ಬಾಲ್ಯ ವಿವಾಹ ನಿಷೇಧ ಜಾಗೃತಿ ಶಿಬಿರ

0
37
loading...

2 SDP 2ಸಿದ್ದಾಪುರ,3: ತಾಲೂಕಿನ ನಾಣಿಕಟ್ಟಾದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಶು ಅಭಿವೃದ್ಧಿ ಇಲಾಖೆಯ ವತಿಯಿಂದ ಮಂಗಳವಾರ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಬಾಲ್ಯ ವಿವಾಹ ನಿಷೇಧ ಕುರಿತು ಜಾಗೃತಿ ಮೂಡಿಸಲು ವಿಶೇಷ ಶಿಬಿರವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್ ವಿ ನಾಯ್ಕಡ ಉದ್ಘಾಟಿಸಿ ಮಾತನಾಡಿ ಬಾಲ್ಯದಲ್ಲಿರುವಾಗಲೇ ಮದುವೆ ಮಾಡುವುದು ಅಪರಾಧವಾಗುತ್ತದೆ. ಇದರಿಂದ ಮಕ್ಕಳ ಹಕ್ಕಿಗೆ ಧಕ್ಕೆಯುಂಟಾಗುತ್ತದೆ. ಇದನ್ನು ತಡೆಯುವುದಕ್ಕಾಗಿ ಎಲ್ಲರಲ್ಲಿಯೂ ಅರಿವುಮೂಡಿಸುವುದು ಈ ಶಿಬಿರದ ಉದ್ದೇಶ ಎಂದರು.

ನಂತರ ಉಪನ್ಯಾಸ ನೀಡಿದ ಇಲಾಖೆಯ ಮೇಲ್ವಿಚಾರಕಿ ಸರೋಜಾ ಕಟ್ಟಿಮನಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳನ್ನು ಹಾಗೂ 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗಂಡು ಮಕ್ಕಳನ್ನು ಮದುವೆ ಮಾಡುವುದು ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ರ ಪ್ರಕಾರ ಅಪರಾಧವಗುತ್ತದೆ. ನಿಗಧಿತ ವಯಸ್ಸಿಗಿಂತ ಮೊದಲು ಮದುವೆ ಮಾಡುವುದರಿಂದ ಎಳೆಯ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮಗಳುಂಟಾಗುತ್ತವೆ ಇದನ್ನು ತಡೆಯಲು ಹದಿಹರಯದ ಮಕ್ಕಳು ಜಾಗೃತರಾಗಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾಂiÀರ್i ಎಂ ಜಿ ಪೋಳ ಮಾತನಾಡಿಬಾಲ್ಯ ವಿವಾಹ ದಂತಹ ಅನಿಷ್ಠ ಪದ್ದತಿಯನ್ನು ದೂರಮಾಡಲು ವಿದ್ಯಾರ್ಥಿಗಳು ಮುಂದಾಗಬೇಕೆಂದು ಕರೆಕೊಟ್ಟರು.  ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸುವರ್ಣ ಪಾಟೀಲ ಮತ್ತು ನಾಣಿಕಟ್ಟಾ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಹರಿಣಿ, ಗ್ರೀಷ್ಮ, ಚೈತ್ರಾ, ರಮ್ಯಾ, ಪುಷ್ಪಲತಾ ಪ್ರಾರ್ಥನೆ ಹಾಡಿದರು.  ವಿದ್ಯಾರ್ಥಿ ಅಶ್ವಿನಿ ಬೂದ್ಯನ್ ಸ್ವಾಗತಿಸಿದರು. ಶರತ್ ಗೌಡರ್ ವಂದಿಸಿದರು. ಉಪನ್ಯಾಸಕ ಎಂ.ಕೆ.ನಾಯ್ಕ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here