ವಿರೋದ ರಹಿತ ಸಮಾಜ ನಿರ್ಮಾಣಕ್ಕೆ ಧರ್ಮ ಅವಶ್ಯ : ಶ್ರೀ ರಂಭಾಪುರಿ

0
38
loading...

9klg1ಕಲಘಟಗಿ10:  ಮಾನವ ಬದುಕಲು ಜ್ಞಾನ ಮತ್ತು ಕ್ರಿಯೆ ಮುಖ್ಯ. ವಿರೋಧ ರಹಿತವಾದ ಸಮಾಜ ನಿರ್ಮಾಣದಲ್ಲಿ ಧರ್ಮದ ಪಾತ್ರ ಬಹುಮುಖ್ಯವಾದದ್ದು  ಎಂದು ಶ್ರೀಮದ ರಂಭಾಪುರಿ  ಪ್ರಸನ್ನ ರೇಣುಕ ವೀರಸೋಮೇಶ್ವರ ಭಗವತ್ಪಾದರು ಹೆಳಿದರು

ಅವರು ಪಟ್ಟಣದ ಹೊರವಲಯದಲ್ಲಿರುವ ಹನ್ನೆರಡು ಮಠದ ಲಿಂಗೈಕ್ಯ ಮಡಿವಾಳ ಶಿವಾಚಾರ್ಯರ 25 ನೇ ಪುಣ್ಯಾರಾಧನೆ ಸಮಾರೊಪ ಸಮಾರಂಭ ಹಾಗೂ ಲಿಂ ಮಡಿವಾಳ ಶಿವಾಚಾರ್ಯರ ಮೂರ್ತಿ ಪ್ರತಿಷ್ಠಾಪನೆಯ ಮಂಗಲ ಸಾನಿದ್ಯವಹಿಸಿ ಮಾತನಾಡುತ್ತಿದ್ದರು.

ಧರ್ಮವು ಸಂಜೀವಿನಿಯಾಗಿದ್ದು ನಮಗೆ ಕಲ್ಯಾಣವನ್ನುಂಟು ಮಾಡುತ್ತದೆ. ವೀರಶೈವ ಧರ್ಮದಲ್ಲಿ ಎಲ್ಲ ಧರ್ಮಗಳಸಾರವು ಅಡಗಿದ್ದು ಎಲ್ಲರನ್ನು ಸಮಾನರಾಗಿ ಕಾಣುವಂತದ್ದಾಗಿದೆ ಎಂದರು. ಲಿಂ ಮಡಿವಾಳ ಶಿವಾಚಾರ್ಯರು ವೀರಶೈವ ಮಠಗಳನ್ನು ಉಳಿಸಿ ಬಳೆಸುವಲ್ಲಿ ಸಾಕಷ್ಟು ಕಷ್ಟಪಟ್ಟಿದ್ದು ಧರ್ಮ ಕ್ಷೇತ್ರ ಗೋಕರ್ಣದಲ್ಲಿ ವೀರಶೈವ ಮಠ ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಈ ಸವು ನೆನಪಿಗಾಗಿ ಗೋಕರ್ಣದಲ್ಲಿ 5 ಕೋಟಿ ವೆಚ್ಚದಲ್ಲಿ ಯಾತ್ರಿನಿವಾಸ ರಂಭಾಪುರೀಶ ನಿವಾಸ ನಿರ್ಮಾಣ ಕಾರ್ಯ ಭರದಿಂದ ನಡೆದಿದ್ದು ಇನ್ನು ಕೆಲವೇದಿನಗಳಲ್ಲಿ ಶ್ರೀಗಳನ್ನು ಗೋಕರ್ಣದಲ್ಲಿ ಗುರುತಿಸುವಂತಾಗುತ್ತದೆ ಎಂದರು.ಈದಕ್ಕೂ ಮೊದಲು ಶ್ರೀಗಳಿಂದ ಇಷ್ಟಲಿಂಗ ಪೂಜೆ ನೆರವಿರಿಸಿ ಲಿಂ ಮಡಿವಾಳ ಶಿವಾಚಾರ್ಯರ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಅಲ್ಲದೆ ಮಠದ ಆವರಣದಲ್ಲಿ ಮಡಿವಾಳ ಶಿವಾಚಾರ್ಯ ಸಭಾಭವನಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಭಾ ಜ ಪ ಸಹವಕ್ತಾರ ಸಿ ಎಂ ನಿಂಬಣ್ಣವರ ಲಿಂ ಮಡಿವಾಳ ಶಿವಾಚಾರ್ಯರೊಂದಿಗಿನ ತಮ್ಮ ಒಡನಾಟದ ಕುರಿತು ಹಾಗೂ ಮಠಧ ಬೆಳವಣಿಗೆಯ ಕುರಿತಾಗಿ ಹೊಂದಿರುವ ಯೊಜನೆಗಳ ಕುರಿತು ತಿಳಿಸಿದರು.   ಮುಕ್ತಿ ಮಂದಿರದ ಶ್ರೀ ವಿಮಲರೇಣುಕ ಶಿವಾಚಾರ್ಯರು,ಶಿವಶಿದ್ದ ಶಿವಾಚಾರ್ಯರು, ಮರುಳಸಿದ್ದ ಶಿವಾಚಾರ್ಯರು, ರಾಮೇಶ್ವರ ಶಿವಾಚಾರ್ಯರು ಶ್ರೀ ಮಹಾಂತ ಸ್ವಾಮಿಜಿಗಳು,   ಪ್ರ್ರದೀಪ ಶೆಟ್ಟರ , ಜಿ ಪಂ ಸದಸ್ಯರಾದ ಯಲ್ಲಪ್ಪಾ ದಾಸನಕೊಪ್ಪ, ಬಸವರಾಜ ಕರಡಿಕೊಪ್ಪ, ಹುಬ್ಬಳ್ಳಿ ಧಾರವಾಡ ಮಾಜಿ ಮೇಯರ ಶಿವು ಹಿರೇಮಠ, ಮಾಜಿ ಜಿ ಪಂ ಅಧ್ಯಕ್ಷ  ಆರ್.ಪಾಟಿಲ, ಎಸ್‍ಪಾಟಿಲ, ಎಸ.ವಿ.ತಡಸಮಠ, ಮಲ್ಲಿಕಾರ್ಜುನ ಪುರದನಗೌಡ್ರ,  ಎಸ್ ವಿ ತಡಸಮಠ, ಮಹೇಶ ಪಾಟಿಲ, ನಂದೀಶ ಪಾಟಿಲ,ಮುಂತಾದವರು ಉಪಸ್ಥಿತರಿದ್ದರು.

 

loading...

LEAVE A REPLY

Please enter your comment!
Please enter your name here