ರಕ್ತದಾನ ಶ್ರೇಷ್ಠದಾನ

0
30
loading...

ಗೋಕಾಕ 31: ಜೀವದಿಂದ ಜೀವಿಯ ಉತ್ಪತ್ತಿ. ಹಾಗೆಯೇ ವ್ಯಕ್ತಿಯ ರಕ್ತಜೀವದಾನದಿಂದ ಇನ್ನೊಂದು ಜೀವಿಯ ಉಳಿವು ಸಾಧ್ಯವೆಂದು ನಗರದ ಖ್ಯಾತ ವೈದ್ಯ ಡಾ. ಯು. ಬಿ. ಆಜರಿಯವರು ಅಭಿಪ್ರಾಯಪಟ್ಟಿದ್ದಾರೆ.

ಅವರು, ಜೆ. ಎಸ್. ಎಸ್ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕಾಲೇಜಿನ ‘ಯುವರೆಡ್ ಕ್ರಾಸ್ ಘಟಕ, ರೋವರ್ ಸ್ಕೌಟ್ಸ್ ಘಟಕ ಮತ್ತು ರೋಟರಿ ರಕ್ತ ಭಂಡಾರ ಘಟಕ’ ಇವರ ಸಹಯೋಗದಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು, ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ, ರಕ್ತದಾನ ಪ್ರಯೋಜನಗಳ ಬಗೆಗೆ ಜನತೆಯಲ್ಲಿ ಜಾಗೃತಿಯನ್ನುಂಟು ಮಾಡಬೇಕು; ಪ್ರತಿಯೊಬ್ಬರೂ ವರಷಕ್ಕೆ ಎರಡು ಬಾರಿಯಾದರೂ ರಕ್ತದಾನ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಮುಂದುವರಿದು ಮಾತನಾಡಿದರು.
ಪ್ರಾಚಾರ್ಯ ಮತ್ತು ಜಾನಪದ ತಜ್ಞ ಡಾ| ಸಿ. ಕೆ. ನಾವಲಗಿ ಮಾತನಾಡುತ್ತ, ರಕ್ತದಾನ ಶ್ರೇಷ್ಠದಾನ, ಅದನ್ನು ಕೊಡುವ ಅವಕಾಶ ಮನುಷ್ಯನಿಗೆ ಮಾತ್ರ ಇದೆ ಎಂದು ತಮ್ಮ ಅಧ್ಯಕ್ಷೀಯ ಸಮಾರೋಪ ಮಾಡಿದರು. ಸುಮಾರು 40 ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ಉಪ-ಪ್ರಾಚಾರ್ಯ ಡಾ| ಎಸ್. ಎಸ್. ತೇರದಾಳ, ಸ್ಥಳೀಯ ಎಚ್.ಡಿ.ಎಫ್.ಸಿ. ಬ್ಯಾಂಕ್‍ನ ಅಸಿಸ್ಟಂಟ್ ಮ್ಯಾನೇಜರ್ ಸಚಿನ್ ಕುಲಕರ್ಣಿ, ಪ್ರೊ. ಎಂ. ಎಂ. ಕತ್ತಿ, ಎ. ಕೆ. ಕಿಳ್ಳಿಕೇತ, ಪ್ರೊ. ಎಸ್. ಬಿ. ಹಾವಣ್ಣವರ, ಪ್ರೊ. ಬಿ. ಎಂ. ತುರಡಗಿ ಮೊದಲಾದವರು ಉಪಸ್ಥಿತರಿದ್ದರು. ಡಾ| ಎಸ್. ಬಿ. ಹೊಸಮನಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

loading...

LEAVE A REPLY

Please enter your comment!
Please enter your name here