ಮಹದಾಯಿ ನದಿ ಜೋಡಣೆಗೆ ಆಗ್ರಹಿಸಿ ನರಗುಂದದ ಧರಣಿ 166 ನೇ ದಿನಕ್ಕೆ ಕಾಲಿರಿಸಿದೆ

0
27
loading...


ನರಗುಂದ : ಮಹದಾಯಿ ನದಿ ನೀರಿನ ವಿಷಯದಲ್ಲಿ ಯಾವಪಕ್ಷಗಳು ಇದುವರೆಗೆ ರೈತರ ಅನುಕೂಲಕ್ಕಾಗಿ ವಿಧಾನಮಂಡಳ ಮತ್ತು ಲೋಕಸಭೆಯಲ್ಲಿ ಧ್ವನಿಯೆತ್ತಿವೆ ಎಂಬುದನ್ನು ಸಧ್ಯದ ಸ್ಥಿತಿಯಲ್ಲಿ ರೈತರು ಗಮನಿಸುತ್ತಿದ್ದಾರೆ. ರಾಜ್ಯದಲ್ಲಿ ಆಡಳಿತ ಹೊಂದಿದ್ದ ಸಂದರ್ಭದಲ್ಲಿ ಕುಮಾರಸ್ವಾಮಿಯವರು ಮಹದಾಯಿ ನೀರಿನ ವಿಷಯ ಕುರಿತು ಹೆಚ್ಚಿನ ಪ್ರಸ್ತಾಪಮಾಡಿಲ್ಲವೆಂದು ಅನೇಕ ರಾಜಕೀಯ ಪಕ್ಷಗಳು ಟೀಕೆಗಳನ್ನು ಮಾಡುವುದಾದರೆ ರಾಷ್ಟ್ರೀಯ ಪಕ್ಷಗಳು ಎಷ್ಟರ ಮಟ್ಟಿಗೆ ಮಹದಾಯಿ ಹಾಗೂ ಕಳಸಾ ಬಂಡೂರಿ ಕುರಿತು ಯೋಜನೆ ರೂಪಿಸಲು ಕಾರ್ಯತಂತ್ರ ಮಾಡಿದ್ದವೆಂದು ಈ ಹಿಂದಿನ ಎಲ್ಲ ಲೆಕ್ಕಾಚಾರಗಳನ್ನು ತೆಗೆದುಕೊಂಡಾಗ ಬಿಜೆಪಿ ಹಾಗೂ ಕಾಂಗ್ರೆಸ್ ಈ ಎರಡೂ ಪಕ್ಷಗಳು ಮಹದಾಯಿ ಯೋಜನೆ ಕುರಿತು ಯಾವುದೇ ಘನಕಾರ್ಯಮಾಡಿಲ್ಲ. ಬಿಜೆಪಿ ಕಳಸಾ ನಾಲಾಕ್ಕೆ ಆಗ ಕಾರ್ಯ ನಡೆಸಿದ್ದರೆ ಈಗಿನ ರಾಜ್ಯ ಸರ್ಕಾರ ಅದಕ್ಕೂ ಕಲ್ಲು ಹಾಕಿತೆಂದು ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವಿರೇಶ ಸೊಬರದಮಠ ಇಂದಿಲ್ಲಿ ಟೀಕೆ ಮಾಡಿದರು.
ಮಲಪ್ರಭಾ ಮಹದಾಯಿ ನದಿ ಜೋಡಣೆಗೆ ಆಗ್ರಹಿಸಿ ನರಗುಂದದಲ್ಲಿ ಸೋಮವಾರ ನಡೆದ ಧರಣಿ 166 ನೇ ದಿನಕ್ಕೆ ಕಾಲಿರಿಸಿದ್ದು ಸಭೆಯಲ್ಲಿ ಮಾತನಾಡಿದ ಅವರು, ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಕುಮಾರಸ್ವಾಮಿಯವರು ಈ ಯೋಜನೆ ಕುರಿತು ಬಹಳಷ್ಟು ಚರ್ಚೆಮಾಡಿ ಮಹದಾಯಿ ಯೋಜನೆಯನ್ನು ಜಾರಿಗೆ ತರಲು ಪ್ರಯತ್ನಿಸಬೇಕಾಗಿತ್ತು ಎಂದು ತಿಳಿಸಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದರು ಅವರಿಗಿಂತ ಹೆಚ್ಚಿನ ಸ್ಥಾನದಲ್ಲಿ ಈಗಲೂ ಹೊರಟ್ಟಿಯವರು ಇಲ್ಲ. ಆದರೆ ವಿಧಾನಪರಿಷತ್ ಸದಸ್ಯರಾಗಿ ಈಗಲೂ ಅವರಿದ್ದು ಮಹದಾಯಿ ಯೋಜನೆ ಕುರಿತು ಎಷ್ಟರಮಟ್ಟಿಗೆ ಇವರು ಶ್ರಮವಹಿಸಿದ್ದಾರೆ ಎಂಬುದನ್ನು ಅರಿತು ಕೊಳ್ಳಬೇಕು. ತಾವು ಒಬ್ಬ ರೈತ ಕುಲದಲ್ಲಿ ಹುಟ್ಟು ಬೆಳೆದ ಹೊರಟ್ಟಿಯವರು ಇದುವರೆಗೂ ರೈತರ ಧರಣಿಯಲ್ಲಿ ಪಾಲ್ಗೊಂಡಿಲ್ಲ. ಎಲ್ಲಿಯೋ ಕುಳಿತು ಪತ್ರಿಕಾಗೋಷ್ಟಿಯಲ್ಲಿ ಹೇಳಿಕೆ ನೀಡಿ ತಮ್ಮ ಜವಾಬ್ದಾರಿ ಮುಗಿಯಿತೆಂದು ಭಾವಿಸದೇ ರೈತರ ಧರಣಿಗೆ ಬಂದು ಭಾಗವಹಿಸಬೇಕೆಂಧು ತಿಳಿಸಿದರು.
ಮುಂದೆವರೆದು ಮಾತನಾಡಿದ ಸೊಬರದಮಠ, ರೈತರು ಇನ್ನು ಮುಂದೆ ಮಹದಾಯಿ ನದಿ ಜೋಡಣೆಗೆ ಸರ್ಕಾರಕ್ಕೆ ಆಗ್ರಹಿಸಿ ಪ್ರಧಾನಿಗಳಿಗೆ ಇಂಟರ್‍ನೆಟ್ ಮೂಲಕ ಸಂದೇಶ ರವಾನಿಸಲಿದ್ದಾರೆ. ಇದನ್ನಾದರೂ ಪ್ರಧಾನಿ ನರೇಂದ್ರ ಮೋದಿ ಅರಿತುಕೊಂಡು ಮಹದಾಯಿ ನದಿ ನೀರಿನ ವಿವಾದ ಇತ್ಯರ್ಥಮಾಡಲಿ ಎಂದು ತಿಳಿಸಿದರಲ್ಲದೇ, ಕಾಂಗ್ರೆಸ್ ಹಾಗೂ ಬಿಜೆಪಿ ಇನ್ನಿತರ ಕೆಲ ಪಕ್ಷಗಳು ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ 50 ಸಾವಿರಗಿಂತ ಹೆಚ್ಚು ಹಣ ರುಷುವತ್ತು ನೀಡಿ ಚುನಾವಣೆ ನೀತಿ ನಿಯಮಗಳನ್ನು ಗಾಳಿಗೆ ತೂರಿವೆ ಎಂದು ಟೀಕೆ ಮಾಡಿದರು.
ಶ್ರೀಶೈಲ ಮೇಟಿ, ಚಂದ್ರಗೌಡ ಪಾಟೀಲ, ಮಹೇಶ್ವರಯ್ಯ ಸುರೇಬಾನ, ವಿಠಲ ಜಾಧವ, ಎಸ್.ಬಿ. ಜೋಗಣ್ಣವರ ಮಾತನಾಡಿದರು. ಯಲ್ಲಪ್ಪ ಗುಡದರಿ, ರುದ್ರಯ್ಯ ಕುರವತ್ತಿಮಠ, ಸಂಭಾಜಿ ಜಾಧವ, ಬಸಲಿಂಗಪ್ಪ ಹುಲಗಣ್ಣವರ, ಹನುಮಪ್ಪ ಪಡೇಸೂರ, ಎಸ್.ಕೆ. ಗಿರಿಯಣ್ಣವರ, ಅಯ್ಯಪ್ಪ ಮಜ್ಜಗಿ, ಬಿ.ಎಸ್. ಉಪ್ಪಾರ, ಅಂದಪ್ಪ ತೊಂಡಿಹಾಳ, ಎಸ್.ಬಿ. ಜೋಗಣ್ಣವರ, ನಿಂಗನಗೌಡ ಪಾಟೀಲ, ಬಸಪ್ಪ ಭಜಂತ್ರಿ, ವೀರಣ್ಣ ಸೊಪ್ಪಿನ,ಮಲ್ಲಪ್ಪ ಐನಾಪೂರ, ಸಿದ್ದಪ್ಪ ಚಂದ್ರತ್ನವರ, ಮಾದೇವಪ್ಪ ಮುಳ್ಳೂರ ಉಪಸ್ಥಿತರಿದ್ದರು.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here