ಶರೀರ ನಾಶ, ಆತ್ಮ ಆವಿನಾಶಿ, ಸತ್ಯ

0
30
loading...

ಅಥಣಿ 22: ಈ ಬದುಕು ಒಂದು ರಂಗಸಜ್ಜಿಕೆಯ ಪಾತ್ರದಾರಿಯಂತೆ. ಈ ವೇದಿಕೆಯಲ್ಲಿ ನನ್ನ ಪಾತ್ರ ಹೇಗೆ ನಿಭಾಯಿಸುತ್ತೇನೆ ಎಂಬುದು ಮುಖ್ಯ. ಜೀವನದಲ್ಲಿ ಏನನ್ನು ಗಳಿಸುತ್ತೇವೆ ಎನ್ನುವುದು ಮುಖ್ಯವಲ್ಲ. ಹೇಗೆ ಬದುಕನ್ನು ಸಾಗಿಸುತ್ತೆವೆ ಅನ್ನುವುದು ಮುಖ್ಯವಾಗಿರುತ್ತದೆ ಎಂಬುದನ್ನು ಅರಿತು ಬದುಕಿನ ಎಲ್ಲ ಆಯಾಮಗಳನ್ನು ಪರಿಶೀಲಿಸುತ್ತ ಯೋಗ್ಯಮಾರ್ಗದಲ್ಲಿ ಸತ್ಯದ ಅರಿವುನ್ನು ತಿಳಿದು ಹಸನಾದ ಬದುಕನ್ನು ಬಾಳುವುದರಲ್ಲಿ ಸಾರ್ಥಕತೆ ಇದೆ ಎಂದು ದ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿ ನುಡಿದರು.
ಅಥಣಿ ಗಚ್ಚಿನಮಠದ ವೀರಶೈವ ವಿದ್ಯಾಪೀಠ ಶಾಲಾ ಆವರಣದಲ್ಲಿ ನಡೆಯುತ್ತಿರುವ ಆಧ್ಯಾತ್ಮಿಕ ಪ್ರವಚನದಲ್ಲಿಂದು “ಜೀವನ ಅಂದರೇನು” ಎಂಬುದರ ಕುರಿತು ಚಿಂತನೆಯುತ್ತ, ಜಗತ್ತಿನಲ್ಲಿ ಎರಡು ಸಂಗತಿಗಳಿವೆ. ಒಂದು ನಾಶವಾಗುವುದು, ಇನ್ನೊಂದು ನಾಶವಾಗುವುದನ್ನು ನೋಡುತ್ತಾ ಇರುವುದು. ಇಲ್ಲಿ ನಾಶವಾಗುವುದು ಶರೀರವಾದರೆ, ನೋಡುತ್ತಿರುವದು ಆತ್ಮ. ಶರೀರ ನಾಶ, ಆತ್ಮ ಆವಿನಾಶಿ, ಸತ್ಯ.
ಭಾರತದ ಶ್ರೇಷ್ಠ ದಾರ್ಶನಿಕ ಮಹರ್ಷಿ ವ್ಯಾಸರು ಹೇಳುವಂತೆ “ ಆತ್ಮ ನೀನು ನಿಶ್ಚಲ, ನಿನ್ನ ಎದುರಿಗೆ ಕಾಲದ ಪ್ರವಾಹ ಹೆಇರು ಹೋಗುತ್ತಿರುತ್ತದೆ, ಅದನ್ನು ಕೇವಲ ನೋಡುತ್ತ ಹೋಗಬೇಕು. ಅಂದರೆ ತಿಳಿದು ನಡೆಯಬೇಕು. ಬದುಕು ಪಕ್ವವಾಗುತ್ತಿದಂತೆ ಸತ್ಯ ದರ್ಶನವಾಗುತ್ತದೆ” ಎಂದು. ಬದುಕು ಒಂದು ನಾಟಕ, ನಮ್ಮದೊಂದು ಪಾತ್ರ ಇಲ್ಲಿರುವುದು. ಆದ್ದರಿಂದ ವೇದಿಕೆಯ ಎಲ್ಲ ಆಗು ಹೋಗುಗಳನ್ನು ಗಮನಿಸುತ್ತಿರಬೇಕು. ಪತಿಯಾಗದೆ, ಸತಿಯಾಗದೆ, ಮಗನಾಗದೆ ಬರಿ ನೋಡುವುದನ್ನು ಮಾಡಿದಲ್ಲಿ ಅವರು ಜ್ಞಾನಿಯಾಗುತ್ತಾರೆ. ಕಾಲದ ತೆರೆಗಳಲ್ಲಿ ನಾವು ತೇಲುತ್ತಿದ್ದವೆ. ಚೆನ್ನಾಗಿ ತೇಲಿ ನಮ್ಮ ಗುರಿಯನ್ನು ಮುಟ್ಟಬೇಕು. ನಾವು ಕುಳಿತಿರುವ ನೌಕೆ ತುಂಬ ಬೆಲೆಬಾಳುವುದಿರಬಹುದು. ತುಂಬ ಸುಂದರವೂ ಇರಬಹುದು ಆದರೆ ಅದನ್ನು ನಡೆಸುವ ನಾವಿಕ ಮಾತ್ರ ಅದನ್ನು ನಿದಾನವಾಗಿ, ನಿರಂತರವಾಗಿ ಚಲಿಸುತ್ತ, ಗುರಿ ಮುಟ್ಟಿ ಸಂತಸವನ್ನು ಪಡಬೇಕು. ಅಂದರೆ ಮಾತ್ರ ಬದುಕು ಸಾರ್ಥಕತೆ ಪಡೆಯುತ್ತದೆ.
ಷೇಕ್ಷಫಿಯರ್ ಬದುಕು ಎಳು ಅಂಕದ ನಾಟಕ ಎಂದಿದ್ಧಾನೆ. ಬಾಲ್ಯ, ಶಿಕ್ಷಣ, ಜ್ಞಾನಗಳಿಕ, ಲಗ್ನ, ಗಳಿಕೆ ಹೀಗೆ ಅನೇಕ ಆಯಾಮಗಳನ್ನು ಪಡೆಯುವುದೆ ಬದುಕು ಎಂದಿದ್ದಾನೆ. ಹಾಗೆಯೇ ಹನ್ನೆರಡನೆ ಶತಮಾನದ ಬಸವಣ್ಣ ತುಂಬ ಮಾರ್ಮಿಕವಾಗಿ ಆತ್ಮಜ್ಞಾನದಲ್ಲಿ ಬದುಕನ್ನು ಅನುಸರಿಸಬೇಕು ಎಂಬುದನ್ನು “ ನೆರೆ ಕನ್ನೆಗೆ, ತೆರೆ ಗಲ್ಲಕೆ, ಶರೀರ ಗೂಡುವೊಗದ ಮುನ್ನ, ಹಲ್ಲು ಹೋಗಿ, ಬೆನ್ನುಬಾಗಿ, ಅನ್ಯರಿಗೆ ಹಂಗಾಗದ ಮುನ್ನ, ಕಾಲ ಮೇಲೆ ಕೈಯನೂರಿ ಕೋಲ ಹಿಡಿಯದ ಮುನ್ನ, ಮುಪ್ಪಿಂದೊಪ್ಪವಳಿಯದ ಮುನ್ನ ಮೃತ್ಯು ಮುಟ್ಟದ ಮುನ್ನ …….” ಸತ್ಯವನ್ನರಿ ಎಂದಿದ್ದಾರೆ.
ಚೀನಾದ ಪುರುಷ ಸದೃಶ ಮಹಾಜ್ಞಾನಿ “ಲಾವೋತ್ಸೆ” ಎಂಬವರು ಬದುಕನ್ನು ಕುರಿತು ಹೇಳುತ್ತ, ತುಂಬ ಸೂಕ್ಷ್ಮವಾಗಿ ಬದುಕನ್ನು ಗೃಹಿಸಬೇಕು. ನದಿ ದಡದಲ್ಲಿ ಕುಳಿತು ನೀರು ಹರಿಯುವುದನ್ನು ವಿಕ್ಷೀಸುತ್ತಿರುತ್ತಾನೆ. ಹರಿಯುವಲಿ ಸೆಳೆತ, ತಿರುವು, ಸುಳಿ ಎಲ್ಲವೂ ಇರುತ್ತೆ ಆದರೆ ನೀರು ಎಲ್ಲವನ್ನು ದಾಟಿ ಹರಿಯುತ್ತಲೇ ಇರುತ್ತದೆ. ಅದೇ ರೀತಿ ಬದುಕಲ್ಲಿ ಕೂಡ ಅನೇಕ ಸಂಗತಿಗಳು ಘಟಿಸುತ್ತವೆ ಅವುಗಳಲ್ಲಿ ಸಿಕ್ಕಿಕೊಳ್ಳದೆ, ಅವುಗಳಿಗೆ ಅಂಟಿಕೊಳ್ಳದೆ ಎದುರಿಸುತ್ತ ಮುನ್ನಡೆಯಬೇಕು. ಮರದಲ್ಲಿ ಕುಳಿತ ಬಾನಕ್ಕಿ ಅಲ್ಲಿಯೇ ಕುಳಿತುಕೊಳ್ಳದೆ ಬಾನ್ನೆತ್ತರ ಹಾರಿ ಸಂತಸ ಅನುಭವಿಸುವಂತೆ. ಜೀವನದ ಘಟ್ಟದಲ್ಲಿ ಪ್ರಪಂಚ (ಸಂಸಾರ) ನಡೆಸುವ ಸಂದರ್ಭ ಬರುತ್ತದೆ. ಆಗ ಅದನ್ನು ಕೂಡ ಯಶಸ್ವಿಯಾಗಿ ನಡೆಸಿ, ಮತ್ತೆ ಬದುಕನ್ನು ಅರಿಯುವಲ್ಲಿ ತೊಡಗಬೇಕು.
ಜಗತ್ತು ಕೆಟ್ಟು ಹೋಗಿದೆ ಎಂದು ಮಾತನಾಡುತ್ತ ಹೋಗಬಾರದು. ಈ ಜಗತ್ತಿನಲ್ಲಿ ಸಾಗರ ಕೆಟ್ಟಿದೆಯೇ, ನಕ್ಷತ್ರ ಕೆಟ್ಟಿದೆಯೆ? ಇಲ್ಲವಲ್ಲ. ಬರಿ ನಮ್ಮ ನಮ್ಮ ಮನಸ್ಸು, ವಿಚಾರಗಳು ಕೆಟ್ಟಿವೆಯಷ್ಟೇ.
ರಷಿಯಾದಲ್ಲಿ ಧರ್ಮಕ್ರಾಂತಿ ನಡೆದಾಗ ಓರ್ವ ವೃದ್ಧೆ ಸಣ್ಣದೊಂದು ಮೇಣದ ಬೆಳಕಿನಲ್ಲಿ ಪ್ರಾರ್ಥನೆಸಲ್ಲಿಸುವಾಗ ಕ್ರಾಂತಿಕಾರ ಯುವಕರು ಅಲ್ಲಿಗೆ ಬಂದು ದೇವರು ಧರ್ಮ ಏನೂ ಇಲ್ಲ ಏಕೆ ಸುಮ್ಮನೆ ವ್ಯರ್ಥವಾಗಿ ಕಾಲಹರಣ ಮಾಡುತಿರುವೆ, ಮೇಣದ ಬೆಳಕನ್ನು ಆರಿಸಿ ಪ್ರಾರ್ಥನೆ ನಿಲ್ಲಿಸು ಎಂದಾಗ, ಆ ವೃದ್ಧೆ “ ನೀವು ಸ್ವಲ್ಪ ಜನ ದೇವರಿಲ್ಲ ಎನ್ನುತ್ತಿರಿ ಆದರೆ ಆಕಾಶದ ಲಕ್ಷ ಲಕ್ಷ ನಕ್ಷತ್ರಗಳು ದೇವರಿದ್ದಾನೆ ಎಂದು ಸಾರುತ್ತವೆ, ನನ್ನ ದೀಪ ಆರಿಸಬಹುದು, ಆದರೆ ಆಕಾಶದ ನಕ್ಷತ್ರಗಳ ದೀಪ ಹೇಗೆ ಆರಿಸುತ್ತಿರಿ ” ಎಂದು ಕೇಳಿದಾಗ ಅವರೆಲ್ಲ ಮೌನ ತಾಳಿದರು. ಇಲ್ಲಿರುವ ಸತ್ಯ ಅದು ಪರಮಸತ್ಯ. ಆ ಯುವಕರಿಗೆ ಪಕ್ವತೆಗೊಳ್ಳಲು ಹೇಳಿದಳು. ಬದುಕು ಪಕ್ವವಾದಂತೆ ಸತ್ಯದ ಅರಿವಾಗುತ್ತದೆ ಎಂದರು.

loading...

LEAVE A REPLY

Please enter your comment!
Please enter your name here