ಮಾರುತಿ ದೇವರ ಕಾರ್ತಿಕೋತ್ಸವ

0
27
loading...

 

ಘಟಪ್ರಭಾ 16 : ಸಮೀಪದ ಅರಭಾಂವಿ ಗ್ರಾಮದ ಶ್ರೀ ಮಾರುತಿ ದೇವರ ಕಾರ್ತಿಕೋತ್ಸವವು ಪ್ರತಿವರ್ಷದ ಪದ್ದತಿಯಂತೆ ದಿ.18ರಿಂದ 20ರವರೆಗೆ ಅತೀ ವಿಜೃಂಭನೆಯಿಂದ ಜರುಗಲಿದೆ.
ದಿ.18ರಂದು ಮುಂಜಾನೆ ಶ್ರೀ ಮಾರುತಿ ದೇವರ ಮಹಾರುದ್ರಾಭಿಷೇಕ,ರಾತ್ರಿ 9 ಗಂಟೆಗೆ ಶ್ರೀ ಬಸವೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಜರುಗಲಿದೆ.

ದಿ.19ರಂದು ಮುಂಜಾನೆ 9ಗಂಟೆಗೆ ಓಡುವ ಶರ್ತು, ಸಾಯಕಲ್ ಶರ್ತು, ಜೋಡೆತ್ತಿನ ತೆರೆಬಂಡಿ ಶರ್ತು ಜರುಗಲಿದ್ದು ರಾತ್ರಿ 10 ಗಂಟೆಗೆ ಶಿಂದಿಕುರಬೇಟ,ದುರದುಂಡಿ, ಅರಭಾಂವಿ ಗ್ರಾಮದ ಬ್ಯಾಂಡ, ಹಲಗಿ ವಾದ್ಯ, ಸಂಬಾಳ ವಾದ್ಯ, ಕರಡಿ ಮದಲಾಸಿದೊಂದಿಗೆ ಪಲ್ಲಕ್ಕಿ ಉತ್ಸವ ಜರುಗಲಿದೆ.
ದಿ.20ರಂದು ಮುಂಜಾನೆ ಭಾರ ಎತ್ತುವ ಶರ್ತು, ಸುಪ್ರಸಿದ್ಧ ಜಂಗೀ ಕುಸ್ತಿಗಳು, ರಾತ್ರಿ 10-30ಕ್ಕೆ ಶ್ರೀ ಕರೆಮ್ಮಾದೇವಿ ನಾಟ್ಯ ಸಂಘ ಅರಭಾಂವಿ ಇವರು ಅರ್ಪಿಸುವ 19ನೇ ಕಲಾಕುಸುಮ “ಧರ್ಮದ ದಾರಿಗೆ ದೇವರ್ಯಾರು…?” ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಶ್ರೀ ಮಾರುತಿ ದೇವರ ಕೃಪೆಗೆ ಪಾತ್ರರಾಗಬೆಕೆಂದು ಕಾರ್ತಿಕೋತ್ಸವ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

loading...

LEAVE A REPLY

Please enter your comment!
Please enter your name here