ಮರಳು ಕೊರತೆ ನಿವಾರಿಸುವಂತೆ ಮನವಿ

0
29
loading...

ದಾಂಡೇಲಿ : ನಗರದಲ್ಲಿ ಮರಳಿನ ಕೊರತೆ ನಿವಾರಿಸಲು ಹಾಗೂ ಸರಬರಾಜು ಆಗುತ್ತಿರುವ ಅಲ್ಪ ಸ್ವಲ್ಪ ಮರಳಿಗೆÀ ವಿಧಿಸಲಾಗುವ ದುಬಾರಿ ದರದ ಮೇಲೆ ಕಡಿವಾಣ ಹಾಕುವಂತೆ ದಾಂಡೇಲಿ ಕಟ್ಟಡ ಕಾರ್ಮಿಕರ ಒಕ್ಕೂಟವು ಸಿಐಟಿಯೂ ಮುಖಂಡ ರಾಜೇಸಾಬ ಕೇಸನೂರು ನೇತೃತ್ವದಲ್ಲಿ ಹಳಿಯಾಳ ತಹಶೀಲ್ದಾರರವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಿದೆ.

ಜಿಲ್ಲಾಧಿಕಾರಿಗಳಿಗೆ ನೀಡಲಾದ ಮನವಿಯಲ್ಲಿ ದಾಂಡೇಲಿ ನಗರದಲ್ಲಿ ಸಾವಿರಾರು ಜನ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿದ್ದು, ದಾಂಡೇಲಿ ನಗರದÀಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಕಳೆದ ಒಂದು ವರ್ಷದಿಂದ ದಾಂಡೇಲಿ ನಗರದÀಲ್ಲಿ ಮರಳು ಸರಬರಾಜಿನಲ್ಲಿ ಕೊರತೆ ಉಂಟಾಗಿ ಮರಳು ಸಮರ್ಪಕವಾಗಿ ಸಿಗುತ್ತಿಲ್ಲ. ಹಾಗೂ ಸಿಗುವ ಅಲ್ಪ ಸ್ವಲ್ಪ ಮರಳು ತುಂಬಾ ದುಬಾರಿ ದರದಲ್ಲಿ ಮಾರಾಟವಾಗುತ್ತಿದೆ. ಪರಿಣಾಮವಾಗಿ ಬಹಳಷ್ಟು ಕಟ್ಟಡಗಳ ನಿರ್ಮಾಣ ಕಾಮಗಾರಿಗಳು ಅರ್ಧದಲ್ಲೇ ನಿಂತಿದ್ದು, ಕಟ್ಟಡ ಕಾರ್ಮಿಕರು ಕೆಲಸಕ್ಕಾಗಿ ಪರದಾಡುವ ಪರಿಸ್ಥಿತಿಯು ಉಂಟಾಗಿದೆ.

ಸಾಲ-ಸೋಲ ಮಾಡಿ ಮನೆ ನಿವೇಶನಗಳ ಕಟ್ಟಡ ಕಾಮಗಾರಿಗಳನ್ನು ನಿರ್ಮಿಸುತ್ತಿರುವವರು ಕೂಡಾ ಮರಳಿನ ಕೊರತೆಯಿಂದಾಗಿ ಆತಂಕದಲ್ಲಿದ್ದು, ಕಾಮಗಾರಿಗಳನ್ನು ಅರ್ಧದಲ್ಲೇ ನಿಲ್ಲಿಸಿರುತ್ತಾರೆ. ಆದ್ದರಿಂದ ಮರಳು ಸರಬರಾಜು ಸಮರ್ಪಕವಾಗಿ ಸಾಮಾನ್ಯ ದರದಲ್ಲಿ ಮಾಡಿಸುವ ಮೂಲಕ ಕಟ್ಟಡ ಕಾರ್ಮಿಕರ ಬದುಕಿಗೆ ಆಧಾರವಾಗಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.

ಈ ಸಂದರ್ಭದಲ್ಲಿ ಸಿಐಟಿಯೂ ಮುಖಂಡ ರಾಜೇಸಾಬ ಕೇಸನೂರು, ದಾಂಡೇಲಿ ಕಟ್ಟಡ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ನೂರ ಅಹ್ಮದ ಜಮಾದಾರ, ಕಾರ್ಯದರ್ಶಿ ಅಬ್ದುಲ ಮಜಿದ ಕಿತ್ತೂರು, ಜಮೀರ ಮುಲ್ಲಾ ಹಾಗೂ ಸದಸ್ಯರುಗಳಾದ ಇಕ್ಬಾಲ ಪರವನ, ಮಾರುತಿ ಚೌವ್ಹಾಣ, ಭೀಮಶಿ ಬೋವಿವಡ್ಡರ, ಪ್ರಕಾಶ ಹುಚ್ಚಪ್ಪಾ, ಕುಮಾರ ಗೋವಿಂದ, ನಬಿಸಾಬ ಬಿಜಾಪುರಿ, ರಬ್ಬಾನಿ, ಪಾರುಕು, ಶರೀಪ, ಪರಶುರಾಮ, ಮಹಮ್ಮದ ಶರೀಪ, ಲಕ್ಷ್ಮಣ, ಅಕ್ಬರ, ಮಹಮ್ಮದ ಅಲಿ, ರಾಜು ಮೊದಲಾದವರು ಉಪಸ್ಥಿತರಿದ್ದರು.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here