ಮುಂಡರಗಿ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳ ತೊಂದರೆ ರೋಗಿಗಳ ಪರದಾಟ

0
35
loading...

news-1aಮುಂಡರಗಿ,8: ಸಾಮಾನ್ಯವಾಗಿ ತಾಲೂಕಿನಲ್ಲಿ ಅಥವಾ ಹೋಬಳಿಗಳಲ್ಲಿ ಸರ್ಕಾರಿ ಆಸ್ಪತ್ರೆ ಬಡವರ ಭಾಗ್ಯದಾತ ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ ಮನುಷ್ಯನಿಗೆ ಪ್ರತಿ ನಿತ್ಯ ಕೂಲಿ ಮಾಡಿ ಬಂದ ಹಣದಿಂದ ಸಂಸಾರ ಸಾಗಿಸುವುದೇ ಕಷ್ಟವಾಗಿರುವ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಹೋಗುವುದಾರೇ ದುಡಿದ ಹಣ ಸಾಲದು ನಂತರ ಸಾಲಕ್ಕೆ ಮೋರೆ ಹೋಗುವದು  ಇಲ್ಲವಾದಲ್ಲಿ ಆಗ ಬಡವನ ಪಾಲಿಗೆ ನೆನಪಾಗುವುದೇ ಸರಕಾರಿ ಆಸ್ಪತ್ರೆ ಪ್ರ್ರತಿಯೊಬ್ಬ ರೋಗಿಯು ಯಾವುದೇ ರೋಗದಿಂದ ಬಳಲುತ್ತಿದ್ದರೂ, ವೈದ್ಯರು ತಮ್ಮ ರೋಗವನ್ನು ವಾಸಿಮಾಡುತ್ತಾರೆಂದು  ತಾವು ನಂಬಿದ ದೇವರಿಗಿಂತ ಹೆಚ್ಚಾಗಿ ವೈದ್ಯರನ್ನು ನಂಬಿಬರುವುದು ಸಹಜ ಆದರೆ ಇದು ಯಾರ ಕಥೆ ಅಂಥಾ ಹೇಳುತ್ತಿದ್ದಾರೆ ತಿಳಿದುಕೊಳ್ಳಬೇಡಿ ಮುಂಡರಗಿ ಆಸ್ಪತ್ರೆಯ ಮೂಲ ಸೌಲಭ್ಯ ವಂಚಿತವಾಗಿ ರೋಗಿಗಳಿಗಿಂತ ಆಸ್ಪತ್ರೆಗೆ ವೈದ್ಯರಿಲ್ಲದೆ ರೋಗ ಅಂಟಿಕೊಂಡಿದೆ.
[highlight] ಸೌಲಭ್ಯ ವಂಚಿತ ಆಸ್ಪತ್[/highlight]ರೆ:  ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಜನ ಸಂಖ್ಯೆಯು ಹೆಚ್ಚಳವಾಗುತ್ತಿದ್ದು ಅದರಂತಯೇ ರೋಗಗಳು ಹೆಚ್ಚುತ್ತಿವೆ, ರೋಗಿಗಳು ಹೆಚ್ಚುತ್ತಿದ್ದಾರೆ.  ಅದೇ ರೀತಿ ಆಸ್ಪತ್ರೆಗಳು ಹಾಗೂ ಅದರ ಮೂಲ ಸೌಲಭ್ಯಗಳು ಹೆಚ್ಚಬೇಕು ಹೊರತು ಅದೇ ರಾಗ ಅದೇ ಹಾಡು ಮಾತು ಮಾತ್ರ ತಪ್ಪಿದ್ದಲ್ಲ ಯಾಕೆಂದರೆ ಮೊದಲು ಆಸ್ಪತ್ರೆ ಹೇಗಿತ್ತೋ ಹಾಗೇಯೇ ಇದೇ  ಹೊರತು ಇಂದಿನ ತಂತ್ರಜ್ಞಾನದ ಯುಗದಲ್ಲಿ ಈ ಮುಂಡರಗಿಯ ಆಸ್ಪತ್ರೆ ನೂರಕ್ಕೆ ನೂರರಷ್ಟು ಹಿಂದುಳಿದಿರುವದು ಅಪ್ಪಟ ಸತ್ಯದ ಮಾತು.
ತಾಲೂಕಿಗೆ ಹಿರಿಯಣ್ಣ ಅಂದರೆ ತಾಲೂಕಿಗಿರುವ ಸರ್ಕಾರಿ ಆಸ್ಪತ್ರೆ ಮಾತ್ರ ಇಲ್ಲಿ ಪ್ರತಿಯೊಂದೂ ಸೌಲಭ್ಯಗಳಿರಬೇಕಾಗಿರುತ್ತದೆ.ಆದರೆ ರೋಗಿಗಳ ಚಿಕಿತ್ಸೆಗೆ ಮುಖ್ಯವಾಗಿ ಬೇಕಾದ ಅನುಭವಿ ತಜ್ಞ ವೈದ್ಯರು,ಆಧುನಿಕ ವಿದ್ಯುತ್ ತಂತ್ರಜ್ಞಾನದ ಉಪಕರಣಗಳು, ಮನುಷ್ಯನ ದೇಹದ ಎಲ್ಲಾ ಭಾಗದ ಸ್ಕ್ಯಾನಿಂಗ್,ಮಾಡಲು ಅವಶ್ಯಕತೆಯ ಸಲಕರಣೆಗಳು, ಒಂದು ವೇಳೆ ಯಾವುದೇ ಗಂಬೀರವಾದ ಅಪಘಾತ ಸಂಭವಿಸಿದಾಗ ತಕ್ಷಣ ಸೂಕ್ತ ಚಿಕಿತ್ಸೆಯಿಂದ ಸರಿಪಡಿಸಲು ಬೇಕಾಗುವ ವಿಶೇಷತೆಗಳು ಆಸ್ಪತ್ರೆಯಲ್ಲಿ ಇರದೇ ಇರುವದರಿಂದ ನೇರವಾಗಿ ಕಾಣುವುದೇ ಸರಕಾರಿ ಜಿಲ್ಲಾ ಆಸ್ಪತ್ರೆ ಹೋಗಬೇಕು ಆಕಸ್ಮಾತಾಗಿ ಗಂಭೀರವಾದ ಅಪಘಾತವಾಗಿದ್ದರೆ ಅಥವಾ ಅಷ್ಟರೊಳಗೆ ರೋಗಿಯ ಪ್ರಾಣ ಉಳಿದರೇ ಮರುಜನ್ಮ ಬಂದಂತಯೇ? ಹೊರತು ರೋಗಿಗಳ ಕಣ್ಮುಂದೇ ಮತ್ಯಾವ ದಾರಿಯು ಕಾಣದು.
[highlight]ವೈದ್ಯರ ಹಾಗೂ ಸಿಬ್ಬಂದಿಗಳ ಕೊರತೆ[/highlight]: ಪಟ್ಟಣದ ತಾಲೂಕ ಸರ್ಕಾರಿ ಆಸ್ಪತ್ರೆಯಲ್ಲಿ ಒಟ್ಟು 82ಸಿಬ್ಬಂದಿ ವರ್ಗ ಹೊಂದಿದ್ದು ಆದರೆ ಇಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕೇವಲ 30ಜನ ಮಾತ್ರ ಅದರಲ್ಲಿ ವೈದ್ಯರ ಸಂಖ್ಯೆಯಂತು ತುಂಬಾನೇ ಕಡಿಮೆ.ಇಡೀ ತಾಲೂಕಿಗೆ ಒಂದೇ ಆಸ್ಪತ್ರೆ ಅಂದ ಮೇಲೆ ಇಲ್ಲಿ ಪ್ರತಿಯೊಂದು [highlight]ರೋಗಕ್ಕೂ ಒಬ್ಬೊಬ್ಬರು ವಿಶೇಷ ರೋಗ ವೈದ್ಯಾಧಿಕಾರಿಗಳು ಉದಾಹರಣೆಗೆ: [/highlight]ಕಾರ್ಡಿಯೋಲಾಜಿಸ್ಟ್, ಗೈನಕಾಲಾಜಿಸ್ಟ್, ಈ ರೀತಿಯ ಅನುಭವಿ ಹಾಗೂ ಕಾರ್ಯದಕ್ಷತೆಯ ವೈದ್ಯಧಿಕಾರಿಗಳ ಸೌಲಭ್ಯ ಇಲ್ಲದೇ ಇರುವದರಿಂದ ಮುಂಡರಗಿ ಆಸ್ಪತ್ರೆ ರೋಗಿಗಳ ಪಾಲಿಗೆ ಹಾಗೂ ತಾಲೂಕಿಗೆ ಇದ್ದರೂ ಇಲ್ಲದಂತಾಗಿದೆ. ಒಟ್ಟಾರೆಯಾಗಿ ಇಲ್ಲಿ ಸುಮಾರ ಒಂದು ನೂರು ಬೆಡ್‍ಗಳ ವ್ಯವಸ್ತೆಯಿದ್ದು  ಸರಿಯಾದ ರೀತಿಯಲ್ಲಿ ವೈದ್ಯರುಗಳ ಹಾಗೂ ನರ್ಸ್‍ಗಳ ವ್ಯವಸ್ಥೆ ಇಲ್ಲವಾದ್ದರಿಂದ ರೋಗಿಗಳು ಇಲ್ಲಿ ನರಕ ಯಾತನೆಯನ್ನು ಅನುಭವಿಸುತ್ತಾರೆ. ಇಲ್ಲಿ ಹೆರಿಗೆ ಮತ್ತು ಸಾಮಾನ್ಯ ರೋಗಗಳಿಗೆ ಚಿಕಿತ್ಸೆ ಕೊಡುವ ವೈದ್ಯರು ಮಾತ್ರ ಇದ್ದಾರೆ ಆದರೆ ಒಮ್ಮೊಮ್ಮೆ ಅವರೂ ಕೂಡ ಲಭ್ಯವಿರುವುದಿಲ್ಲ.
ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳು ಹಗಲಿರುಳು ಆಸ್ಪತ್ರೆ ತೆರೆದಿರಬೇಕು  ಆದರೆ ಈ ಆಸ್ಪತ್ರೆಯಲ್ಲಿ ಹಗಲು ಬಂದರೆ ಎನೋ ಸ್ವಲ್ಪ ಚಿಕಿತ್ಸೆ ಪಡೆಯಬಹುದು ರಾತ್ರಿಯಾಯಿತೆಂದರೆ ನರ್ಸಗಳ ದರ್ಬಾರ ಯಾಕೆಂದರೆ ಹೆಚ್ಚು ಕಡಿಮೆ ಅವರಿಗೆ ಎನು ಅನ್ನುವ ಹಾಗೇಯೇ ಇಲ್ಲ ಎನಾದರು ಸ್ವಲ್ಪ ಮಾತನಾಡಿದರೇ ಸಾಕು  ಜಿಲ್ಲಾ ಆಸ್ಪತ್ರೆಗೆ ಹೋಗಿ ಎನ್ನುತ್ತಾರೆ ಇಲ್ಲಿಂದ ಗದುಗಿಗೆ ಹೋಗ ಬೇಕಾದರೆ ಸರಿ ಸುಮಾರು ಒಂದು ಗಂಟೆ ಸಮಯ ಬೇಕು ಹೆಣ್ಣು ಮಕ್ಕಳಿಗೆ ಹೆರಿಗೆ ನೋವು ಹಾಗೂ ಗಂಬೀರ ಆಘಾತಗಳಿಗೆ ಎಂದು ಪರಿಹಾರ ?
[highlight] ಸ್ವಚ್ಚತೆ ಬಗ್ಗೆ :[/highlight]ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ವಚ್ಚತೆಗೆ ಹೆಚ್ಚು ಒತ್ತು ನೀಡಿದ್ದರು ನಿಮ್ಮ ನಡೆಗೆ ಆರೋಗ್ಯದ ಕಡೆಗೆ ಆದರೆ ಇಲ್ಲಿ ಮಾತ್ರ ಅಧಿಕಾರಿಗಳ ನಡೆಗೆ ಮನೆಯ ಕಡೆಗೆ ಅವರ ವಿಚಾರದಲ್ಲಿ ಇರುವುದು ಕನಿಷ್ಟ ಪಕ್ಷ ತಿಂಗಳಿಗೊಮ್ಮೆ ತಾವೇ ಇರುವ ವಸತಿ ಗೃಹಗಳ ಮುಂದೆ ಸ್ವಚ್ಚ ಮಾಡಿದರೇ ಸಾಕು ಆಸ್ಪತ್ರೆಯ ಸುತ್ತ ಮುತ್ತಲು ಸ್ವಚ್ಚತೆ ಮಾಡುವುದು ಬಹು ದೂರದ ಮಾತು.

[highlight]ಗಿಡಗಳಿಗಿಲ್ಲ ರಕ್ಷಣೆ[/highlight] :ಒಂದು ಕಡೆ ವೈದ್ಯರಿಲ್ಲ ಎನ್ನುವಂತಾದರೆ ಇನ್ನೊಂದು ಕಡೆ ತಾಲೂಕ ಸರ್ಕಾರಿ ಆಸ್ಪತ್ರೆ ಅವ್ಯವಸ್ಥತೆಯನ್ನು ಹೊಂದಿದೆ, ಆಸ್ಪತ್ರೆಯಸುತ್ತ ಮುತ್ತಲೂ ಗಿಡಗಳನ್ನು ಬೆಳೆಸಲಾಗಿದ್ದು ಪ್ರತಿನಿತ್ಯ ಅದೇ ಗಾಳಿಯಿಂದ ಬದುಕುವ ವೈದ್ಯಾಧಿಕಾರಿಗಳು ಗಮನ ನೀಡಿ ಉದ್ಯಾನವನಕ್ಕೆ ಅಥವಾ ಗೀಡಗಳಿಗೆ ಸೂಕ್ತ ರಕ್ಷಣೆ ನೀಡಬೇಕಾಗಿದೆ.
[highlight]ಹಂದಿಗಳ ದರ್ಬಾರ[/highlight]: ಆಸ್ಪತ್ರೆಗೆ ಬರುವ ಸಾರ್ವಜನಿಕರೂ, ರೋಗಿಗಳು ಕೂಡ ಅಲ್ಲೇ ಕಸ ಹಾಗೂ ತ್ಯಾಜ್ಯಗಳನು ಎಸೆದಿರುತ್ತಾರೆ.ಆ ತ್ಯಾಜ್ಯಗಳು ಅದೇ ಜಾಗದಲ್ಲಿ ಕೊಳೆತು ಸೊಳ್ಳೆಗಳ ಜನನಕ್ಕೆ ಪ್ರಮುಖ ಕಾರಣವಾಗುತ್ತವೆ. ಇದರಿಂದ ರೋಗಿಗಳ ರೋಗ ವಾಸಿಯಾಗುವ ಬದಲು ಇನ್ನೂ ಅನಾರೋಗ್ಯ ಹೆಚ್ಚಾಗುತ್ತಾ ಹೋಗುತ್ತದೆ.

ಇಷ್ಟೆಲ್ಲಾ ಇರುವಾಗಲೆ ಪಕ್ಕದಲ್ಲಿ ಮಾರುಕಟ್ಟೆ ಇರುವುದರಿಂದ ಸಾಮಾನ್ಯವಾಗಿ ಈ ಪ್ರದೇಶ ಯಾವಾಗಲೂ ಗದ್ದಲ, ಗಲಾಟೆಯಿಂದ ಕೂಡಿರುತ್ತದೆ. ಯಾವುದೇ ರೀತಿಯಲ್ಲಿಯೂ ಶಾಂತಿಯು ಇರುವುದೇ ಇಲ್ಲ. ಇಂತಹ ಜಾಗದಲ್ಲಿ ಆಸ್ಪತ್ರೆ ಇರುವುದರಿಂದ ರೋಗಿಗಳಿಗೆ ತುಂಬಾ ತೊಂದರೆಯಾಗುತ್ತದೆ. ಹಾಗೇ ಆಸ್ಪತ್ರೆಯ ಒಳಗಡೆ ಮತ್ತು ಹೊರಗಡೆ ಬರೀ ಗಲಿಜಿನಿಂದ ಕೂಡಿರುತ್ತದೆ ಇದರಿಂದ ಆಸ್ಪತ್ರೆಯಲ್ಲಿ ಹಂದಿಗಳ ಕಾಟವೂ ಹೆಚ್ಚಾಗಿದೆ.

[highlight] ನಾವು ಕೂಲಿ,ನಾಲಿ ಮಾಡ್ಕೊಂಡು ಬದ್ಕೋರೀ ಸ್ವಾಮಿ, ಇವತ್ತಿನ ಕಾಲ್ದಾಗ ದಿನಕ್ಕಾ 100ರೂ, ದುಡಿದು ನಾವು ಬದ್ಕೋದು ಕಷ್ಟ ಆಗೈತ್ರೀ, ನಮ್ಮ ಕೈಲಿ ದೊಡ್ಡ ಆಸ್ಪತ್ರೆಗೆ ಹೋಗಾಕ ಆಗಲ್ಲರೀ, ಅದಕ್ಕೆ ಸರ್ಕಾರಿ ದವಾಖಾನೆ ಬಂದಿವ್ರೀ, ಆದ್ರೆ ಇಲ್ಲನೋಡಿದ್ರೆ ಇಲ್ಲಿ ನಮ್ನಾ ಸರಿಯಾಗಿ ನೋಡೋ ಡಾಕ್ಟರ್‍ನ ಇಲ್ಲರೀ, ಪದೇ-ಪದೇ ದವಾಖಾನಿಗೆ ಬರೋದೇ ಆಗೈತ್ರೀ.
-ಪರುಸುರಾಮ ಬೆಣ್ಣೀಹಳ್ಳಿ (ರೋಗಿ)

loading...

LEAVE A REPLY

Please enter your comment!
Please enter your name here