ಮಾನವೀಯ ಮೌಲ್ಯ ಕಲಿಸುವ ಶಿಕ್ಷಣ ಇಂದಿನ ಅಗತ್ಯ: ಶ್ರೀ ವೀರೇಶಾನಂದ ಸರಸ್ವತಿ

0
33
loading...

 

ಬೆಳಗಾವಿ:1 ಅಭಿವೃದ್ಧಿಯ ಹೆಸರಿನಲ್ಲಿ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿ ಮನುಷ್ಯ ಮನಸುಗಳ ಮಧ್ಯೆ ಗೋಡೆ ಕಟ್ಟಿಕೊಳ್ಳುವುದಕ್ಕಿಂತ ಮಾನವೀಯ ಮೌಲ್ಯಗಳನ್ನು ಕಲಿಸುವ ಮನಸುಗಳ ಮಧ್ಯೆ ಸೇತುವೆಗಳನ್ನು ಬೆಸೆಯುವ ಶಿಕ್ಷಣ ಇಂದಿನ ಅಗತ್ಯ ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನ0ದ ಸರಸ್ವತಿ
ಸ್ವಾಮಿಗಳು ಹೇಳಿದರು.

ಅವರು ಇಲ್ಲಿನ ವಿಶ್ವೇಶ್ವರಯ್ಯ ತಾ0ತ್ರಿಕ ವಿಶ್ವವಿದ್ಯಾಲಯದಲ್ಲಿ “ಡಿಜಿಟಲ್ ಯುಗದಲ್ಲಿ ಗ್ರ0ಥಾಲಯಗಳ ಒಕ್ಕೂಟ-ಅವಕಾಶಗಳು ಹಾಗೂ ಸವಾಲುಗಳು” ಎ0ಬ ವಿಷಯ ಮೇಲೆ ಎರಡು ದಿನಗಳ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ, ಸಮಾರಂಬದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ಶಿಕ್ಷಣ ಎಂಬುದು ಕೇವಲ ಸಂಬಳ ಎಣಿಸುವುದಕ್ಕೆ ಎಂಬ ಭಾವನೆ ಇಂದು ವಿದ್ಯಾವಂತರಲ್ಲಿದೆ. ಶಿಕ್ಷಕ ಎಂದರೆ ಶಿಕ್ಷಕರಿಗೂ ಶಿಕ್ಷಕ ಎಂಬ ಭಾವನೆ ಮೂಡಬೇಕು. ಕಲಿಯುವ ಆಸಕ್ತಿ ವುಳ್ಳವನೇ ಕಲಿಸಲು ಯೋಗ್ಯ ಎಂಬಂತೆ ಶಿಕ್ಷಕರಲ್ಲಿ ಕಲಿಯುವ ಆಸಕ್ತಿ ನಿರಂತರವಾಗಬೇಕು. ಶಿಕ್ಷಕರೂ ಗ್ರಂಥಾಲಯಗಳ ತರಹ ಮಾಹಿತಿ ಕಣಜವಾದಾಗ ಮಾತ್ರ ಮಕ್ಕಳ ಎಲ್ಲಾ ಸಂದೇಹಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ವಿದ್ಯಾರ್ಥಿ ಜೀವನದಲ್ಲಿ ಅಧ್ಯಯನ ಬಹುದೊಡ್ಡ ಪಾತ್ರ ವಹಿಸುತ್ತದೆ. ಹಾಗಾಗಿ ಗ್ರಂಥಾಲಯವನ್ನು ಯೋಗ್ಯ ರೀತಿಯಲ್ಲಿ ಬಳಸಿಕೊಳ್ಳಲು ಮುಮದಾಗಬೇಕು. ಗ್ರಂಥಾಲಯಗಳ ಸದ್ಬಳಕೆಯಾದಲ್ಲಿ ಮಾತ್ರ ಸಮಾಜದಲ್ಲಿ ಅಪರಾಧ ಹಾಗೂ ಅನಾಚಾರಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಅವರು ಉಪಕತೆಗಳ ಮೂಲಕ ಮನಮುಟ್ಟುವಂತೆ ತಮ್ಮ ಆಶೀರ್ವಚನದಲ್ಲಿ ವಿವರಿಸಿದರು.
ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ವಿಶ್ರಾ0ತ ಪ್ರಾಧ್ಯಾಪಕರಾದ ಡಾ. ಪಿ. ವಿ. ಕೊನ್ನೂರ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಆಧುನಿಕ ಮಾಹಿತಿ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಸುವ ಮೂಲಕ ಎಲ್ಲಾ ಗ್ರಂಥಾಲಯಗಳನ್ನು ಒಂದೇ ಸಾಮಾಜಿಕ ಜಾಲ ತಾಣದ ಅಡಿ ತರುವುದರಿಂದ ಓದುಗರಿಗೆ ತಾವು ಕುಳಿತಲ್ಲಿಯೇ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಹಿಂದೆಲ್ಲಾ ಗ್ರಂಥಾಲಯದ ಶುಚಿತ್ವ, ಮೇಲುಸ್ತುವಾರಿ, ಜೋಡಿಸಿಡುವುದೇ ದೊಡ್ಡ ಕೆಲಸವಾಗಿತ್ತು. ಆದರೆ ಆಧುನಿಕ ತಂತ್ರಜ್ಞಾನದ ಇ-ಲೈಬ್ರೆರಿಯಿಂದ ಈ ಕಾರ್ಯ ಸುಲಭವಾಗಿದ್ದು, ಓದುಗರಿಗೆ ಅಂತಾರಾಷ್ಟ್ರೀಯ ಲೇಖಕರ ಪುಸ್ತಕಗಳೂ ಕೈಗೆಟಕುವಂತಾಗಿದೆ. ಒಂದೇ ಸೂರಿನಡಿ ಓದುಗರಿಗೆ, ವಿದ್ಯಾರ್ಥಿಗಳಿಗೆ ಎಲ್ಲಾ ಮಾಹಿತಿ ಸಿಗುವಂತಾಗಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಶ್ರಮ ಶ್ಲಾಘನೀಯ ಎಂದು ಅವರು ಹೇಳಿದರು.
ಕುಲಪತಿ ಡಾ. ಹೆಚ್. ಮಹೇಶಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು. ಇದೇ ವೇಳೆ ವೃದ್ಧಿ ಕಮ್ಯುನಿಕೇಶನ್ ಕ್ಲಬ್‍ನ್ನು ಉದ್ಘಾಟಿಸಲಾಯಿತು.
ವಿಟಿಯು ಗ್ರಂಥಪಾಲಕರು ಹಾಗೂ ಕಾರ್ಯಾಗಾರದ ಸಂಯೋಜಕರಾದ ಡಾ. ಕೆ.ಆರ್. ಮುಲ್ಲಾ, ರೆಜಿಸ್ಟ್ರಾರ್ ಕೆ.ಇ ಪ್ರಕಾಶ್, ಮೌಲ್ಯಮಾಪಕರಾದ ಕೆಇ ಶೇಖರಪ್ಪ ಉಪಸ್ಥಿತರಿದ್ದರು.

ಉನ್ನತ ಶಿಕ್ಷಣ ಸಚಿವರ ಗೈರು:
ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಬೇಕಾದ ರಾಜ್ಯ ಸ0ಸದೀಯ ವ್ಯವಹಾರ, ಮಾನವ ಹಕ್ಕುಗಳು ಹಾಗೂ ಉನ್ನತ ಶಿಕ್ಷಣ ಸಚಿವ ಟಿ. ಬಿ. ಜಯಚ0ದ್ರ ಅವರು ಬೆಂಗಳೂರಿನಿಂದ ಹೊರಡಬೇಕಾಗಿದ್ದ ವಿಮಾನದ ವೇಳಾಪಟ್ಟಿಯಲ್ಲಿ ಬದಲಾವಣೆಯಾದ ಕಾರಣಕ್ಕೆ ಕಾರ್ಯಕ್ರಮಕ್ಕೆ ಗೈರಾಗಿದ್ದರು.

loading...

LEAVE A REPLY

Please enter your comment!
Please enter your name here