ಭಟ್ಕಳ ಕಾಂಗ್ರೇಸ್‍ನ ಮುಖಂಡರಿಬ್ಬರ ಕೋಳಿಜಗಳ : ರಾಜಿಯಲ್ಲಿ ಅಂತ್ಯ

0
23
loading...

ಭಟ್ಕಳ ,4: ಜನನಾಯಕರನ್ನೆಸಿಕೊಂಡ ಕಾಂಗ್ರೇಸ್‍ನ ಎರಡು ಮುಖಂಡರು ತಮ್ಮ ತಮ್ಮ ಬೆಂಬಲಿಗರ ವಾಟ್ಸ್ ಅಫ್ ಸಂದೇಶಕ್ಕೆ ಕೋಳಿ ಜಗಳವಾಡಿಕೊಂಡು ಸಿಪಿಐ ಪ್ರಶಾಂತ ನಾಯಕರಿಂದ ಬುದ್ದಿವಾದ ಹೇಳಿಸಿಕೊಂಡು ರಾಜಿಯಾದ ಘಟನೆ ಶುಕ್ರವಾರ ಭಟ್ಕಳದಲ್ಲಿ ನಡೆದಿದೆ.

ಭಟ್ಕಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಹಾಗೂ ರಾಜ್ಯ ಕಾಂಗ್ರೇಸ್ ಕಿಸಾನ್ ಸೆಲ್‍ನ ಉಪಾಧ್ಯಕ್ಷ ವಾಟ್ಸ್‍ಆಫ್‍ನಲ್ಲಿ ತಮ್ಮ ತಮ್ಮ ಬೆಂಬಲಿಗರ ಪರ ವಿರೋಧ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ ಜಗಳವಾಡುವ ಸ್ಥಿತಿಗೆ ಬಂದಾಗ ಒಂದು ಸಮಾಜದ ಮುಖಂಡರು ಪರಸ್ಪರು ಕಿತ್ತಾಡಿಕೊಂಡು ಸಮಾಜದ ಹೆಸರು ಹಾಳು ಮಾಡಬಾರದು ಎಂಬ ಕಾರಣಕ್ಕೆ ರಾಜಿ ಪಂಚಾಯತಿಗಾಗಿ ಭಟ್ಕಳ ಆಸರಕೇರಿ ದೇವಸ್ಥಾನಕ್ಕೆ ಶುಕ್ರವಾರ ಬೆಳಿಗ್ಗೆ ಕರೆಯಿಸಲಾಗಿತ್ತು.

ದೇವಸ್ಥಾನಕ್ಕೆ ಬಂದಂತಹ ಎರಡು ಗುಂಪುಗಳು ಅಲ್ಲಿಯೇ ಪರಸ್ಪರ ಕಿತ್ತಾಡುತ್ತಿರುವುದನ್ನು ಕಂಡು ಆಸರಕೇರಿಯವರಾದ ಬಿಜೆಪಿಯ ಮಾಜಿ ಅಧ್ಯಕ್ಷರು ಹನುಮಾನನಗರದ ರಿಕ್ಷಾ ಚಾಲಕನೊರ್ವನಿಗೆ ದೇವಸ್ಥಾನದ ಹತ್ತೀರ ಗಲಾಟೆ ಮಾಡದಂತೆ ಕೆನ್ನೆಗೆ ಬಾರಿಸಿದ್ದಾರೆ. ಇದರಿಂದ ಕುಪಿತರಾದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ಕಿಸಾನ್ ಸೆಲ್ ಉಪಾಧ್ಯಕ್ಷನ ಗುಂಪಿನ ಮೇಲೆ ಏರಿ ಹೋದಾಗ ಆ ಗುಂಪಿನ ಸದಸ್ಯನಿಂದ ಹಲ್ಲೆಗೊಳಗಾದ ಘಟನೆ ನಡೆದಿದೆ.

ಇದಾದ ನಂತರ ಎರಡು ಗುಂಪಿನವರು ಪರಸ್ಪರ ಕೇಸ್ ದಾಖಲಿಸಲು ನಗರ ಪೊಲೀಸ್ ಠಾಣಾ ತೆರಳಿದಾಗ ಸಿಪಿಐ ಪ್ರಶಾಂತ ನಾಯಕರವರು ಕೇಸ್ ದಾಖಲಿಸದೇ ಎರಡು ಗುಂಪಿನವರನ್ನು ರಾಜಿ ಮಾಡಿಸಿದರಲ್ಲದೇ ಇನ್ನೊಬ್ಬರಿಗೆ ಬುದ್ದಿ ಹೇಳಬೇಕಾದ ನೀವು ಮಾಡಿದ ಕೆಲಸ ನಿಮಗೆ ಶೋಭೆ ತರುವಂತಹದಲ್ಲ ಎಂಬ ಬುದ್ದಿವಾದ ಹೇಳಿ ಕಳುಹಿಸಿದ್ದಾರೆ.

ಪ್ರತಿಸ್ಟಿತ ಕೋ ಆಪರೇಟಿವ್ ಬ್ಯಾಂಕಿನ ಸದಸ್ಯರಾದ ಇವರು ಈ ಹಿಂದೆ ಪರಸ್ಪರ ಆತ್ಮೀಯರಾಗಿದ್ದು ವಾಟ್ಸ ಆಫ್ ಗ್ರೂಪ್ ಸಂದೇಶ ಈಗ ಇಬ್ಬರನ್ನೂ ಹಾವು ಮುಂಗುಸಿಯನ್ನಾಗಿ ಮಾಡಿದೆ. ಮುಂದೆ ಇವರ ಈ ಜಗಳ ಯಾವ ಮಟ್ಟಕ್ಕೆ ಹೋಗಿ ನಿಲ್ಲುತ್ತೋ ಕಾದು ನೋಡಬೇಕಾಗಿದೆ.

loading...

LEAVE A REPLY

Please enter your comment!
Please enter your name here