ರಕ್ತದಾನ ಶಿಬಿರ

0
21
loading...

ಖಾನಾಪುರ 17: ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಬಿ.ಎಂ ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ 10ಕ್ಕೂ ಹೆಚ್ಚು ದಾನಿಗಳು ತಮ್ಮ ರಕ್ತವನ್ನು ನೀಡಿ ಮಾನವೀಯತೆ ಮೆರೆದರು.
ಶಿಬಿರವನ್ನು ಉದ್ಘಾಟಿಸಿದ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ಪಿ.ಆರ್.ಒ ಅರುಣ ನಾಗಣ್ಣವರ ಮಾತನಾಡಿ, ಮಧ್ಯವಯಸ್ಕ ಆರೋಗ್ಯವಂತ ಯುವಕರು ಮತ್ತು ಪುರುಷರು ತಮ್ಮ ರಕ್ತವನ್ನು ದಾನ ಮಾಡಲು ಮುಂದೆ ಬಂದರೆ ರಕ್ತದ ಅವಶ್ಯಕತೆ ಇರುವ ರೋಗಿಗಳ ಜೀವ ಉಳಿಸಿದ ಪುಣ್ಯ ಬರುತ್ತದೆ. ಜೊತೆಗೆ ರಕ್ತದಾನದಿಂದ ರಕ್ತ ನೀಡಿದ ವ್ಯಕ್ತಿಗೂ ವಿವಿಧ ಲಾಭಗಳಿರುವುದು ವೈದ್ಯಕೀಯ ಸಂಶೋಧನೆಯಿಂದ ಧೃಡಪಟ್ಟಿದೆ ಎಂದರು.
ಬಿ.ಎಂ ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ಅಧಿಕಾರಿ ಡಾ.ಮಹಾಂತೇಶ ರಾಮಣ್ಣವರ ಮಾತನಾಡಿ, ಕಳೆದ 14 ತಿಂಗಳುಗಳಿಂದ ಬೆಳಗಾವಿಯ ಬಿ.ಎಂ ಕಂಕಣವಾಡಿ ಆಯುರ್ವೇದ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಎರಡನೇ ಶನಿವಾರ ಮುಂಜಾನೆ 9ರಿಂದ 12ರ ಅವಧಿಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗುತ್ತಿದ್ದು, ಈಗಾಗಲೇ 182 ದಾನಿಗಳು ತಮ್ಮ ರಕ್ತವನ್ನು ದಾನರೂಪದಲ್ಲಿ ನೀಡಿ ಮಾನವೀಯತೆ ಮೆರದಿದ್ದಾರೆ ಎಂದು ಮಾಹಿತಿ ನೀಡಿದರು.
ಡಾ.ಅಮಿತ ಉಪಾಧ್ಯೆ, ಡಾ.ಬಿ ಬಿ ದೇಸಾಯಿ, ಯುಥ್ ರೆಡ್ ಕ್ರಾಸ್ ಸಂಸ್ಥೆಯ ಅರುಣ ಬಿರಾದಾರ ಸೇರಿದಂತೆ ವೈದ್ಯಕೀಯ ವಿದ್ಯಾರ್ಥಿಗಳು ರಕ್ತದಾನ ಶಿಬಿರವನ್ನು ನಡೆಸಿಕೊಟ್ಟರು.

loading...

LEAVE A REPLY

Please enter your comment!
Please enter your name here