ಮಕ್ಕಳಿಂದ ಪಾಲಕರ ಪಾದ ಪೂಜೆ: ಶಿಕ್ಷಕರ ಮಾದರಿ ಕಾರ್ಯ

0
29
loading...

2 jyd ph 2. . ,ಜೋಯಿಡಾ 3: ವಯೋವೃದ್ದ ಪಾಲಕರನ್ನು ವೃದಾಶ್ರಮಕ್ಕೆ ತಳ್ಳುವ, ಪಾಲಕರಿಗೆ ಅಗೌರವ ತೋರುವ ಇಂದಿನ ಆಧುನಿಕ ಯುಗದಲ್ಲಿ, ಮಕ್ಕಳಿಂದ ಪಾಲಕರ ಪಾದ ಪೂಜೆ ಮಾಡಿಸಿ ಗೌರವ ತೋರುವ ಪದ್ದತಿಯನ್ನು ರೂಡಿಸುವ ಯಶಸ್ವಿ ಕಾರ್ಯಕ್ರಮವನು ಆಯೋಜಿಸುವ ಮೂಲಕ ಕುಂಬಾರವಾಡಾ ಪ್ರಾಥಮಿಕ ಶಾಲೆಯ ಶಿಕ್ಷಕರು ತಾಲೂಕಿನಲ್ಲಿ ಮಾದರಿಯಾಗಿ, ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಪಾಠಶಾಲೆಗಳು ದೇಶ ಕಟ್ಟುವ ಜನನಾಯಕರನ್ನು ಸೃಷ್ಟಿಸುವ ಗರಡಿಮನೆಗಳಿದ್ದಂತೆ. ಬಾಲ್ಯದಲ್ಲಿ ಕಲಿತ ಪಾಠ,ಮೌಲ್ಯಗಳನ್ನು ಮಗು ತನ್ನ ಬದುಕಿನುದ್ದಕ್ಕೂ ಅಳವಡಿಸಿಕೊಳ್ಳುತ್ತವೆ ಎನ್ನುತ್ತಾರೆ. ಈ ಪರಿಕಲ್ಪನೆಯೊಂದಿಗೆ ತಾಲೂಕಿನ ಕುಮಬಾರವಾಡಾ ಪ್ರಾಥಮಿಕ ಶಾಲೆಯ ಸರಸ್ವತಿ ಪೂಜಾ ಕಾರ್ಯಕ್ರಮದ ಅಂಗವಾಗಿ, ಮುಖ್ಯೋಪಾದ್ಯಾಯ ಯಶವಂತ ನಾಯ್ಕ ಮಕ್ಕಳಲ್ಲಿ ಪಾಲಕರ ಬಗ್ಗೆ ಪ್ರೀತಿ, ಗೌರವ ಹೆಚ್ಚಿಸುವ ದಿಶೆಯಲ್ಲಿ ಮಾಡಿರುವ ಈ ಪಾದಪೂಜೆ ವಿನೂತನ ಕಾರ್ಯಕ್ರಮಕ್ಕೆ ನೂರಾರು ಪಾಲಕರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಪಾಲಕರೆಲ್ಲರೂ ತಮ್ಮ ಶಾಲಾ ಕಾರ್ಯಕ್ರಮಕ್ಕೆ ಪಾಲ್ಗೊಂಡಿದ್ದು ಮಕ್ಕಳಲ್ಲೂ ಖುಷಿ ತಂದಿತ್ತು. ಈ ಯಶಸ್ವಿಪೂರ್ಣ ಕಾರ್ಯಕ್ರಮ ಪಾಲಕರ ಮನಗೆದ್ದಿತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವಂಸಂತಕುಮಾರ ಬಿ.ಸಿ. ಮಾತನಾಡಿ ಇಂದಿನ ಹೈಟೆಕ್ ಯುಗದಲ್ಲಿ ಪಾಲಕರನ್ನು ಅಗೌರವಿಸುವ ಸಮಾಜಕ್ಕೆ ಇದು ಮಾದರಿಯಾಗಿದೆ. ಇಂತಹ ಕಾರ್ಯಕ್ರಮಗಳು ತಾಲೂಕಿನ ಎಲ್ಲಾ ಶಾಲೆಗಳಲ್ಲೂ ನಡೆದು ಮಕ್ಕಲ್ಲಿ ಉತ್ತಮ ನೈತಿಕ ಮೌಲ್ಯಗಳನ್ನು ಬೆಳೆಸಲು ಶಿಕ್ಷಕರು ಮುಂದಾಗಬೇಕೆಂದು ಹೇಳಿದರು. ಗ್ರಾ.ಪಂ.ಅಧ್ಯಕ್ಷ ಪುರುಷೋತ್ತಮ ಕಾಮತ್, ಎಸ್.ಡಿ.ಎಮ್.ಸಿ. ಅಧ್ಯಕ್ಷ ದಯಾನಂದ ಆಚಾರಿ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here