ಲಕ್ಷ್ಮೇಶ್ವರದಲ್ಲಿ ಅಪರೂಪದ ಗುರುನಮನ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನ

0
28
loading...

ಶಿರಹಟ್ಟಿ : ತಾಲೂಕಿನ ಲಕ್ಷ್ಮೇಶ್ವರ ಪಟ್ಟಣದಲ್ಲಿ 1980 ರಲ್ಲಿ ಅಂದರೆ ಕಳೆದ 35 ವರ್ಷಗಳ ಹಿಂದೆ ಇಲ್ಲಿನ ಪುರಸಭೆ ಉಮಾ ವಿದ್ಯಾಲಯದ ಪ್ರೌಢ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ಅಭ್ಯಾಸ ಮಾಡುತ್ತಿದ್ದ ಗೆಳೆಯರೆಲ್ಲ ಒಗ್ಗೂಡಿ ಕಳೆದ ಮೂರು ವರ್ಷಗಳಿಂದ “ಗೆಳೆಯರ ಹಬ್ಬ” ಎಂಬ ವಿನೂತನ ಕಾರ್ಯಕ್ರಮ ಆಚರಿಸುತ್ತಿದ್ದು ಈ ನಿಟ್ಟಿನಲ್ಲಿ ರವಿವಾರ ರವೀಂದ್ರ ಓದಾನವರ ತೋಟದಲ್ಲಿ 3 ನೇ ವರ್ಷದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ನಿಮಿತ್ಯ ಈ ಮಿತ್ರ ತಂಡಕ್ಕೆ ಶಿಕ್ಷಣ ನೀಡಿದ ಸುಮಾರು 12 ಜನ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿದ ಅಪರೂಪದ ‘ಗುರುನಮನ’ ಕಾರ್ಯಕ್ರಮಕ್ಕೆ ನೂರಾರು ಮಿತ್ರರ ತಂಡವು ಸಾಕ್ಷೀಯಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಸನ್ಮಾನಿತರಾದ ನಿವೃತ್ತ ಶಿಕ್ಷಕ ಡಾ.ಎನ್.ವ್ಹಿ.ಧೂಳಖೇಡ, ಆರ್.ಕೆ.ಕುಲಕರ್ಣಿ ಅವರು ಮಾತನಾಡಿ, ನಾವು ಮನಸ್ಸಿನಲ್ಲಿ ಏನು ಸಂಕಲ್ಪ ಮಾಡುತ್ತೇವೆಯೋ ಅದನ್ನೇ ಕೃತಿಯಲ್ಲಿ ಪಾಲಿಸಬೇಕು. ಅಂದಾಗ ಮಾತ್ರ ನಮಗೆ ಸಮಾಜದಲ್ಲಿ ಗೌರವ ಸನ್ಮಾನ ದೊರೆಯಲು ಸಾಧ್ಯ. ನಾವು ಹುಟ್ಟುವಾಗ ಅಳುತ್ತಾ ಹುಟ್ಟಿ ಸಾಯುವಾಗ ನಗುತ್ತಾ ಸಾಯಬೇಕು, ಈ ನಡುವಿನ ಅವದಿಯಲ್ಲಿ ಸಮಾಜಕ್ಕೆ ನಾವು ಏನನ್ನಾದರೂ ಒಳ್ಳೆಯದನ್ನು ಮಾಡುವ ಉದ್ದೇಶವನ್ನು ಹೊಂದಿರಬೇಕು ಎಂದು ಹೇಳಿದ ಅವರು ಕಳೆದ 35 ವರ್ಷಗಳ ಹಿಂದೆ ನಮ್ಮ ಹತ್ತಿರ ವಿದ್ಯೆ ಕಲಿತ ಶಿಷ್ಯಂದಿರು ಒಗ್ಗೂಡಿ ಗೆಳೆಯರ ಹಬ್ಬ ಎಂಬ ಹೆಸರಲ್ಲಿ ಸಮಾಜಮುಖಿ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಅದೇ ರೀತಿ ಉಳಿದವರು ಸಮಾಜ ಸೇವೆಗೆ ಮುಂದಾಗಬೇಕು ಎಂದು ಕರೆ ನೀಡಿದ ಅವರು ವಿದ್ಯೆ ಕಲಿಸಿದ ಗುರು, ಕಲಿತ ಶಾಲೆ, ಜನ್ಮ ನೀಡಿದ ತಂದೆ ತಾಯಿ, ಅನ್ನ ನೀರು ಕೊಟ್ಟ ದೇಶದ ಋಣವನ್ನು ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸಮಾಜಕ್ಕಾಗಿ ತ್ಯಾಗ ಮಾಡುವವನೇ ನಿಜವಾದ ಸುಖಿ. ತ್ಯಾಗದಿಂದ ಮನಸ್ಸಿಗೆ ನೆಮ್ಮದಿ, ಸಮಾಧಾನ ದೊರೆಯುತ್ತದೆ ಎಂದರು.

ಇನ್ನೊರ್ವ ಸನ್ಮಾನಿತ ಶಿಕ್ಷರಾದ ಎಂ.ಎಸ್.ಬಡಿಗೇರ, ಜಿ.ಕೆ.ಕುಲಕರ್ಣಿ, ಡಾ.ಜಿ.ಎಸ್. ಕೋಟಿಮಠ ಮಾತನಾಡಿ, ಮನುಷ್ಯನಲ್ಲಿ ವಿಶಾಲ ಮನೋಭಾವನೆ ಬೆಳೆದು ಬರಬೇಕು ಅಂದಾಗಲೆ ಸಮಾಜಕ್ಕೆ ಒಂದು ಉತ್ತಮ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಜೀವನದಲ್ಲಿ ಸಫಲತೆಯನ್ನು ಹೊಂದಬೇಕೆಂಬ ಇಚ್ಚೆ ಗುರುವಿನದಾಗಿರುತ್ತದೆ. ಗುರು ಎಂದಿಗೂ ಜಾತಿ, ಮತ,ಪಂಥಗಳನ್ನು ನೋಡಿ ಶಿಕ್ಷಣ ನೀಡುವದಿಲ್ಲ, ಶಿಕ್ಷಕವೃತ್ತಿಗೆ ಅಪಾರ ಗೌರವವಿದ್ದು ಅದನ್ನು ಕಾಪಾಡಿಕೊಂಡು ಹೋಗುವದು ನಮ್ಮಲ್ಲೆರ ಕರ್ತವ್ಯವಾಗಿದೆ. ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ, ಸಮಾಜದಲ್ಲಿ ಬದುಕುವ ನಾವೆಲ್ಲರೂ ಆತ್ಮಗೌರವ, ಪ್ರತಿಷ್ಠೆಯಿಂದ ಜೀವನ ಸಾಗಿಸಬೇಕು ಉತ್ತಮ ಗುಣಗಳಿಗೆ ಸಮಾಜದಲ್ಲಿ ಎಂದೆಂದಿಗೂ ಗೌರವ ದೊರಕುತ್ತದೆ ಎಂದು ಹೇಳಿದ ಅವರು ಜಗತ್ತಿನಲ್ಲಿ ಸ್ನೇಹಕ್ಕೆ ಇರುವಷ್ಟು ಶ್ರೇಷ್ಠ ಸ್ಥಾನ ಮತ್ತೆ ಯಾವುದಕ್ಕೂ ದೊರಕಲು ಸಾಧ್ಯವಿಲ್ಲ. ಪವಿತ್ರವಾದ ಸ್ನೇಹದಲ್ಲಿ ಯಾವುದೇ ಜಾತಿ, ಮತ, ಪಂಥ, ಬಡವ ಶ್ರೀಮಂತ ಎಂಬ ಬೇಧಭಾವ ಇರುವುದಿಲ್ಲ ಪ್ರೌಢಶಾಲೆಯ ನ್ನು ಕಲಿಯುವ ವೇಳೆಯಲ್ಲಿ ಇರುವ ಗೆಳೆಯರು ಎಂದೆಂದಿಗೂ ನೆನಪಿನಲ್ಲಿ ಉಳಿಯುತ್ತಿದ್ದು, ಈ ನಿಟ್ಟಿನಲ್ಲಿ ಇಲ್ಲಿನ ಯುವಕರು ಎಲ್ಲರನ್ನು ಸೇರಿಸಿ ಪರಸ್ಪರ ಸ್ನೇಹವನ್ನು ವೃದ್ದಿಸುವಂತಹ ಕಾರ್ಯ ಮಾಡುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸುಮಾರು 10-15-20 ವರ್ಷಗಳಿಂದ ನಿವೃತ್ತಿ ಹೊಂದಿದ್ದ ನಮ್ಮೆಲ್ಲ ಶಿಕ್ಷಕರನ್ನು ಪರಸ್ಪರ ಮತ್ತೆ ಒಂದೆಡೆ ಬೇಟಿಯಾಗುವಂತಹ ಅವಕಾಶ ನೀಡಿರುವದು ಸಹ ಹೆಮ್ಮೆಯ ಸಂಗತಿಯಾಗಿದೆ, ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ರವೀಂದ್ರ ಓದಾನವರ ಮಾತನಾಡಿ, ಕಳೆದ 35 ವರ್ಷಗಳ ಹಿಂದೆ ಲಕ್ಷ್ಮೇಶ್ವರದ ಪುರಸಭೆ ಉಮಾ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿರುವ ನಮ್ಮ ಗೆಳೆಯರೆಲ್ಲ ಸೇರಿ ಬಳಗ ಕಟ್ಟಿಕೊಂಡು ಆ ಮೂಲಕ ಸಮಾಜಮುಖಿ ಕೆಲಸ ಮುಂದಾಗಿದ್ದೇವೆ. ಮುಂಬರುವ ದಿನಗಳಲ್ಲಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಉದ್ಧೇಶ ಹೊಂದಿದ್ದೇವೆ, ಕಳೆದ 3 ವರ್ಷಗಳಿಂದ ನಾಡಿನ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ವಿವಿಧ ಊರುಗಳಲ್ಲಿ ನೆಲೆಸಿರುವ ಸ್ನೇಹಿತರು ಬೇಟಿಯಾಗುವಂತಹ ಅವಕಾಶವನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.
ನಿವೃತ್ತ ಶಿಕ್ಷಕರಾದ ಎಫ್.ಸಿ. ಸವಣೂರ, ಎಸ್.ಸಿ. ಸಂಶಿ, ಸಿ.ಎಫ್. ಬೂದಿಹಾಳ, ಎಂ.ಎ. ಖಾಜಿ, ಎಚ್.ಎಂ. ಮುಳಗುಂದ, ಎಸ್.ಜಿ. ಹಿರೇಮಠ, ಎಸ್.ಎಸ್. ನಾಗಲೋಟಿ ಗೆಳೆಯರ ಬಳಗದ ಎಸ್.ಬಿ. ಮುಳ್ಳಳ್ಳಿ, ನ್ಯಾಯಾಧೀಶ ಆರ್.ವೈ. ಚವ್ಹಾಣ, ಆರ್.ಎ. ಬಳಿಗಾರ ಸೇರಿದಂತೆ ಮತ್ತಿತರರು ಮಾತನಾಡಿದರು. ಪಿ.ಎಚ್. ಚೋಟಗಲ್ ಸ್ವಾಗತಿಸಿದರು. ಬಿ.ಎಸ್. ಬಾಳೇಶ್ವರಮಠ ಕಾರ್ಯಕ್ರಮ ನಿರೂಪಿಸಿದರು. ಅಶೋಕ ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ನರಸಮ್ಮನವರ ವಂದಿಸಿದರು.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here