ಲಕ್ಷ್ಮೇಶ್ವರದ ಜ್ಯುವೇಲರಿ ಅಂಗಡಿಯೊಂದನ್ನು ದುಷ್ಕರ್ಮಿಗಳು ಮುರಿದು ಕಳ್ಳತನ ಮಾಡಿರುವ 5 ಜನ ಕಳ್ಳರ ಪತ್ತೆ

0
24
loading...

ಶಿರಹಟ್ಟಿ : ತಾಲೂಕಿನ ಲಕ್ಷ್ಮೇಶ್ವರ ಪಟ್ಟಣದಲ್ಲಿ ಕಳೆದ ವರ್ಷ 22-07-2014 ರಂದು ನಸುಕಿನ ಸಮಯದಲ್ಲಿ ಸರಾಫ್ ಬಜಾರನಲ್ಲಿನ ಜ್ಯುವೇಲರಿ ಅಂಗಡಿಯೊಂದರ ಷಟರ್ಸ್ ಮುರಿದು ಅಂಗಡಿಯಲ್ಲಿನ ಲಕ್ಷಾಂತರ ಮೌಲ್ಯದ ಬೆಳ್ಳಿ ಮತ್ತು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ ಘಟನೆಗೆ ಸಂಬಂಧಿಸಿದಂತೆ ಐದು ಜನ ಕಳ್ಳರನ್ನು ಪಟ್ಟಣದ ಪೋಲೀಸರು ಪತ್ತೆ ಹಚ್ಚಿದ್ದು ಹೆಚ್ಚಿನ ವಿಚಾರಣೆಗಾಗಿ ಕೋರ್ಟಗೆ ಹಾಜರಪಡಿಸಿದ್ದಾರೆ.

ಪಟ್ಟಣದ ಸರಾಫ್ ಬಜಾರನಲ್ಲಿರುವ ಆನಂದ ವಾಚದಮಠ ಎಂಬುವರಿಗೆ ಸೇರಿದ ಆನಂದ ಜ್ಯುವೇಲರ್ಸ್ ಎಂಬ ಅಂಗಡಿಗೆ 22-7-2014 ರ ನಸುಕಿನ 3-4 ಗಂಟೆಯ ಸಮಯದಲ್ಲಿ ಷಟರ್ಸ್ ಮುರಿದು ಒಳಗಡೆ ನುಗ್ಗಿದ ಕಳ್ಳರು ಅಂಗಡಿಯಲ್ಲಿದ್ದ ಬೆಳ್ಳಿ ಹಾಗೂ ಬಂಗಾರದ ಆಭರಣಗಳನ್ನು ದೋಚಿದ್ದು, ಮತ್ತೊಂದು ಅಂಗಡಿಯ ಕಳ್ಳತನಕ್ಕೂ ಪ್ರಯತ್ನ ಪಟ್ಟಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಸಿಪಿಐ ಶ್ರೀನಿವಾಸ ಮೇಟಿ ಮತ್ತು ಪಿಎಸ್‍ಐ ರವಿಚಂದ್ರ ಡಿ.ಬಿ. ಅವರ ನೇತೃತ್ವದಲ್ಲಿ ಜಾಲ ಬೀಸಿ ಘಟನೆಗೆ ಸಂಬಂಧಿಸಿದಂತೆ ಮದ್ಯಪ್ರದೇಶದವರು ಎನ್ನಲಾದ ಸುಮಾರು 5 ಜನ ಕಳ್ಳರನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಡ್ಯದಲ್ಲಿ ಇದೇ ರೀತಿ ಕಳ್ಳತನಕ್ಕೆ ಸಂಬಂದಿಸಿದಂತೆ ಬಂಧಿಸಲ್ಪಟ್ಟಿದ್ದ ಈ ಕಳ್ಳರು ಅಲ್ಲಿನ ವಿಚಾರಣೆಯ ವೇಳೆಯಲ್ಲಿ ಲಕ್ಷ್ಮೇಶ್ವರದಲ್ಲಿಯೂ ನಡೆದ ಕಳ್ಳತನದಲ್ಲಿ ತಮ್ಮ ಕೈವಾಡ ಇರುವದನ್ನು ಒಪ್ಪಿಕೊಂಡಿದ್ದಾರೆ. ಈ ಸುಳಿವನ್ನು ಅರಿತ ಇಲಾಖೆಯವರು ಪಿಎಸ್‍ಐ ರವಿಚಂದ್ರ ಡಿ.ಬಿ. ಅವರ ನೇತೃತ್ವದಲ್ಲಿ ಪೋಲೀಸ್ ತಂಡ ಮಂಡ್ಯಕ್ಕೆ ತೆರಳಿ ಅಲ್ಲಿಂದ ಈ ಐವರನ್ನು ಲಕ್ಷ್ಮೇಶ್ವರ ಪಟ್ಟಣಕ್ಕೆ ತಂದು ವಿಚಾರಣೆಗೊಳಪಡಿಸಿದ್ದಾರೆ. ಬಂದಿತರು ಮಧ್ಯಪ್ರದೇಶ ರಾಜ್ಯದವರಾಗಿದ್ದಾರೆ.

ಅಪರಾಧಿಗಳು ಮಂಡ್ಯ ಪೋಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿದಾಗ ಈ ಲಕ್ಷ್ಮೇಶ್ವರದ ಬಂಗಾರ ಅಂಗಡಿಯ ಕಳ್ಳತನದ ವಿಚಾರ ಒಪ್ಪಿಕೊಂಡಿದ್ದಾರೆ. ಅಪರಾಧಿಗಳನ್ನು ದೇವೇಂದ್ರಕುಮಾರ ಸೋನಿ ಬಿನ್ ಬಸಂತಿಲಾಲ್(57), ಮೋರಸಿಂಗ್ ಬಿನ್ ಡೀಪಲಾ(30), ದಿನೇಶಠಾಕೂರ ಫೂಲಸಿಂಗ್(30), ಛೋಟಾ ಮೋಹನ್ ಅಲಿಯಾಸ್ ಕೋರಸಿಂಗ್ ಬಿನ್ ಸೂರಜ್(40), ಹಾಗೂ ಹರಿಸಿಂಗ್ ಬಿನ್ ಲೇಟ್ ಮನ್ನಾ(34) ಎಂದು ತಿಳಿದು ಬಂದಿದೆ. ಇನ್ನೂ ಅನೇಕ ಕಳ್ಳತನಕ್ಕೆ ಸಂಬಂಧಿಸಿದಂತೆ ಈ ಅಪರಾಧಿಗಳ ವಿಚಾರಣೆ ನಡೆದಿದ್ದು, ಪಟ್ಟಣಕ್ಕೆ ಅಪರಾಧಿಗಳನ್ನು ಸೋಮವಾರ ಮದ್ಯಾಹ್ನ ಕರೆತಂದ ಸಂದರ್ಭದಲ್ಲಿ ಕಳ್ಳತನ ಮಾಡಲ್ಪಟ್ಟ ಅಂಗಡಿಯ ಮುಂದೆ ಕರೆತರಲಾಗಿತ್ತು, ಮತ್ತು ಕೇಸಿಗೆ ಸಂಬಂಧಿಸಿದಂತೆ ಗದಗ ರಸ್ತೆಗೆ ಹೊಂದಿಕೊಂಡಂತೆ ಹೊಂಡವೊಂದರ ಸಂದಿಯಲ್ಲಿ ಚೀಲವೊಂದರಲ್ಲಿ ಸುತ್ತಿ ಬಿಸಾಡಿದ್ದ ಸುಮಾರು 396 ಗ್ರಾಮ ಬೆಳ್ಳಿ ಇದ್ದ ಚೀಲವನ್ನು ಅಪರಾಧಿಗಳು ಪೋಲೀಸರಿಗೆ ತೋರಿಸಿದ್ದಾರೆ. ಅದನ್ನು ಪೋಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೂ ಸೆಟರ್ಸ್ ತೆಗೆಯುವ ಕಬ್ಬಿಣದ ರಾಡು ದೊರಕಿದೆ, ಈ ಕುರಿತಂತೆ ವಿಚಾರಣೆ ನಡೆದಿದ್ದು, ಅಪರಾಧಿಗಳನ್ನು ಕೋರ್ಟಗೆ ಹಾಜರಪಡಿಸಲಾಗಿದೆ.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here