ಮೊಬೈಲ್ ಸಂಖ್ಯೆ, ಆಧಾರ ಕಾರ್ಡ್ ನೀಡಲು ಹೆಸ್ಕಾಂ ಗ್ರಾಹಕರಲ್ಲಿ ಮನವಿ

0
21
loading...

 

ಖಾನಾಪುರ 23 : ಪಟ್ಟಣ ಹಾಗೂ ತಾಲೂಕಿನ ಎಲ್ಲ ಹೆಸ್ಕಾಂ ಗ್ರಾಹಕರು ಡಿ.31ರ ಒಳಗಾಗಿ ತಮ್ಮ ಆರ್ ಆರ್ ಸಂಖ್ಯೆ ಹೊಂದಿರುವ ವಿದ್ಯುತ್ ಬಿಲ್ಲಿನ ಜೊತೆ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿಗಳ ನಕಲು ಮತ್ತು ಮೊಬೈಲ್ ಸಂಖ್ಯೆಗಳನ್ನು ಮೀರಟ್ ರೀಡರ್ ಅವರ ಬಳಿ ಅಥವಾ ಹೆಸ್ಕಾಂ ಕಚೇರಿಯಲ್ಲಿ ನೀಡಲು ಹೆಸ್ಕಾಂ ಎಇಇ ಎನ್ ಎಸ್ ಕಾತ್ರಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಕ್ರಮ ಸಕ್ರಮ ಯೋಜನೆ: ಮಧ್ಯವರ್ತಿಗಳಿಗೆ ಹಣ ನೀಡದಂತೆ ಮನವಿ
ಖಾನಾಪುರ: ತಾಲೂಕಿನಾದ್ಯಂತ 2014ರಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ಸಕ್ರಮಗೊಂಡ ರೈತರ ವಿದ್ಯು ಪಂಪ್ ಸೆಟ್‍ಗಳಿಗೆ ಮೂಲ ಸೌಕರ್ಯ ಒದಗಿಸುವ ಕಾರ್ಯ ಪ್ರಗತಿಯಲ್ಲಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲ ಮಧ್ಯವರ್ತಿಗಳು ರೈತರನ್ನು ಸಂಪರ್ಕಿಸಿ ಹಣ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ತಾಲೂಕಿನ ರೈತರು ಯಾವುದೇ ಮಧ್ಯವರ್ತಿಗಳೊಂದಿಗೆ ಹಣದ ವ್ಯವಹಾರ ಮಾಡಬಾರದು ಮತ್ತು ಬಲವಂತವಾಗಿ ಹಣ ವಸೂಲಿ ಮಾಡುವ ಸಂದರ್ಭಗಳು ಉದ್ಭವವಾದ ಪಕ್ಷದಲ್ಲಿ ವಿವರಗಳೊಂದಿಗೆ ತಮ್ಮ ಕಚೇರಿಗೆ ಮಾಹಿತಿ ನೀಡಬೇಕೆ ಎಂದು ಹೆಸ್ಕಾಂ ಎಇಇ ಎನ್ ಎಸ್ ಕಾತ್ರಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here