ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದು : ಜಾವೀದ್ ಜಮಾದಾರ

0
113
loading...


ವಿಜಯಪುರ, : ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯುವ ಶಕ್ತಿಯ ಪಾತ್ರ ಮತ್ತು ಜವಾಬ್ದಾರಿ ಮಹತ್ವದಾಗಿದೆ. ಯುವಕರು ಎನ್.ಸಿ.ಸಿ. ತರಬೇತಿ ಪಡೆದು ರಾಷ್ಟ್ರ ರಕ್ಷಣೆಗೆ ಪಣ ತೊಡಬೇಕೆಂದು ರಾಷ್ಟ್ರ ಪ್ರಶಸ್ತಿ ಪುರಸ್ಕøತ, ಯುವ ಕಾರ್ಯ ಮತ್ತು ಕ್ರೀಡಾ ಇಲಾಖೆ ಸಲಹಾ ಸಮಿತಿ ಸದಸ್ಯ ಜಾವಿದ ಜಮಾದಾರ ಕರೆ ನೀಡಿದರು.
ನಗರದ ಎಸ್.ಎಸ್. ಜ್ಯೂನಿಯರ್ ಕಾಲೇಜ್ ಮೈದಾನದಲ್ಲಿ 36 ಕರ್ನಾಟಕ ಬಟಾಲಿಯನ್ ಆಯೋಜಿಸಿದ ರಾಷ್ಟ್ರೀಯ ಎನ್.ಸಿ.ಸಿ. ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಏಕತೆ ಸಮಗ್ರತೆ ಕಾಪಾಡಲು ಭಯೋತ್ಪಾದನೆ ಹತ್ತಿಕ್ಕಲು ಎನ್.ಸಿ.ಸಿ. ವಿದ್ಯಾರ್ಥಿಗಳುÀ ಸಕ್ರಿಯ ಪಾತ್ರ ವಹಿಸಬೇಕೆಂದರು.
ಯುವಕರಲ್ಲಿ ಸೇವಾ ಮನೋಭಾವನೆ ಎನ್.ಸಿ.ಸಿ. ತರಬೇತಿಯಿಂದ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನದ ಜೊತೆಗೆ ರಾಷ್ಟ್ರದ ರಕ್ಷಣೆಗೆ ಪ್ರೇರಣೆ ನೀಡುತ್ತದೆ. ಹಾಗೂ ಶಿಸ್ತು, ಸಮಯಪ್ರಜ್ಞೆ ಕರ್ತವ್ಯ ನಿಷ್ಠೆ ಗುಣಗಳು ಬೆಳೆಯುತ್ತವೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಆಯ್.ಬಿ. ಕಾಳಪ್ಪನವರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಎಲ್ಲ ಸಾಮಥ್ರ್ಯ ಇದ್ದರೂ ಪರಿಪೂರ್ಣ ವ್ಯಕ್ತಿಯಾಗಲು ಎನ್.ಸಿ.ಸಿ. ತರಬೇತಿ ಅವಶ್ಯಕ ಇದರಿಂದ ಮಕ್ಕಳಲ್ಲಿ ನಾಯಕತ್ವ ಗುಣ ಪರಸ್ಪರ ಸಹೋದರತೆಯ ಭಾವನೆ ಬೆಳೆಯುತ್ತದೆ ಎಂದರು.
36 ಕರ್ನಾಟಕ ಬಟಾಲಿಯನ ಅಧಿಕಾರಿ ಮೇಜರ್ ಮಾಣಿಕ ಥೋರಾಟ ಕ್ಯಾಪ್ಟನ್ ಎಸ್.ಐ.ಎಸ್. ಹಮೀದ ಚೀಪ್ ಆಫೀಸರ್ ಬಿ.ಎಂ. ಇಂಡಿ ಲೆಪ್ಟಿನೆಂಟ್ ಮಹಾಂತೇಶ ಕನ್ನೂರ, ಸುಬೇದಾರ ದಿನೇಶ ಸಿಂಗ್, ಸುಬೇದಾರ ಅಜಯಸಿಂಗ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ರಾಷ್ಟ್ರ ರಕ್ಷಣೆಯ ಪ್ರತಿಜೆÐದೈದರು.
ದೆÉಹಲಿಯಲ್ಲಿ ರಾಷ್ಟ್ರಮಟ್ಟದ ಭೂಸೈನ್ಯ ಕ್ಯಾಂಪದಲ್ಲಿ ಪಾಲ್ಗೊಂಡ ಜಿಲ್ಲೆಯ ಕ್ಯಾಡೆಟ್‍ಗಳಾದ ಅಶ್ವಿನಿಮಠ, ರೇಖಾ ಹಾದಿಮನಿ, ಶ್ರೀಧರ ಬುಸೇರಿ, ಜಿ.ಬಿ. ದೇಸಾಯಿ ಮತ್ತು ಎನ್.ಸಿ.ಸಿ. ಯ ರಾಷ್ಟ್ರ ಮಟ್ಟದ ಕಬ್ಬಡ್ಡಿ ತಂಡದಲ್ಲಿ ಭಾಗವಹಿಸಿದ ಪೈಗಂಬರ ಬಸರಿಗೆ ಸುಧಾರಾಣಿ ಭೋಸಲೆ ಶ್ರೀದೇವಿ ಮೊರೆ ಅವರನ್ನು ಸನ್ಮಾನಿಸಲಾಯಿತು.
ಲೆಪ್ಟಿನೆಂಟ್ ಗಿರೀಶ ಅಕಮಂಚಿ ಸ್ವಾಗತಿಸಿದರು. ಕೊನೆಗೆ ಪಸ್ಟ್ ಆಫೀಸರ ರಜಿಯಾಬೇಗಂ ವಂದಿಸಿದರು.

loading...

LEAVE A REPLY

Please enter your comment!
Please enter your name here