ವಾಯ್.ಟಿ.ಎಸ್.ಎಸ್‍ಕಾಲೇಜಿನಲ್ಲಿ ಕಾಮರ್ಸಉತ್ಸವ

0
24
loading...


ಯಲ್ಲಾಪುರ :ವಿದ್ಯಾರ್ಥಿಗಳು ಪ್ರಚಲಿತ ವಿಷಯಗಳ ಬಗ್ಗೆಅರಿತುಕೊಳ್ಳಬೇಕು. ಮೊಬೈಲ್ ವಾಟ್ಸಪ್ ಮುಂತಾದವುಗಳನ್ನು ಅಧ್ಯಯನಕ್ಕೆಪೂರಕವಾಗಿ ಬಳಸಬೇಕು.ವಿದ್ಯಾರ್ಥಿಗಳು ಯೋಗ ,ಪ್ರಾಣಯಾಮ ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವದರಿಂದ ಉತ್ತಮ ಸಂಸ್ಕಾರ,ಶಿಸ್ತು ,ಏಕಾಗ್ರತೆ ಹೊಂದಲು ಸಾಧ್ಯವಾಗುತ್ತದೆ.ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರಾ.ದಾಕ್ಷಾಯಣಿ ಹೆಗಡೆ ಹೇಳಿದರು. ಅವರುಮಂಗಳವಾರ ಪಟ್ಟಣದ ವಾಯ್.ಟಿ.ಎಸ್.ಎಸ್ ಕಾಲೇಜಿನಲ್ಲಿ ಪ್ರಪ್ರಥವiವಾಗಿ ಅಯೋಜಿಸಿದ್ದ ಕಾಮರ್ಸಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರತಿಯೊಂದು ಕ್ಷೇತ್ರದಲ್ಲಿ ವಾಣಿಜ್ಯಶಾಸ್ತ್ರ ಅವಶ್ಯಕ. ಇಂತಹ ಉತ್ಸವಗಳಿಂದ ಮಕ್ಕಳಲ್ಲಿ ಆತ್ಮವಿಶ್ವಾಸ, ವ್ಯವಹಾರಜ್ಞಾನ ವೃದ್ಧಿಸುತ್ತದೆ.ಇದರಸದುಪಯೋಗವನ್ನು.ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು. ಉದ್ಯಮಿ ಬಾಳು ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.ಕಾಲೇಜಿನ ನಿವೃತ್ತ ಪ್ರಾಂಶುಪಾಲ ಶ್ರೀರಂಗ ಕಟ್ಟಿಮಾತನಾಡಿ ಓದುವದು ವಿದ್ಯಾಭ್ಯಾಸಕ್ಕೆ,ಆಂಕಗಳಿಕೆಗೆಮಾತ್ರ ಸೀಮಿತವಾಗಬಾರದು.ನಿರಂತರ ಪ್ರಕ್ರಿಯೆಯಾಗಬೇಕು ಮತು ್ತಪ್ರಾಯೋಗಿಕವಾಗಿರಬೇಕು. ಎಲ್ಲವಾಣಿಜ್ಯ ಶಾಸ್ತ್ರ .ವಿದ್ಯಾರ್ಥಿಗಳು ಭಾಗವಹಿಸಿ ಪ್ರಾತ್ಯಕ್ಷಿಕೆ ಮೂಲಕ ಅನುಭವ ಪಡೆಯುವದರಿಂದ ಹೆಚ್ಚಿನ ಕೌಶಲ್ಯ ಹೊಂದಲು ಸಹಕಾರಿ ಎಂದರು. ಆಡಳಿತ ಮಂಡಳಿಯ ಕಾರ್ಯದರ್ಶಿ ರಾಜೇಂದ್ರ ಭಟ್ಟ ಮಾತನಾಡಿದರು. ಪ್ರಾಂಶುಪಾಲ ಜಯರಾಮ ಗುನಗಾ ಸ್ವಾಗತಿಸಿದರು. ಉಪನ್ಯಾಸಕ ಅಜೇಯಶೇಟ್ ಮನೋಹರ ಶಾನಭಾಗ ನಿರ್ವಹಿಸಿದರು.ವಿಲ್ಸನ್ ರೋಡ್ರೀಗಸ್ ವಂದಿಸಿದರು.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here