ಮೂಲಭೂತ ಸೌಲಭ್ಯಗಳಿಂದ ವಂಚಿತ: ಸಾರ್ವಜಿಕರ ಆರೋಪ

0
19
loading...

10..sht..story.[highlight]ನಾಗನಗೌಡ.ಎಸ್.ಮರಿಗೌಡ್ರ[/highlight]
ಶಿರಹಟ್ಟಿ,10: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಕೂಡಾ ತಾಲೂಕಾ ಕೇಂದ್ರವಾದ ಶಿರಹಟ್ಟಿ ನಗರದ 16ನೇ ವಾರ್ಡಿನ ಶಿವಲಿಂಗ ನಗರಕ್ಕೆ ಸರಕಾರದ ಯಾವುದೇ ತರಹದ ಯೋಜನೆಗಳು ಲಭ್ಯವಾಗದೇ ವಂಚಿತವಾಗಿದೆ.

ಸಮರ್ಪಕವಾಗಿ ರಸ್ತೆ ಬೀದಿ ದೀಪಗಳು ಪಕ್ಕಾ ಗಟಾರಗಳು ಸೇರಿದಂತೆ ಹಲವಾರು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ನಗರದ 16ನೇ ವಾರ್ಡನ (ಶಿವಲಿಂಗನಗರ)  ಸರ್ಕಾರಿ ಪ್ರಾಥಮಿಕ ಶಾಲೆ ಹಿಂಬದಿಯಲ್ಲಿ ಇರುವ ಮನೆಗಳಲ್ಲಿ ಇಲ್ಲಿರುವವರು ಮನುಷ್ಯರೇ ಅಲ್ಲವೆ? ಪ್ರಶ್ನೆ ಜನತೆಗೆ ಕಾಡುತ್ತಿದೆ.

ವರವಿ ರಸ್ತೆಗೆ ಹೂಂದಿಕೊಂಡಿರುವ ಇಲ್ಲಿ ದಶಕದ ಹಿಂದೆ ಮನೆಗಳು ನಿರ್ಮಾಣವಾಗಿವೆ. ಶಿವಲಿಂಗ ನಗರದಲ್ಲಿ ಸುಮಾರು ನೂರಾರು ಮನೆಗಳಿದ್ದು, ಇಲ್ಲಿ ವಿವಿಧ ಸಮುದಾಯದವರು, ಕೂಲಿಕಾರ್ಮಿಕರು ಹಾಗೂ ಸಾಮಾನ್ಯವರ್ಗದ ಜನತೆ ಮನೆಗಳನ್ನು ನಿರ್ಮಿಸಿಕೊಂಡು ಹಲವಾರು ವರ್ಷಗಳಿಂದ ಉಪಜೀವನ ನಡೆಸುತ್ತಿದ್ದಾರೆ. ಸಾವಿರಾರು ಜನಸಂಖ್ಯೆಯನ್ನು ಹೊಂದಿದ ಪ್ರದೇಶ ಇದಾಗಿದ್ದು, ಪಟ್ಟಣದ ಕೇಂದ್ರ ಭಾಗಕ್ಕೆ ಸಂಪರ್ಕ ಕಲ್ಪಿಸುವ ಸಮರ್ಪಕವಾದ ರಸ್ತೆಗಳಿಲ್ಲದೇ ಅನಾಥವಾಗಿದೆ. ಈ ಕುರಿತು ಹಲವಾರು ಭಾರಿ ಜನಪ್ರತಿನಿಧಿಗಳಿಗೆ ಮನದಟ್ಟು ಮಾಡಿಕೊಟ್ಟರೂ ಸಹ ಯಾವುದೇ ಪ್ರಯೋಜನಗಳಾಗಿಲ್ಲ. ಮಳೆಗಾಲ ಆರಂಭವಾಯಿತೆಂದರೆ ಸಾಕು ಮಳೆಯಿಂದಾಗಿ ರಸ್ತೆಗಳಲ್ಲಿನ ಕಂದಕಗಳು ತುಂಬಿಕೊಂಡು ಜನತೆ ಸಂಚಾರಕ್ಕೆ ಅಡೆತಡೆಯಾಗುತ್ತದೆ.ಕೂಲಿಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮೇಲೆ ಒತ್ತಡ ತರಲು ಸಾಧ್ಯವಾಗದೇ ಇದ್ದದರಲ್ಲೇ ಕಷ್ಟದ ಜೀವನ ನಡೆಸುವಂತಾಗಿದೆ.

[highlight]ಅಧಿಕಾರಿಗಳ ನಿರ್ಲಕ್ಷ್ಯ [/highlight]
ರಸ್ತೆಗಳ ಮೇಲೆ ಅಲ್ಲಲ್ಲಿ  ಗಿಡ-ಗಂಟೆಗಳು ಬೆಳೆದು ನಿಂತಿದ್ದರೂ ಪಟ್ಟಣ ಪಂಚಾಯತಿ ಆಡಳಿತವಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ, ಉಪ ಜೀವನ ನಡೆಸಲು ಮಾರುಕಟ್ಟೆಗೆ ಪ್ರತಿದಿನ ಸಂಚಾರ   ನಡೆಸ ಬೇಕಾದರೆ ಹರಸಾಹಸ ಪಡುವಂತಾಗಿದೆ. ಅದರಲ್ಲೂ ಮಳೆಗಾಲದಲ್ಲಿ ಕಾಲು ನಡುಗೆಯಲ್ಲಿ ತೆರಳಬಾಕಾದರೆ ಜನತೆ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಛೀಮಾರಿ ಹಾಕುವುದು ಸಾಮಾನ್ಯವಾಗಿದೆ. ರಸ್ತೆ ಬದಿಗಳಲ್ಲಿನ ಚರಂಡಿಗಳಲ್ಲಿ ನೀರು ನಿಂತು ಗಬ್ಬುನಾರುತ್ತಿದೆ. ನಿಂತ ನೀರಿನಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಹರಡುವ ಸಾಧ್ಯತೆ ಇರುವುದರಿಂದ ಮನೆಯ ಸುತ್ತಲೂ ಈ ರೀತಿಯ ವಾತಾವರಣ ಇರುವುದು ಮಾರಕವಾಗಿ ಪರಿಣಮಿಸಿದೆ. ಮಹಾಮಾರಿಯಾಗಿರುವ ಡೆಂಗ್ಯೂ ರೋಗ ಹರಡುವ ಎಲ್ಲ ಲಕ್ಷಣಗಳೂ ಇಲ್ಲಿವೆ.
[highlight] ರಸ್ತೆದಾಟುವುದು ಕಷ್ಟಕರವಾಗಿದೆ [/highlight]
ಬಡಾವಣೆಯಲ್ಲಿರುವ ರಸ್ತೆಗಳ ಮೇಲೆ ಸಾಕಷ್ಟು ಗಿಡ-ಗಂಟೆಗಳು ಬೆಳೆದಿದ್ದು, ರಸ್ತೆಯಿಂದ ಪಕ್ಕದ ರಸ್ತೆಗೆ ಹೋಗಬೇಕಾದರೇ ಮಧ್ಯದಲ್ಲಿರುವ ದೊಡ್ಡ ಚರಂಡಿಯನ್ನು ಪಾರು ಮಾಡಿಕೊಂಡು ತೆರಳಬಾಕಾಗಿದೆ. ನಗರದಲ್ಲಿ ಸಮರ್ಪಕವಾದ ಬೀದಿ ದೀಪಗಳು ಕಂಡು ಬರುದಿಲ್ಲ, ರಾತ್ರಿಯಾಯಿತೆಂದರೇ  ಮಹಿಳೆಯರು ಮತ್ತು ಮಕ್ಕಳು ಇದರಿಂದಾಗಿ ಪರದಾಡುವಂತಾಗಿದೆ. ರಸ್ತೆಗಳನ್ನು ದಾಟಲು ಸಿಡಿಗಳನ್ನು ಸಹ ನಿರ್ಮಿಸಲು ಯಾರು  ತಲೆಕೆಡಿಸಿಕೊಂಡಿಲ್ಲ. ನಗರದ ಮೂಲಸೌಕರ್ಯಗಳನ್ನು ನೀಡಲು ಪಟ್ಟಣ ಪಂಚಾಯತಿ ಸೂಕ್ತ  ಕ್ರಮ ತೆಗದುಕೊಳ್ಳಬೇಕಾಗಿದೆ.

ಈ ವ್ಯವಸ್ಥೆಯ ವಿರುದ್ದ ಹೋರಾಟದ ಧ್ವನಿವಿಲ್ಲದ ಕಾರಣ ನಗರದ ಸೌಕರ್ಯಗಳನ್ನು ಪಡೆದುಕೊಳ್ಳುವಲ್ಲಿ ವಿಫಲವಾಗಿದೆ. ಬೀದಿ ದೀಪಗಳವಿಲ್ಲದ ಕಾರಣ ರಾತ್ರಿಯಾಯಿತೆಂದರೇ ಕಳ್ಳ-ಕಾಕರ ಹಾವಳಿ.ಸಮರ್ಪಕವಾದ ಪೊಲೀಸ್ ಕಾವಲು ಇಲ್ಲದೇ ಇಲ್ಲಿನ ಜನತೆ ಆತಂಕದಲ್ಲೇ ಜೀವನ ನಡೆಸುವ ಪರಿಸ್ಥಿತಿ ಎದುರಾಗಿದೆ. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಪಟ್ಟಣದ 16ನೇ ವಾರ್ಡಿನ ಶಿವಲಿಂಗನಗರ ಮೂಲಸೌಕರ್ಯಗಳು ನೀಡಿವಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ. ಹಾಗೂ ಜಿಲ್ಲಾಧಿಕರಿಗಳು ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಸೂಚನೆ ನೀಡಬೇಕು ಒಂದು ವೇಳೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಳಂಬ ಮಾಡಿದರೆ ಜಿಲ್ಲಾಧಿಕಾರಿಗಳ ಕಚೇರಿ ಎದರು ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು 16ನೇ ವಾರ್ಡಿನ ಜನತೆ ಎಚ್ಚರಿಕೆ ನೀಡಿದ್ದಾರೆ.

loading...

LEAVE A REPLY

Please enter your comment!
Please enter your name here