ವಿಶ್ವದರ್ಶನ ಹಬ್ಬ 2 ಮತ್ತು 3 ರಂದು ಜರುಗಲಿದೆ

0
31
loading...

ಯಲ್ಲಾಪುರ 30: ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ 2016 ರ `ವಿಶ್ವದರ್ಶನ ಹಬ್ಬ’ವು ಶಿಕ್ಷಣ ಸಂಸ್ಥೆಯ ಆವಾರದಲ್ಲಿ ಜನವರಿ 2 ಮತ್ತು 3 ರಂದು ಜರುಗಲಿದೆ.
ಜ.2 ರಂದು ಮುಂಜಾನೆ 10 ಘಂಟೆಗೆ ಶಿರಸಿ ಶೈಕ್ಷಣಿಕ ಜಿಲ್ಲೆಯ ಸಾ.ಶಿ.ಇಲಾಖಾ ಉಪನಿರ್ದೇಶಕ ಪ್ರಸನ್ನಕುಮಾರ ಕಾರ್ಯಕ್ರಮವನ್ನು ಉದ್ಘಾಟಿಸುವರು. ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಜಿ. ನಾಯಕ ಪಾಲ್ಗೊಳ್ಳಲಿದ್ದು, ಶಿಕ್ಷಣ ಸಂಸ್ಥೆಯ ಗೌ.ಕಾರ್ಯದರ್ಶಿ ನರಸಿಂಹಮೂರ್ತಿ ಭಟ್ಟ ಅಧ್ಯಕ್ಷತೆ ವಹಿಸುವರು.
ಸಂಜೆ 6 ಘಂಟೆಗೆ `ದೀಪ ಪ್ರಜ್ವಲನ’ದ ನಂತರ ವಿದ್ಯಾರ್ಥಿಗಳ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ವಿಶ್ವದರ್ಶನ ಹಬ್ಬದ ಅಂಗವಾಗಿ ಜ.3 ಭಾನುವಾರದಂದು ಬೆಳಿಗ್ಗೆ 10 ಘಂಟೆಗೆ ಪಟ್ಟಣದ ಅಡಕೆ ಭವನದಲ್ಲಿ ರೈತರಿಗಾಗಿ `ಆಪ್ತ ಸಂವಾದ’ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಬಾಗಲಕೋಟೆಯ ತೋಟಗಾರಿಕಾ ವಿ.ವಿ.ಉಪಕುಲಪತಿ ಡಾ. ಡಿ. ಎಲ್. ಮಹೇಶ್ವರ ಹಾಗೂ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉಮೇಶ ಭಟ್ಟ ಭಾಗವಹಿಸಲಿದ್ದು, ತಾಲೂಕಿನ ಪ್ರಗತಿಪರ ಕೃಷಿಕರೊಂದಿಗೆ ಸಂವಾದ ನಡೆಸುವರು.
ಸಂಜೆ 6 ಘಂಟೆಗೆ ವಿಶ್ವದರ್ಶನ ಸಂಸ್ಥೆಯ ಆವಾರದಲ್ಲಿ ಹಬ್ಬದ ಸಮಾರೋಪ ಸಮಾರಂಭ ಏರ್ಪಡಿಸಲಾಗಿದ್ದು, ಅತಿಥಿಗಳಾಗಿ ಬಾಗಲಕೋಟೆ ತೋಟಗಾರಿಕಾ ವಿ.ವಿ.ಕುಲಪತಿ ಡಾ. ಡಿ. ಎಲ್. ಮಹೇಶ್ವರ, ಶಾಸಕ ಶಿವರಾಮ ಹೆಬ್ಬಾರ ಆಗಮಿಸುವರು. ಶಿಕ್ಷಣ ಸಂಸ್ಥೆ ಅಧ್ಯಕ್ಷ ಉಮೇಶ ಭಟ್ಟ ಅಧ್ಯಕ್ಷತೆ ವಹಿಸುವರು.
ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here