ಶಿಥಿಲಗೊಂಡ ಜಲಕುಂಭ-ಗ್ರಾಮಸ್ಥರ ಪರದಾಟ

0
24
loading...

ಅರಟಾಳ 31; ಸಮೀಪದ ಬಾಡಗಿ ಗ್ರಾಮದಲ್ಲಿ ನಿರ್ಮಿಸಿರುವ ಜಲಕುಂಭ ಶಿಥಿಲಗೊಂಡು ಹಲವು ವರ್ಷ ಕಳೆದರು ದುರಸ್ತಿ ಕಾರ್ಯ ಕೈಗೊಳ್ಳದೇ ಇರುವುದರಿಂದ ಗ್ರಾಮಸ್ಥರು ಪರದಾಡುವಂತಾಗಿದೆ.
ಬಾಡಗಿ ಗ್ರಾಮದಲ್ಲಿ 5000 ಸಾವಿರ ಜನಸಂಖ್ಯೆಯಿಂದು ಈ ಗ್ರಾಮವು ತಾಲೂಕ ಪಂಚಾಯತ ಕ್ಷೇತ್ರವನ್ನು ಹೊಂದಿದೆ. ಆದರೆ ಇದುವರೆಗೆ ಜಲಕುಂಭವನ್ನು ದುರಸ್ತಿ ಮಾಡದಿರುವುದು ವಿಪರ್ಯಾಸವೆ ಸರಿ.ಜಲಕುಂಭದ ಸೂತ್ತಲು ಮುಳ್ಳುಕಂಟಿಗಳು ಬೆಳೆದುಕೊಂಡಿರುವದರಿಂದ ವಿಷಕಾರಿ ಹುಳಗಳ ಅಜಿಂಕೆಯು ಸಾರ್ವಜನಿಕರಿಗಿದೆ.ಸುಮಾರು 15 ವರ್ಷಗಳ ಹಿಂದೆ ನಿರ್ಮಾಣವಾದ ಜಲಕುಂಭ ಈಗ ಬಿರುಕು ಬಿಟ್ಟು ಈಗಲೋ ಆಗಲೋ ಬಿಳುವ ಸ್ಥಿತಿಯಲ್ಲದೆ.ಹಾಗಾಗಿ ಅನಾಹುತ ಸಂಭವಿಸುವ ಅಪಾಯವಿದೆ.ಜಲಕುಂಭಕ್ಕೆ ಅಳವಡಿಸಿರುವ ಮೇಲೆರುವ ಏಣಿಯು ಹಾಲಾಗಿದೆ. ಒಂದು ವೇಳೆ ಮೇಲೆ ಎರಿದರೆ ಬಿಳುವ ಸ್ಥಿತಿಯಿದೆ.
ಈ ಸಮಸ್ಯದ ಕುರಿತು ಗ್ರಾಮದ ಪ್ರಮುಖರು ಹಲವು ಬಾರಿ ಸಂಬಂದಿಸಿದ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೆ ಪ್ರಯೋಜನವಾಗಿಲ್ಲ.ಜಲಕಂಭಕ್ಕೆ ನೀರು ಸರಬರಾಜು ಆಗುತ್ತದೆ.ಆದರೆ ಜಲಕುಂಭವನ್ನು ಸಂಬದಿಸಿದವರು ಯಾವಾಗಲು ಸ್ವಚ್ಚ ಗೊಳಿಸಿಲ್ಲವೆಂಬುವುದು ಸಾರ್ವಜನಿಕರು ಅಭಿಪ್ರಾಯವಾಗಿದೆ.ಶಿಥಿಲಗೊಂಡ ಜಲಕುಂಭವು ರಸ್ತೆಯ ಬದಿಯಲ್ಲಿವಿರುವದರಿಂದ ರಸ್ತೆಯ ಮುಲಕ ನಿತ್ಯ ಜನರು ಹಾಗು ಶಾಲಾ ಮಕ್ಕಳು ಹಾಯುವುದರಿಂದ ಅಪಾಯವೇ ಜಾಸ್ತಿ.

** ಈ ಜಲಕುಂಭವು ಹಲವು ವರ್ಷದಿಂದ ಶೀಥಿಲಗೊಂಡಿದೆ ಅಧಿಕಾರಿಗಳಿಗೆ ತಿಳಿಸಿದರು ಯಾವುದೆ ಪ್ರಯೋಜನವಾಗಿಲ್ಲ. ಇನ್ನಾದರು ದುರಸ್ತಿ ಮಾಡಿಸಿದರೆ ಅಪಾಯ ತಪ್ಪಿಸಿದಂತಾಗುತ್ತದೆ. —-ಗ್ರಾ ಪಂ ಸದಸ್ಯ ಬಿ ಆರ್ ಡಂಗಿ.

loading...

LEAVE A REPLY

Please enter your comment!
Please enter your name here