ಮೆಟ್ಟಿಲ ದೀಪೋತ್ಸವ ಸಂಭ್ರಮ

0
28
loading...

DSC00634ಗಂಗಾವತಿ,7 : ತಾಲೂಕಿನ ಆನೆಗುಂದಿ ಸಮೀಪವಿರುವ ಐತಿಹಾಸಿಕ ಪ್ರಸಿದ್ದ ಅಂಜನಾದ್ರಿ ಬೆಟ್ಟದಲ್ಲಿ ಕಾರ್ತಿಕ ಮಾಸದ ಕಡೇ ಶನಿವಾರದ ನಿಮಿತ್ಯ ಆರನೇ ವರ್ಷದ ಮೆಟ್ಟಿಲ ದೀಪೋತ್ಸವ ಸಂಭ್ರಮದಿಂದ ಜರುಗಿತು.
ಯುವಕ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಮೆಟ್ಟಿಲ ದೀಪೋತ್ಸವ ಕಾರ್ಯಕ್ರಮಕ್ಕೆ ರಾಜಾ ವಂಶಸ್ಥರಾದ ಶ್ರೀರಂಗದೇವರಾಯಲು, ಲಲಿತಾರಾಣಿ ಶ್ರೀರಂಗದೇವರಾಯಲು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆಯಲ್ಲಿ ಮಾತನಾಡಿ, ಲಲಿತಾರಾಣಿ ಶ್ರೀರಂದೇವರಾಯಲು, ದೀಪೋತ್ಸವ ಎಲ್ಲರ ಬಾಳಿನಲ್ಲಿ ಭಗವಂತ ಬೆಳಕನ್ನು ನೀಡಲಿ ಎನ್ನುವುದು ನಮ್ಮ ಆಶಯವಾಗಿದೆ. ಅಲ್ಲದೆ ಯುವಕರು ಸ್ವಯಂ ಆಗಿ ದೀಪೋತ್ಸವ ಕಾರ್ಯಕ್ರಮದಂತಹ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉತ್ತಮ ವ್ಯಕ್ತಿಗಳಾಗಲಿ, ಕಿಷ್ಕಿಂದಾ ಪ್ರದೇಶವನ್ನು ವಿಶ್ವ ಮಟ್ಟದಲ್ಲಿ ಬೆಳೆಯಲಿದೆ ಎಂದರು.
ಪ್ರತಿ ವರ್ಷದಂತೆ ಅಂಜನಾದ್ರಿ ಬೆಟ್ಟದ ಸುಮಾರು 570ಕ್ಕೂ ಹೆಚ್ಚು ಮೆಟ್ಟಿಲುಗಳಿಗೆ ದೀಪೋತ್ಸವ ಹಾಗು ಹನುಮಾನ್ ಚಾಲೀಸ್ ಪಠಣ ಕಾರ್ಯಕ್ರಮ ಜರುಗಿತು.
ಮೆಟ್ಟಿಲ ದೀಪೋತ್ಸವ ಕಾರ್ಯಕ್ರಮಕ್ಕೆ ಕನಕಗಿರಿ, ಹೇರೂರು, ಮರಳಿ ಆಚಾರ ನರಸಾಪೂರ, ಹೋಸ್ಕೇರಾ, ಕೇಸರಹಟ್ಟಿ, ಸಂಗಾಪೂರ, ಹನುಮನಹಳ್ಳಿ, ಆನೆಗುಂಡಿ, ಸಣಾಪೂರ, ಹೇರೂರು, ಚಿಕ್ಕಜಂತಕಲ್ ಗ್ರಾಮಗಳಿಂದ ನೂರಾರು ಭಕ್ತರು ಆಗಮಿಸಿ ಮೆಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಿಂದುಪರ ಸಂಘಟನೆಗಳ ಮುಖಂಡ ಶಿವುಕುಮಾರ ಅರಿಕೇರಿ ನಾಗರಾಜ ನಾಯಕ್, ಪರಶುರಾಮ ಕಲ್ಗುಡಿ, ಸತೀಶ ಭೊಜಶೆಟ್ಟರ್, ಮಹಿಳಾ ಮುಖಂಡರಾದ ಹುಲಿಗೆಮ್ಮ ಹೊಸಳ್ಳಿ, ಶೈಲೇಶ, ಹನುಮಂತರೆಡ್ಡಿ, ಶೇಷರಾವ್ ಗೂಗಿಬಂಡಿಕ್ಯಾಂಪ್, ಸೇರಿದಂತೆ ಇನ್ನಿತರ ಯುವಕ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಪ್ರಮುಖರು ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here