ಮಲಗಿದ್ದ ಯುವಕ ಮೃತ

0
13
loading...

ಹುಬ್ಬಳ್ಳಿ,7: ಮನೆಯಲ್ಲಿ ಮಲಗಿದ್ದ ಯುವಕ ಇರುಳು ಆಗುವದರೊಳೆಗೆ ಮೃತಪಟ್ಟಿರುವ ಘಟನೆ ನಗರದ ರಾಜನಗರ ಹತ್ತಿರವಿರುವ ಬಾಪುಜಿ ನಗರದಲ್ಲಿ ಡಿ.5 ರಂದು ಮುಂಜಾನೆ ನಡೆದಿದೆ. ರಾಜಶೇಖರ ನಾರಾಯಣ (28) ಮೃತ ಯುವಕನಾಗಿದ್ದು ಆಟೋ ಡ್ರೈವರ್ ಆಗಿರುವ ಈತ ಶುಕ್ರವಾರ ರಾತ್ರಿ 11.30 ರವರೆಗೆ ಟಿ.ವಿ ನೋಡಿ ಮುಂಜಾನೆ 5 ಘಂಟೆಗೆ ಎಬ್ಬಿಸುವಂತೆ ಹೇಳಿ ಮಲಗಿದ್ದ. ಬೆಳ್ಳಿಗ್ಗೆ ಮನೆಯವರು ಎಬ್ಬಿಸಲು ಹೋದಾಗ ಏಳಲಿಲ್ಲ. ತಕ್ಷಣ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಎರಡು ವರ್ಷಗಳ ಹಿಂದೆ ಈತನ ಮದುವೆಯಾಗಿತ್ತು ಕಾಲೇಜ್ ಶಿಕ್ಷಣ ಮುಂದುವರಿಸಲೆಂದು ಪತ್ನಿ ತವರುಮನೆಗೆ ಹೋಗಿದ್ದಳು. ಮೃತವಾಗಿರುವದಕ್ಕೆ ಕಾರಣ ತಿಳಿದುಬಂದಿಲ್ಲ. ಶವದ ಪರೀಕ್ಷೆ ನಡೆದಿದ್ದು. ಅಶೋಕ ನಗರ ಠಾಣೆಯಲ್ಲಿ ದೊರು ದಾಖಲಾಗಿದೆ.

loading...

LEAVE A REPLY

Please enter your comment!
Please enter your name here