ಶಾಸಕರಲ್ಲಿ ವಿಶ್ವಾಸ ಇಟ್ಟ ಹಿರಿಯರು

0
14
loading...

kashappanavar

ಇಳಕಲ್ : ನಗರದಲ್ಲಿ ಸೋಮವಾರ ರಾತ್ರಿ ನಡೆದ ವಿಶೇಷ ಸಭೆಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಅವರಲ್ಲಿ ಇಲ್ಲಿಯ ಹಲವಾರು ಸಮಾಜಗಳ ಹಿರಿಯರು ವಿಶ್ವಾಸ ವ್ಯಕ್ತಪಡಿಸಿ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ಸಲಹೆ ನೀಡಿದರು.
ಎಸ್,ಎಸ್,ಕೆ,ಸಮಾಜದ ಅಧ್ಯಕ್ಷ ಶ್ರೀಕಾಂತಸಾ ಆರ್ ರಾಜೋಳ್ಳಿ, ಪುರಸಭೆಯ ನಿವೃತ್ತ ಮುಖ್ಯಾಧಿಕಾರಿ ಪಂಪುಸಾ ಕಠಾರೆ, ಸಮಾಜದ ಯುವ ನಾಯಕ ಶ್ರೀಕಾಂತಸಾ ಜಿ ರಾಜೋಳ್ಳಿ, ಇಳಕಲ್ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ,ಎಸ್,ಪಾಟೀಲ, ಮಾರವಾಡಿ ಸಮಾಜದ ಆರ್,ಎಂ,ದರಕ, ಡಿ,ಪಿ,ಡಾಗಾ, ರಾಜು ಬೋರಾ, ಗೌತಮ ಬೋರಾ, ಮುಸ್ಲಿಂ ಸಮಾಜದ ಲಿಮ್ರಾ ಸಂಸ್ಥೆಯ ಅಧ್ಯಕ್ಷ ಅಬ್ದುಲರಜಾಕ ತಟಗಾರ, ಬಸವ ಸೇವಾ ಸಮಿತಿಯ ಅಧ್ಯಕ್ಷ ಶಿವರುದ್ರಪ್ಪ ಗೊಂಗಡಶೆಟ್ಟಿ, ವಿ,ಸಿ,ಅಕ್ಕಿ ಸ್ಮಾರಕ ಸಂಘದ ಅಧ್ಯಕ್ಷ ಡಾ.ಕೆ,ವಿ,ಅಕ್ಕಿ ಸೇರಿದಂತೆ ಪ್ರಮುಖರು ಶಾಸಕರ ನಿವಾಸಕ್ಕೆ ತೆರಳಿ ನಗರದಲ್ಲಿ ಗಣಿ ಮತ್ತು ಫ್ಯಾಕ್ಟರಿ ಮಾಲಿಕರು ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿದರು.
ಈ ಸಮಯದಲ್ಲಿ ಹಲವಾರು ಗಣ್ಯರು ಮಾತನಾಡಿ ನಗರದಲ್ಲಿ ನಡೆಯುತ್ತಿರುವ ಸರದಿ ಅನ್ನ ಸತ್ಯಾಗ್ರಹದಿಂದಾಗಿ ಶಾಸಕರಿಗೆ ಮುಜುಗರವಾಗಿದೆ. ಇದರಿಂದಾಗಿ ಪ್ರಗತಿಪರ ಕಾರ್ಯಗಳಿಗೆ ತೊಂದರೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ ಗಣಿ ಸಚಿವ ವಿನಯಕುಮಾರ ಕುಲಕರ್ಣಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆಗೆ ಚರ್ಚಿಸಿ ರಾಜಧನ ವಿಧಿಸುವಲ್ಲಿ ಫ್ಯಾಕ್ಟರಿಗಳ ಮೇಲೆ ವಿನಾಯತಿ ತೋರಿಸಲು ಕೇಳಿಕೊಳ್ಳಲಾಗಿದೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ಒಂದು ತೀರ್ಮಾನ ತೆಗೆದುಕೊಂಡು ರಾಜಧನ ಕಡಿಮೆ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

loading...

LEAVE A REPLY

Please enter your comment!
Please enter your name here