ಯಡಿಯೂರಪ್ಪ ಸರಕಾರ ಗ್ರಾಮೀಣ ಅಭಿವೃದ್ದಿಗಾಗಿ ಹಲವಾರು ಜನಪ್ರಿಯ ಕೆಲಸ ಮಾಡಿದ್ದರು: ಲಕ್ಷ್ಮಣ ಸವದಿ

0
21
loading...

 

ರಾಯಬಾಗ 21 : ರಾಜ್ಯದಲ್ಲಿ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಬಿ.ಜೆ.ಪಿ ಸರಕಾರ ಗ್ರಾಮೀಣ ಅಭಿವೃದ್ದಿಗಾಗಿ ಹಲವಾರು ಜನಪ್ರಿಯ ಕೆಲಸಗಳನ್ನು ಮಾಡಿದ್ದು ಅವುಗಳು ನಮ್ಮ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರ ಗೆಲುವಿಗೆ ವರದಾನವಾಗಲಿದೆಎಂದು ಮಾಜಿ ಸಚಿವ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ರಾಯಬಾಗ ಪಟ್ಟಣದ ಮಹಾದೇವ ಮಂಗಲ ಕಾರ್ಯಾಲಯದಲ್ಲಿ ರವಿವಾರ ಸಂಜೆ ನಡೆದ ವಿಧಾನ ಪರಿಷತ ಚುನಾವಣೆಯ ಬಿ.ಜೆ.ಪಿ.ಅಭ್ಯರ್ಥಿ ಮಹಾಂತೇಶ ಕವಟಗಿಮಠ ಪರ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ 9648 ಮತದಾರರಿದ್ದು ಅವರಲ್ಲಿ 4630 ಬಿ.ಜೆ.ಪಿ.ಬೆಂಬಲಿತ ಸದಸ್ಯರಿದ್ದಾರೆ. ಹೀಗಾಗಿ ಮಹಾಂತೇಶ ಕವಟಗಿಮಠ ಅವರ ಗೆಲವು ನಿಶ್ಚಿತ ಎಂದ ಅವರು ಮತದಾರರು ಕೇವಲ ಪ್ರಥಮ ಪ್ರಾಶ್ಯಸ್ತ ಮತ ಒಂದನ್ನೆ ಹಾಕಬೇಕೆಂದು ಹೇಳಿದರು.

ರಾಯಬಾಗ ಶಾಸಕ ಡಿ.ಎಂ. ಐಹೋಳೆ ಪ್ರಾಸ್ತಾವಿಕ ಮಾತನಾಡಿ ಬಿ.ಜೆ.ಪಿ. ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರು ಆರು ವರ್ಷಗಳಲ್ಲಿ ಜಿಲ್ಲಿಯಲ್ಲಿಯಲ್ಲಿ ಸಾಕಷ್ಟು ಅಭಿವೃದ್ದಿ ಕೇಲಸಗಳನ್ನು ಮಾಡಿದ್ದಾರೆ ಮತದಾರರು ಅವರಗೆ ಇನ್ನೊಮ್ಮೆ ಅವಕಾಶ ನೀಡಿ ಗೆಲುವಿಸಿ ಮುಂದಿನ ಆರು ವರ್ಷಗಳ ಕಾಲ ಅಭಿವೃದ್ದಿ ಕೇಲಸಗಳನ್ನು ಮಾಡಲು ಅವಕಾಶ ನೀಡಬೇಕೆಂದರು. ಮತದಾರರು ಕೇವಲ ಪ್ರಥಮ ಪ್ರಾಶ್ಯಸ್ತ ಮತವನ್ನು ಮಾತ್ರ ಹಾಕಬೇಕೆಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ವಿಧಾನ ಪರಿಷತ ಸದಸ್ಯ ಅರುಣ ಶಾಹಾಪುರ, ಬಿ.ಜೆ.ಪಿ.ಅಭ್ಯರ್ಥಿ ಮಹಾಂತೇಶ ಕವಟಗಿಮಠ, ಮಾಜಿ ಶಾಸಕರಾದ ಬಿ.ಸಿ. ಸರಿಕರ, ಮನೋಹರ ಕಟ್ಟಿಮನಿ, ಶಾಂತಾ ಕಲ್ಲೋಳಿಕರ, ಅಣ್ಣಾಸಾಹೇಬ ಜೊಲ್ಲೆ, ಉಮೇಶರಾವ ಬಂಟೊಡಕರ, ಡಾ.ಎಸ್.ಕೆ ಗೂಡೊಡಗಿ, ದುಂಡಪ್ಪಾ ಭೆಂಡವಾಡೆ, ಮಹೇಶ ಭಾತೆ, ಭರತೇಶ ಬನವಣೆ, ಕೆ.ಕೆ. ಮೈಶಾಳೆ, ಸಿದ್ದಲಿಂಗ ಹಿರೇಕುರಬರ, ಸುರೇಶ ಮಾಳಿ, ಸದಾನಂದ ಹಳಿಂಗಳಿ, ಸದಾಶಿವ ಹುಂಜಾಗೊಳ, ಬಸಗೌಡಾ ಆಸಂಗಿ, ಸದಾಶಿವ ಘೊರ್ಪಡೆ ಬಸವರಾಜ ಡೊಣವಾಡೆ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here