ಅನೀಪನವರ ಅವರ ಮನೆಗಳಲ್ಲಿ ಕಳ್ಳತನ ಸಂಭವಿಸಿದೆ. ಕಳ್ಳತನವಾಗಿರುವ ಬಹುತೇಕ ಮನೆಗಳಲ್ಲಿ ಸರ್ಕಾರಿ ನೌಕರರು ವಾಸಿಸುತ್ತಿದ್ದು, ಸರಣಿ ರಜೆಗಳು ಬಂದಿದ್ದರಿಂದ ಮನೆಯವರೆಲ್ಲ ಬೇರೆ ಊರಿಗೆ ತೆರಳಿದ್ದಾಗ ಕಳ್ಳತನ ನಡೆದಿದೆ ಎಂದು ಹೇಳಲಾಗುತ್ತಿದೆ.
ಎಲ್ಲಾ ಮನೆಗಳ ಮುಂಬಾಗಿಲ ಚಿಲಕವನ್ನು ಮಾತ್ರ ಮುರಿದಿರುವ ಕಳ್ಳರು, ಕಳ್ಳತನದ ನಂತರ ಮನೆಯ ಹಿಂಬಾಗಿಲಿನಿಂದ ಪರಾರಿಯಾಗಿದ್ದಾರೆ. ಕೆಲವು ಮನೆಗಳಲ್ಲಿ ಟ್ರಂಕ್‍ಗಳನ್ನು ಮುರಿದು ಅದರೊಳಗಿನ ಸಾಮಾನುಗಳನ್ನು ಎಗರಿಸಿದ್ದಾರೆ. ವನಜಾಕ್ಷಿ ಕೊಳ್ಳಿ ಅವರ ಮನೆಯ ಬೀರುವನ್ನು ಮುರಿಯಲು ಪ್ರಯತ್ನಿಸಿದ್ದು, ಅದು ಮುರಿಯದೆ ಇದ್ದುದ್ದಕ್ಕೆ ಅದನ್ನು ಹಾಗೆ ಬಿಟ್ಟು ತೆರಳಿದ್ದಾರೆ.
ಹಳ್ಳದ ದಂಡೆಯ ಬಳಿ ಕೆಲವು ಸಾಮಾನುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಬಂಗಾರದ ಒಡವೆಗಳನ್ನು ಇಡುವ ಖಾಲಿ ಡಬ್ಬಿಗಳು ದೊರೆತಿವೆ. ಒಟ್ಟು ಮೂರ್ನಾಲ್ಕು ತೊಲೆ ಬಂಗಾರದ ಒಡವೆಗಳು ಸೇರಿದಂತೆ ಬೆಳ್ಳಿ ಹಣ ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ. ಬೆಳಿಗ್ಗೆ ಸುದ್ದಿ ತಿಳಿಯುತ್ತಿದ್ದಂತೆಯೆ ಪೊಲೀಸರು ಸ್ಥಳಕ್ಕಾಗಮಿಸಿ ಸಮಗ್ರವಾಗಿ ಪರಿಶೀಲನೆ ನಡೆಸಿದರು.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here