ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಪ್ರಮುಖವಾದದ್ದು

0
26
loading...


ಕಮತಗಿ 18: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಾಲಕರ ಸಹಭಾಗಿತ್ವವೂ ಅವಶ್ಯಕ ಎಂದು ಇತ್ತೀಚೆಗೆ ಕಮತಗಿ ಸಮೀಪದ ಅಮೀನಗಡ ಪಟ್ಟಣದ ಶಾಲೆಯೊಂದರಲ್ಲಿ ಪಾಲಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಅಮೀಣಗಡ ಪಟ್ಟಣದ ದೊಡ್ಡ ಲಾಲಸಾಬವಾಲಿ ಶಿಕ್ಷಣ ಸಂಸ್ಥೆಯ ಸಾಯಿ ಪಬ್ಲಿಕ ಪೂರ್ವ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆ ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಶಾಲೆ ಆಡಳಿತ ಪಾಲಕರಿಗಾಗಿ ಇತ್ತೀಚೆಗೆ ಕ್ರೀಡಾಕೂಟ ಹಮ್ಮಿಕೊಂಡಿತ್ತು.
ಮಕ್ಕಳು ಶಾಲೆಯಲ್ಲಿನ ಪಠ್ಯಕ್ಕೆ ಮಾತ್ರ ಸೀಮಿತವಾಗದಿರಲಿ. ಪಾಲಕರು ಮಕ್ಕಳ ಶಿಕ್ಷಣವೂ ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ಭಾಗವಹಿಸಿ ಅವರ ಬೆಳವಣಿಗೆಗೆ ಪೂರಕವಾಗಿರಲಿ ಎಂದು ಚಿಂತಿಸಿದ ಶಾಲಾ ಶಿಕ್ಷಕ ವೃಂದ ತಮ್ಮ ಶಾಲೆ ಮಕ್ಕಳ ಪಾಲಕರಿಗಾಗಿ ವಿವಿಧ ಸ್ಪರ್ದೆಗಳನ್ನು ಏರ್ಪಡಿಸಿ ಮಕ್ಕಳಿಗೂ ಪಾಲಕರಿಗೂ ಖುಷಿ ನೀಡುವಲ್ಲಿ ಯಶಸ್ವಿಯಾಯಿತು.
ಎಲ್.ಎಸ್.ಜಾಲಿಹಾಳ, ವಿ.ಎಸ್.ಬಾಗೋಡಿ ಮತ್ತಿತರರು ಪಾಲಕರಿಗಾಗಿ ನಾನಾ ಸ್ಪರ್ದೆಗಳನ್ನು ಹಮ್ಮಿಕೊಂಡು ಮಕ್ಕಳಲ್ಲಿ ಚೈತನ್ಯ ತುಂಬಿದರಲ್ಲದೆ ಪಾಲಕರಲ್ಲಿಯೂ ಸ್ಪರ್ಧಾ ಮನೋಭಾವ ತುಂಬುವಲ್ಲಿ ಸಹಾಯಕರಾದರು.
ಪಾಲಕರಿಗಾಗಿ ಹಮ್ಮಿಕೊಂಡಿದ್ದ ರನ್ನಿಂಗ್ ರೇಸ್‍ನಲ್ಲಿ ಜಯಶ್ರೀ ಬಲಕುಂದಿ (ಪ್ರಥಮ), ಶಕುಂತಲಾ ನಾಗರಾಳ (ದ್ವಿತೀಯ), ಶ್ರೀದೇವಿ ನಿಡಗುಂದಿ (ತೃತೀಯ), ಥರ್ಮಾಕೋಲ್ ಬಾಲ್‍ನಲ್ಲಿ ಶ್ರೀದೇವಿ ನಿಡಗುಂದಿ (ಪ್ರಥಮ), ಚಂದನಾ ಪೂಜಾರಿ (ದ್ವಿತೀಯ), ತಸ್ಲೀಂ ಮಕಾನದಾರ (ತೃತೀಯ), ಬಕೇಟ್ ಕ್ವಾಯಿನ್‍ನಲ್ಲಿ ಅಂಬರೇಶ (ಪ್ರಥಮ), ರಾಘವೇಂದ್ರ (ದ್ವಿತೀಯ) ಪೂಜಾರಿ (ತೃತೀಯ) ಸ್ಥಾನ ಪಡೆದರು.

loading...

LEAVE A REPLY

Please enter your comment!
Please enter your name here