ಮಾರುಕಟ್ಟೆ ಜಾಗ ಸ್ವಚ್ಛಗೊಳಿಸಲು ಆಗ್ರಹ

0
12
loading...

ಗುಳೇದಗುಡ್ಡ: ನಗರದಲ್ಲಿ ದನಗಳ ಸಂತೆ ಹಾಗೂ ಎ.ಪಿ.ಎಂ.ಸಿ ಮಾರುಕಟ್ಟೆಗೆ ನಿಗದಿಪಡಿಸಿದ ಜಮೀನಿನಲ್ಲಿ ಸ್ವಚ್ಛತಾಕಾರ್ಯ ಕೈಗೊಳ್ಳುವಂತೆ ಆಗ್ರಹಿಸಿ ಸ್ಥಳೀಯ ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿಗಳ ಸಂಘದ ವತಿಯಿಂದ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ನಗರದಲ್ಲಿ ದನಗಳ ಸಂತೆ ಹಾಗೂ ಎ.ಪಿ.ಎಂ.ಸಿ ಮಾರುಕಟ್ಟೆ ನಿರ್ಮಿಸಲು ಸ್ಥಳ ನಿಗದಿಯಾಗಿ ಆರು ತಿಂಗಳಾದರೂ ಮಾರುಕಟ್ಟೆಯ ಸ್ಥಳವನ್ನು ಸ್ವಚ್ಛಗೊಳಿಸಲಾಗಿಲ್ಲ. ಕೂಡಲೇ ಸ್ಥಳವನ್ನು ಸ್ವಚ್ಛಗೊಳಿಸದಿದ್ದರೆ ಸಂಘ ವತಿಯಿಂದ ಉಗ್ರಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಮನವಿಲ್ಲಿ ಎಚ್ಚರಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಮೋಹನ ಮಲಜಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here