ಮಕ್ಕಳಿಗೆ ಸೇವಾ ಮನೋಭಾವ,ಸಹಿಷ್ಣುತೆಯನ್ನು ನೀಡುವದು ಶಾಲೆ: ನಾಗೇಂದ್ರ ಹೊನ್ನಾಳಿ

0
26
loading...

30 SDP 1ಸಿದ್ದಾಪುರ,1: ಮಕ್ಕಳಿಗೆ ಸೇವಾ ಮನೋಭಾವ,ಭಾತೃತ್ವ ಭಾವನೆ,ಸಹಿಷ್ಣುತೆಯನ್ನು ನೀಡುವದು ಆಯಾ ಶಾಲೆ ಹಾಗೂ ಶಿಕ್ಷಕರ ಕರ್ತವ್ಯ ಎಂದು ಸಹಾಯಕ ಆಯುಕ್ತ ನಾಗೇಂದ್ರ ಹೊನ್ನಾಳಿ ಹೇಳಿದರು.
ಅವರು ಪಟ್ಟಣದ ಸಿದ್ದಿವಿನಾಯಕ ಬಾಲಕಿಯರ ಪ್ರೌಢಶಾಲೆಯ ಸಭಾಂಗಣದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ 2015-16ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಂದಿನ ನಾಗರಿಕ ಸಮಾಜಕ್ಕೆ ವಿದ್ಯಾರ್ಥಿಗಳ ಉತ್ತಮ ನಾಯಕತ್ವದ ಅವಶ್ಯಕತೆ ಇದೆ.ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಕೇವಲರನ್ನು ಮಾತ್ರ ಬುದ್ದಿವಂತ,ಸಾಂಸ್ಕøತಿಕ,ಕ್ರೀಡಾ ಚಟುವಟಿಕೆಗಳಿಗೆ ಮೀಸಲಾಗಿರುವವರು ಹಾಗೂ ದಡ್ಡರು ಎಂದು ಪ್ರತ್ಯೇಕ ವರ್ಗಗಳನ್ನು ಮಾಡಬಾರದು. ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ ಎರಡರಲ್ಲೂ ಭಾಗವಹಿಸಿದಾಗ ಮಾತ್ರ ಸಧೃಡರಾಗಲು ಸಾಧ್ಯ. ವಿದ್ಯಾರ್ಥಿಗಳನ್ನು ಸಂಸ್ಕøತಿ,ಕಲೆ,ಭಾಷೆ ಹೀಗೆ ಎಲ್ಲಾ ವಿಭಾಗಗಳಲ್ಲಿ ಸಂಘಟಿಸುವ ಅವಶ್ಯಕತೆ ಇದೆ. ಕೇವಲ ನಿಗದಿತ ಶಾಲಾ ಸಮಯಕ್ಕೆ ಮಾತ್ರ ಶಿಕ್ಷಕರ ಜವಾಬ್ದಾರಿ ಸೀಮಿತವಲ್ಲ.ಶಿಕ್ಷಕರು ಶಿಕ್ಷಣದಲ್ಲಿ ಹೊಸ ಪ್ರಯೋಗಗಳನ್ನು ಮಾಡುವ ಅವಶ್ಯಕತೆ ಇದೆ.ಪ್ರತಿಭಾ ಕಾರಂಜಿಯು ಶಿರಸಿ ಶೈಕ್ಷಣಿಕ ಜಿಲ್ಲೆಯ ಹಿಂದುಳಿದ ತಾಲೂಕುಗಳ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ.ವಿದ್ಯಾರ್ಥಿಗಳು ತಮ್ಮ ಉತ್ತಮ ಪ್ರತಿಭೆಯ ಮೂಲಕ ಈ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಗೆದ್ದು ಕಳೆದ ವರ್ಷದಂತೆ ಈ ವರ್ಷವೂ ಸಹ ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಶಿರಸಿ ಶೈಕ್ಷಣಿಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿ ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಮುಖ್ಯ ಅಥಿತಿಗಳಾಗಿ ಉಪಸ್ಥಿತರಿದ್ದ ಶಿರಸಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ನಾಯ್ಕ ಮಾತನಾಡಿ ಜಿಲ್ಲಾ ಗುರುಭವನವನ್ನು ನಿರ್ಮಿಸಲು ಹಣ ಸಂಗ್ರಹಿಸಲಾಗಿದೆ.ಆದರೆ ಕಟ್ಟಡ ನಿರ್ಮಾಣಕ್ಕೆ ಅವಶ್ಯವಿರುವ ಜಾಗವನ್ನು ಮಾನ್ಯ ಸಹಾಯಕ ಆಯುಕ್ತರು ಗುರುಭವನ ಸಮಿತಿಗೆ ಮಂಜೂರು ಮಾಡಿದರೆ ಮಾತ್ರ ಸಾಧ್ಯವಾಗುತ್ತದೆ.ಆದ್ದರಿಂದ ಸಹಾಯಕ ಆಯುಕ್ತರು ಜಾಗವನ್ನು ಗುರುಭವನ ಸಮಿತಿಗೆ ಮಂಜೂರಿ ನೀಡಬೇಕೆಂದು ಮನವಿ ಮಾಡಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ.ಡಿ.ಪಿ.ಆಯ್ ಎಂ.ಎಸ್ ಪ್ರಸನ್ನ ಕುಮಾರ ವಹಿಸಿದ್ದರು.
ಈ ಸಂದರ್ಭದಲ್ಲಿ 2015ನೇ ಮಾರ್ಚ-ಎಪ್ರಿಲ್ ತಿಂಗಳಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಗೆ ಮೊದಲ ಸ್ಥಾನಗಳಿಸಿ ಮೊದಲ 10 ವಿದ್ಯಾರ್ಥಿಗಳಿಗೆ ಹಾಗೂ ಕನ್ನಡ ಮಾಧ್ಯಮ ಹೊರತುಪಡಿಸಿ ಇತರೆ ಮಾಧ್ಯಮದಲ್ಲಿ ಜಿಲ್ಲೆಗೆ ಅತೀ ಹೆಚ್ಚು ಅಂಕ ಪಡೆದ 5 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 100% ಫಲಿತಾಂಶ ಪಡೆದ ಪ್ರೌಢ ಶಾಲೆಗಳಿಗೆ ನಗದು ಪುರಸ್ಕಾರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಅಥಿತಿಗಳಾಗಿ ತಹಶೀಲ್ದಾರ ಡಿ.ಜಿ ಹೆಗಡೆ,ತಾ.ಪಂ ಕಾರ್ಯನಿರ್ವಹಣಾಧಿಕಾರಿ ಶ್ರೀಧರ್ ಎಸ್ ಭಟ್,ಎ.ಸಿ,ಎಫ್ ಎಸ್.ಜಿ ಹೆಗಡೆ,ಜಿ.ಪಂ ಸಹಾಯಕ ಅಭಿಯಂತರ ರೇವಣಸಿದ್ದಯ್ಯ,ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಕೆ ನಾಯ್ಕ,ಪ್ರತಿಭಾ ಕಾರಂಜಿ ನೋಡೆಲ್ ಅಧಿಕಾರಿ ಎಂ.ಎಸ್ ಹೆಗಡೆ,ಕೆಇಬಿ ಇಂಜಿನೀಯರ್ ಡಿ.ಟಿ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.
ಸಿದ್ದಾಪುರ ತಾಲೂಕಾ ಕ್ಷೇತ್ರಶಿಕ್ಷಣಾಧಿಕಾರಿ ಡಿ.ಆರ್ ನಾಯ್ಕ ಸ್ವಾಗತ ಹಾಗೂ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿಯರಾದ ವರ್ಷ ಸಂಗಡಿಗರು ಪ್ರಾರ್ಥನೆ ಹಾಡಿದರು,ಸ್ವಾತಿ ಶೇಟ್ ಸಂಗಡಿಗರು ನಾಡಗೀತೆ ಹಾಡಿದರು.ವಿಕ್ಟೋರಿಯಾ ಸಂಗಡಿಗರು ರೈತಗೀತೆ ಹಾಡಿದರು, .ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಚೈತನ್ಯ ಕುಮಾರ್ ವಂದಿಸಿದರು.

ಶಿಕ್ಷಕರಾದ ಎಂ.ಆರ್ ಭಟ್ ಹಾಗೂ ಸುಧಾರಾಣಿ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here